ಮಂಜೇಶ್ವರ: ಕರ್ನಾಟಕ ಯಕ್ಷಗಾನ ಅಕಾಡೆಮಿ ಬೆಂಗಳೂರು, ಕಡಂಬಾರು ಶ್ರೀ ಮಹಾವಿಷ್ಣುಮೂರ್ತಿ ದೇವಸ್ಥಾನದ ಸಹಯೋಗದೊಂದಿಗೆ ಕಡಂಬಾರು ದೇವಸ್ಥಾನದಲ್ಲಿ ಇತ್ತೀಚೆಗೆ ಗಡಿನಾಡ ಯಕ್ಷ ಸಂಭ್ರಮ ಕಾರ್ಯಕ್ರಮ ಯಶಸ್ವಿಯಾಗಿ ನಡೆಸಿ ಜನಮನ ರಂಜಿಸಿತು. ತಾಳಮದ್ದಳೆ, ಸಭಾಕಾರ್ಯಕ್ರಮ. ಯಕ್ಷಗಾನ ಬಯಲಾಟ ಪ್ರಸ್ತುತಿಗೊಂಡಿತ್ತು.
ಕಡಂಬಾರು ಕ್ಷೇತ್ರದ ತಂತ್ರಿವರ್ಯರಾದ ಬ್ರಹ್ಮಶ್ರೀ ದಿನೇಶ ಕೃಷ್ಣ ತಂತ್ರಿ ಸಮಾರಂಭವನ್ನು ದೀಪಬೆಳಗಿಸಿ ಉದ್ಘಾಟಿಸಿದರು. ಬಳಿಕ ವಿಠಲ ಭಟ್ ಮೊಗಸಾಲೆ ತಂಡದವರಿಂದ ತಾಳಮದ್ದಳೆ ಸುದರ್ಶನ ವಿಜಯ ಪ್ರಸ್ತುತಿಗೊಂಡಿತು.
ತಾಳಮದ್ಧಳೆ ಹಿಮ್ಮೇಳದಲ್ಲಿ ಭಾಗವತರಾಗಿ ರತ್ನಾಕರ ಆಳ್ವ ತಲಪ್ಪಾಡಿ, ಪ್ರದೀಪ ಗಟ್ಟಿ ಭಾಗವಹಿಸಿದ್ದು, ಚೆಂಡೆಮದ್ದಳೆಯಲ್ಲಿ ರಾಜಾರಾಮ ಬಳ್ಳಾಲ್ ಚಿಪ್ಪಾರು, ಕೇಶವ ಆಚಾರ್ಯ ಕಿನ್ಯ, ಅಚ್ಯತ ಪದಕಣ್ಣಾಯ ಮೂಡಂಬೈಲು, ಪ್ರಕಾಶ್ ಕಿನ್ಯ ಭಾಗವಹಿಸಿದ್ದರು. ಅರ್ಥಧಾರಿಗಳಾಗಿ ರಾಧಾಕೃಷ್ಣ ಕಲ್ಚಾರ್, ವಿಠಲ ಭಟ್ ಮೊಗಸಾಲೆ, ನಾಗರಾಜ ಪದಕಣ್ಣಾಯ ಮೂಡಂಬೈಲು, ರಾಜಾರಾಮ ರಾವ್ ಮೀಯಪದವು, ಹರಿಶ್ಚಂದ್ರ ನಾಯ್ಗ ಮಾಡೂರು ರಂಜಿಸಿದರು.
ಬಳಿಕ ಜರಗಿದ ಸಭಾಸಮಾರಂಭದಲ್ಲಿ ಕರ್ನಾಟಕ ಯಕ್ಷಗಾನ ಅಕಾಡೆಮಿ ಬೆಂಗಳೂರು ಅಕಾಡೆಮಿಯ ಅದ್ಯಕ್ಷ ಡಾ.ತಲ್ಲೂರು ಶಿವರಾಮ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ, ಕಾಸರಗೋಡು ಜಿಲ್ಲಾ ಪಂಚಾಯತ್ ಸದಸ್ಯ ಹರ್ಷದ್ ವರ್ಕಾಡಿ, ಕಡಂಬಾರು ದೇವಸ್ಥಾನದ ಆಡಳಿತ ಮೊಕ್ತೇಸರ ಸೂರ್ಯನಾರಾಯಣ ಅಯ್ಯ , ಮಹಾವಿಷ್ಣುಮೂರ್ತಿ ಸೇವಾಸಮಿತಿ ಅಧ್ಯಕ್ಷ ರಾಮಚಂದ್ರ ರಾವ್ , ಯಕ್ಷಗಾನ ಅಕಾಡೆಮಿಸದಸ್ಯರುಗಳಾದ ರಾಘವ ಹೆಚ್ ಗೇರುಕಟ್ಟೆ, ಗುರುರಾಜ ಭಟ್ ಕೈರಂಗಳ, ವಿನಯಕುಮಾರ್ ಶೆಟ್ಟಿ ಗುರುಪುರ, ಜಿ.ವಿ.ಎಸ್. ಉಳ್ಳಾಲ್ , ರಾಜೇಶ್ ಕುಳಾಯಿ, ಕೃಷ್ಣಪ್ಪ ಪೂಜಾರಿ ಕಿನ್ಯ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.. ಯಕ್ಷಗಾನ ಅಕಾಡೆಮಿ ಸದಸ್ಯ ಸತೀಶ ಅಡಪ ಸಂಕಬೈಲು ಸ್ವಾಗತಿ ಪ್ರಾಸ್ತಾವಿಕ ನುಡಿಗಳನ್ನಾಡಿ ಕಾರ್ಯಕ್ರಮ ನಿರ್ವಹಿಸಿದರು.ನಾಗರಾಜ ಪದಕಣ್ಣಾಯ ಮೂಡಂಬೈಲು ವಂದಿಸಿದರು.
ಬಳಿಕ ಯಕ್ಷಬಳಗ ಹೊಸಂಗಡಿ ಮಂಜೇಶ್ವರ ತಂಡದಿಂದ ಶ್ರೀ ವಿಷ್ಣು ಲೀಲೆ ಯಕ್ಷಗಾನ ಪ್ರದರ್ಶನ ಜರಗಿತು.
ಯಕ್ಷಗಾನ ಪ್ರದರ್ಶನದಲ್ಲಿ ಹಿಮ್ಮೇಳ ಕಲಾವಿದರಾಗಿ ಭಾಗವತಿಕೆಯಲ್ಲಿ ಸಿರಿಬಾಗಿಲು ರಾಮಕೃಷ್ಣ ಮಯ್ಯ, ಚೆಂಡೆಮದ್ದಳೆಯಲ್ಲಿ ಭಾಸ್ಕರ ಕೋಳ್ಯೂರು, ಜಿತೇಶ್ ದೇವಾಡಿಗ ಕೋಳಿಯೂರು, ಲವ ಆಚಾರ್ಯ ಐಲ ಪಾಲ್ಗೊಂಡಿದ್ದು, ಪಾತ್ರವರ್ಗದಲ್ಲಿ ಖ್ಯಾತ ಕಲಾವಿದರಾದ ಡಿ.ಮನೋಹರ್ ಕುಮಾರ್,ಅಂಬಾ ಪ್ರಸಾದ್ ಪಾತಾಳ, ಹರೀಶ್ ಶೆಟ್ಟಿ ಮಣ್ಣಾಪು, ಗಣೇಶ ಪಾಲೆಚ್ಚಾರ್, ಲಕ್ಷ್ಮ ಕುಮಾರ್ ಮರಕಡ ಮೇಳೈಸಿದ್ದರು.


.jpg)
