HEALTH TIPS

ಮೂರೂವರೆ ಕಿಲೋ ಎಂಡಿಎಂಎ, 642 ಗ್ರಾಂ ಗಾಂಜಾ ವಶ ಪ್ರಕರಣ: ಗಲ್ಫ್‍ಗೆ ಪರಾರಿಯಾಗಿದ್ದ ಆರೋಪಿ ಬಂಧನ

ಕುಂಬಳೆ:  ಮಂಜೇಶ್ವರ ಪೋಲೀಸ್ ಠಾಣೆ ವ್ಯಾಪ್ತಿಯ ಉಪ್ಪಳ ಪತ್ವಾಡಿಯಲ್ಲಿರುವ ಮನೆಯಿಂದ  ಮೂರೂವರೆ ಕಿಲೋ ಎಂಡಿಎಂಎ ಹಾಗೂ 642 ಗ್ರಾಂ ಗಾಂಜಾ ವಶಪಡಿಸಿಕೊಂಡ ಪ್ರಕರಣದಲ್ಲಿ  ಇನ್ನೋರ್ವ ಆರೋಪಿ ಸೆರೆಗೀಡಾಗಿದ್ದಾನೆ.


ಉಪ್ಪಳ ಮೊಗರು ನಿವಾಸಿ ಸುಹೈಲ್ ಎಂಬಾತನನ್ನು  ನವದೆಹಲಿಯ ವಿಮಾನ ನಿಲ್ದಾಣದಿಂದ  ಸೆರೆಹಿಡಿಯಲಾಗಿದೆ. ಮಾದಕವಸ್ತು ವಶ ಪ್ರಕರಣದಲ್ಲಿ ಆರೋಪಿಯಾದ ಸುಹೈಲ್ ಗಲ್ಫ್‍ಗೆ ಪರಾರಿಯಾಗಿದ್ದನು. ಈ ಹಿನ್ನೆಲೆಯಲ್ಲಿ ದೇಶದ ಎಲ್ಲಾ ವಿಮಾನ ನಿಲ್ದಾಣ ಗಳಿಗೂ ಪೋಲೀಸರು ಲುಕೌಟ್ ನೋಟೀಸು ಕಳುಹಿಸಿದ್ದರು. ಗಲ್ಫ್‍ನಲ್ಲಿ ಬೇರೊಂದು ಪ್ರಕರಣದಲ್ಲಿ ಸೆರೆಗೀ ಡಾದ  ಸುಹೈಲ್‍ನನ್ನು ಅಧಿಕಾರಿಗಳು ಭಾರತಕ್ಕೆ  ಕಳುಹಿಸಿದ್ದರು. ಹೊಸದಿಲ್ಲಿ ವಿಮಾನ ನಿಲ್ದಾಣದಲ್ಲಿಳಿದೊಡನೆ ಈತನನ್ನು ಅಧಿಕಾರಿಗಳು ತಡೆದು ನಿಲ್ಲಿಸಿ ಪೆÇಲೀಸರಿಗೆ ಮಾಹಿತಿ ನೀಡಿದ್ದರು. ಇದರಂತೆ ಮಂಜೇಶ್ವರ ಪೆÇಲೀಸರು ದೆಹಲಿಗೆ ತೆರಳಿ ಆರೋಪಿಯನ್ನು ವಶಕ್ಕೆ ತೆಗೆದುಕೊಂಡಿದ್ದರು.  ಕಾಸರಗೋಡು ಎಎಸ್‍ಪಿ ಅಶೋಕ್ ಅಚ್ಯುತ್‍ರ  ಮೇಲ್ನೋಟದಲ್ಲಿ ರಾಜ್ಯದ ಅತೀ ದೊಡ್ಡ ಎಂಡಿಎಂಎ ವಶ ಪ್ರಕರಣಗಳಲ್ಲೊಂದಾದ ಪತ್ವಾಡಿ ಪ್ರಕರಣವನ್ನು ತನಿಖೆ ನಡೆಸಲಾಗುತ್ತಿದೆ.

2024 ಸೆಪ್ಟಂಬರ್ 20ರಂದು ಸಂಜೆ 4 ಗಂಟೆಗೆ  ಪತ್ವಾಡಿಯ ಅಸ್ಕರ್ ಅಲಿ (28) ಎಂಬಾತನ ಮನೆಯಿಂದ ಮಾದಕ ವಸ್ತುಗಳನ್ನು ವಶಪಡಿಸ ಲಾಗಿತ್ತು. ಈ ಮನೆಗೆ ಹಗಲು-ರಾತ್ರಿ  ಅಪರಿಚಿತ ವ್ಯಕ್ತಿಗಳು ವಾಹನಗಳಲ್ಲಿ ಬಂದು ಹೋಗುತ್ತಿರುವ ಬಗ್ಗೆ ಪೋಲೀಸರಿಗೆ ಮಾಹಿತಿ ಲಭಿಸಿತ್ತು. ಇದರಿಂದ ಹಲವು ದಿನಗಳ ಕಾಲ ನಿಗಾ ಇರಿಸಿ ಪೆÇಲೀಸರು ಅಸ್ಕರ್ ಅಲಿಯ ಮನೆಗೆ ದಾಳಿ ನಡೆಸಿ ಮಾದಕವಸ್ತು ವಶಪಡಿಸಿಕೊಂಡಿದ್ದರು. ಈ ಪ್ರಕರಣದಲ್ಲಿ ಮುಖ್ಯ ಆರೋ ಪಿಗಳಲ್ಲೋರ್ವನಾದ ತಳಂಗರೆ ಬಾಂ ಗೋಡ್  ಶಬೀಬ್ ಬಾಗ್ ಹೌಸ್‍ನ ಮುಹಮ್ಮದ್ ಲಿಸಾನ್ ಅಲಿ (32) ಎಂಬಾತನನ್ನು ಎರಡು ವಾರಗಳ ಹಿಂದೆ ಕರ್ನಾಟಕದ ಮಡಿಕೇರಿ ಕುಶಾಲ ನಗರದಿಂದ ಸೆರೆಹಿಡಿಯಲಾಗಿತ್ತು.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries