HEALTH TIPS

ನೇಪಾಳ ಜಲಪ್ರಳಯ: ಕಾಸರಗೋಡಿನ ಐವರು ಸೇರಿದಂತೆ ಕೇರಳದ 36 ಮಂದಿ ಸುರಕ್ಷಿತ

ಕಾಸರಗೋಡು: ನೇಪಾಳದಲ್ಲಿ ಉಂಟಾದ ಜಲಪ್ರಳಯ ಪ್ರದೇಶದಲ್ಲಿ ಕಾಸರಗೋಡು ಜಿಲಲೆಯ ಐವರು ಸೇರಿದಂತೆ ಕೇರಳದ 36ಮಂದಿ ಸುರಕ್ಷಿತರಾಗಿದ್ದು, ಆತಂಕಪಡಬೇಕಾಗಿಲ್ಲ ಎಂದು ನೋರ್ಕಾ ರೂಟ್ಸ್ ಸಿಇಓ ರಾಜೇಶ್ ಮಾಧವನ್ ತಿಳಿಸಿದ್ದಾರೆ. 


ಕಾಸರಗೋಡು ಜಿಲ್ಲೆಯ 5 ಮಂದಿ ಸೇರಿದಂತೆ 36 ಮಂದಿ ಒಳಗೊಂಡ ಕೇರಳದ ಪ್ರವಾಸಿಗರ ತಂಡ ಆಗೋಸ್ಟ್ 23ರಂದು ಎರ್ನಾಕುಲಂನಿಂದ ನೇಪಾಳಕ್ಕೆ ಪ್ರಯಾಣಿಸಿದೆ. ಬುಧವಾರ ¨ಳಗ್ಗೆ ಇವರು ವಾಹನದಲ್ಲಿ ಕಾಠ್ಮಂಡುವಿಗೆ ಹೋಗುತ್ತಿರುವ ದಾರಿ ಮಧ್ಯೆ ಭೀಕರ ಪ್ರವಾಹ ಸಂಭವಿಸಿದೆ. ಸುಮಾರು 200ಮೀ.ದೂರದಿಂದ ಭಾರೀಪ್ರಳಯದ ದೃಶ್ಯ ಕಂಡುಬಂದ ಹಿನ್ನೆಲೆಯಲ್ಲಿ ಬಸ್ಸನ್ನು ಹಿಂದಕ್ಕೆ ತಿರುಗಿಸಿರುವುದರಿಂದ ಸಂಭಾವ್ಯ ದುರಂತದಿಂದ ಪಾರಾಗಿ ಬಂದಿರುವುದಾಗಿ ಬಸ್ಸಿನಲ್ಲಿದ್ದವರು ತಮ್ಮ ಸಂಬಂಧಿಕರಿಗೆ ತಿಳಿಸಿದ್ದರು. 

ತಂಡದಲ್ಲಿ ಕಾಸರಗೋಡಿನ ನಿವೃತ್ತ ಎಸ್.ಐ ಪ್ರದೀಪ್ ಕುಮಾರ್, ಪೆರಿಯ ಪಾಲಿಟೆಕ್ನಿಕ್ ಪ್ರಾಧ್ಯಾಪಕ ರಾಜನ್, ಚೆರ್ವತ್ತೂರು ವಲಿಯಪೆÇಯಿಲಿನ ಅಜಿಲ್ ಸೇರಿದಂತೆ ಐದು ಮಂದಿ ಕಾಸರಗೋಡು ನಿವಾಸಿಗಳಿದ್ದರು.  

ರಾಜ್ಯ ಸರ್ಕಾರದ ಸಹಾಯವಾಣಿ:

ನೇಪಾಳದಲ್ಲಿ ಸಂಕಷ್ಟ ಎದುರಿಸುತ್ತಿರುವ ಕೇರಳೀಯರ ಸೌಕರ್ಯಕ್ಕಾಗಿ ರಾಜ್ಯ ಸರ್ಕಾರ ಟೋಲ್ ಫ್ರೀ ಸಹಾಯವಾಣಿ ಸ್ಥಾಪಿಸಿಸಿದೆ. 1070 ಟೋಲ್ ಫ್ರೀ ನಂಬರ್ ಹೊರತಾಗಿ 9447111844 ಹಾಗೂ 9747132147 ಎಂಬ ಸಹಾಯವಾಣಿ ಸಂಖ್ಯೆಯನ್ನೂ ನೀಡಲಾಗಿದೆ. ಈ ಸಂಖ್ಯೆಗಳನ್ನು ಸಂಪರ್ಕಿಸಿದಲ್ಲಿ ಸರ್ಕಾರದಿಂದ ಅಗತ್ಯದ ನೆರವು ಲಭಿಸಲಿದೆಯೆಂದು ಮುಖ್ಯಮಂತ್ರಿ ಕಚೇರಿ ತಿಳಿಸಿದೆ.









ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries