HEALTH TIPS

ಇಂಡೊನೇಷ್ಯಾದಲ್ಲಿ ಭೂಕಂಪ: 40 ಸಾವು, ಸ್ಪೇನ್‌ನಲ್ಲೂ ಕಂಪಿಸಿದ ಭೂಮಿ

ಮೌಮೆರೆ: ಇಂಡೊನೇಷ್ಯಾದ ಕರಾವಳಿ ಮತ್ತು ಸುಮಾತ್ರಾದ ಉತ್ತರ ಭಾಗದಲ್ಲಿ ಶನಿವಾರ ಮುಂಜಾನೆ ಎರಡು ಪ್ರಬಲ ಭೂಕಂಪ ಸಂಭವಿಸಿವೆ. 40 ಜನರು ಮೃತಪಟ್ಟು, ಹಲವರು ಗಾಯಗೊಂಡಿದ್ದಾರೆ. 


ಕರಾವಳಿ ಪ್ರದೇಶದಲ್ಲಿ ಸಂಭವಿಸಿದ ಭೂಕಂಪದ ತೀವ್ರತೆ ರಿಕ್ಟರ್‌ ಮಾಪಕದಲ್ಲಿ 7.7ರಷ್ಟಿತ್ತು. ಕಂಪನದ ತೀವ್ರತೆಗೆ ದೊಡ್ಡ-ದೊಡ್ಡ ಕಟ್ಟಡಗಳೂ ಉರುಳಿಬಿದ್ದಿವೆ.

ಸ್ಥಳೀಯ ಅಧಿಕಾರಿಗಳು ಆರಂಭದಲ್ಲಿ ಸುನಾಮಿ ಎಚ್ಚರಿಕೆ ನೀಡಿದ್ದರು. ಆನಂತರ ಹವಾಮಾನ ಇಲಾಖೆ ಅದನ್ನು ತಳ್ಳಿಹಾಕಿತು.

ಪೂರ್ವ ನುಸಾ ತೆಂಗಾರದ ಎಂಡೆ ನಗರದಿಂದ 60 ಕಿ.ಮೀ. ದೂರದಲ್ಲಿ, 10 ಕಿ.ಮೀ. ಆಳದಲ್ಲಿ ಭೂಕಂಪದ ಕೇಂದ್ರಬಿಂದು ಇತ್ತು ಎಂದು ಅಮೆರಿಕದ ಭೂಸರ್ವೇಕ್ಷಣಾ ಸಂಸ್ಥೆ ತಿಳಿಸಿದೆ.

ಇದಾದ 12 ಗಂಟೆಗಳ ನಂತರ ಉತ್ತರ ಸುಮಾತ್ರಾದಲ್ಲಿ 6.4ರಷ್ಟು ತೀವ್ರತೆಯ ಭೂಕಂಪ ಸಂಭವಿಸಿದೆ. ಭೂಮಿಯ 158 ಕಿ.ಮೀ. ಆಳದಲ್ಲಿ ಕಂಪನದ ಕೇಂದ್ರ ಬಿಂದು ಇತ್ತು ಎಂದು ಜರ್ಮನಿಯ ಭೂ ವಿಜ್ಞಾನ ಸಂಶೋಧನಾ ಸಂಸ್ಥೆ ತಿಳಿಸಿದೆ.

'ಕರಾವಳಿ ಭಾಗದಲ್ಲಿ ಹೆಚ್ಚು ಪ್ರಾಣಹಾನಿ ಸಂಭವಿಸಿದೆ. ರಕ್ಷಣೆ ಮತ್ತು ತುರ್ತು ಪರಿಹಾರ ಕಾರ್ಯಕ್ಕೆ ವಿಮಾನ, ಹೆಲಿಕಾಪ್ಟರ್‌ ಮತ್ತು ಹಡಗುಗಳನ್ನು ಬಳಸಲಾಗಿದೆ. ಅವಶೇಷಗಳಡಿ ಶೋಧ ನಡೆಸಲಾಗುತ್ತಿದೆ' ಎಂದು ರಾಷ್ಟ್ರೀಯ ವಿಪತ್ತು ನಿರ್ವಹಣಾ ಸಂಸ್ಥೆ ಹೇಳಿದೆ.

'ನಾಗೆಕೆವೊ ಗ್ರಾಮದ 2,000ಕ್ಕೂ ಹೆಚ್ಚು ಜನರನ್ನು ತಾತ್ಕಾಲಿಕ ಶಿಬಿರಗಳಿಗೆ ಸ್ಥಳಾಂತರಿಸಲಾಗಿದೆ' ಎಂದು ಸಂಸ್ಥೆಯ ಅಧಿಕಾರಿಗಳು ಹೇಳಿದ್ದಾರೆ.

ಪಾಪುವಾ ನ್ಯೂಗಿನಿ:

ಶನಿವಾರ ಪಾಪುವಾ ನ್ಯೂಗಿನಿ ದ್ವೀಪ ಪ್ರದೇಶದಲ್ಲೂ ಭೂಕಂಪನ ಸಂಭವಿಸಿದೆ. ಉತ್ತರ ಕರಾವಳಿಯಲ್ಲಿ 5.8 ತೀವ್ರತೆಯ ಕಂಪನ ದಾಖಲಾಗಿದೆ ಎಂದು ಜರ್ಮನ್‌ ಭೂ ವಿಜ್ಞಾನ ಸಂಶೋಧನಾ ಸಂಸ್ಥೆ ತಿಳಿಸಿದೆ.

ಸ್ಪೇನ್‌ನಲ್ಲೂ ಕಂಪಿಸಿದ ಭೂಮಿ

ಮ್ಯಾಡ್ರಿಡ್: ಸ್ಪೇನ್‌ನ ದಕ್ಷಿಣ ಭಾಗದಲ್ಲಿರುವ ಪ್ರಸಿದ್ಧ ಪ್ರವಾಸಿ ತಾಣ ಗ್ರನಾಡದಲ್ಲಿ ಶನಿವಾರ ಮುಂಜಾನೆ ಭೂಮಿ ಕಂಪಿಸಿದೆ. ರಿಕ್ಟರ್‌ ಮಾಪಕದಲ್ಲಿ 5ರಷ್ಟು ತೀವ್ರತೆ ದಾಖಲಾಗಿದೆ ಎಂದು ರಾಷ್ಟ್ರೀಯ ಭೂವಿಜ್ಞಾನ ಸಂಸ್ಥೆ ತಿಳಿಸಿದೆ. ಈ ಭಾಗದಲ್ಲಿ ಭೂಕಂಪ ಅಪರೂಪವೇನಲ್ಲ. ಆಗಾಗ ಲಘು ಪ್ರಮಾಣದಲ್ಲಿ ಭೂಮಿ ಕಂಪಿಸುತ್ತದೆ. ಕಂಪನದ ತೀವ್ರತೆ 5ಕ್ಕೆ ಮುಟ್ಟುವುದು ಕಡಿಮೆ.

ಪದೇ ಪದೇ ಭೂಕಂಪ ಸುನಾಮಿ

17 ಸಾವಿರಕ್ಕೂ ಹೆಚ್ಚು ದ್ವೀಪಸಮೂಹಗಳ ಇಂಡೊನೇಷ್ಯಾದಲ್ಲಿ ಆಗಾಗ ಭೂಕಂಪ ಮತ್ತು ಜ್ವಾಲಾಮುಖಿ ಸಂಭವಿಸುತ್ತವೆ. 1992ರಲ್ಲಿ ಸುನಾಮಿ ಅಪ್ಪಳಿಸಿ 2500ಕ್ಕೂ ಅಧಿಕ ಜನರು ಮೃತಪಟ್ಟಿದ್ದರು. 2018ರಲ್ಲಿ ಸಂಭವಿಸಿದ್ದ ಭೀಕರ ಭೂಕಂಪದಿಂದ 4400 ಜನರು ಸಾವಿಗೀಡಾಗಿದ್ದರು. 







ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries