HEALTH TIPS

ಜಿಲ್ಲೆಯಾದ್ಯಂತ ರೈತ ದಿನಾಚರಣೆ ಉದ್ಘಾಟನೆ

ಕಾಸರಗೋಡು: ಜಿಲ್ಲೆಯಲ್ಲಿ ರೈತ ದಿನಾಚರಣೆಯನ್ನು ಅದ್ದೂರಿಯಾಗಿ ಆಚರಿಸಲಾಯಿತು. ವಿವಿಧ ಗ್ರಾಮ ಪಂಚಾಯಿತಿಗಳಲ್ಲಿ ನಡೆದ ದಿನಾಚರಣೆ ಕಾರ್ಯಕ್ರಮಗಳನ್ನು ಶಾಸಕರು ಉದ್ಘಾಟಿಸಿದರು. ವಿವಿಧ ಸ್ಥಳೀಯಾಡಳಿತ ಸಂಸ್ಥೆಗಳಲ್ಲಿ ರೈತರನ್ನು ಸನ್ಮಾನಿಸಲಾಯಿತು. 




ಕುಂಬಳೆ ಗ್ರಾಮ ಪಂಚಾಯಿತಿಯಲ್ಲಿ ನಡೆದ ರೈತ ದಿನಾಚರಣೆಯನ್ನು ಶಾಸಕ ಎ.ಕೆ.ಎಂ. ಅಶ್ರಫ್ ಉದ್ಘಾಟಿಸಿದರು. ಈ ವರ್ಷದ ರೈತ ದಿನಾಚರಣೆಯನ್ನು ಕುಂಬಳೆ ಗ್ರಾಮ ಪಂಚಾಯಿತಿ ಮತ್ತು ಕುಂಬಳೆ ಕೃಷಿ ಭವನದ ಜಂಟಿ ಆಶ್ರಯದಲ್ಲಿ ಕುಂಬಳೆ ಸೇವಾ ಸಹಕಾರಿ ಬ್ಯಾಂಕ್ ಸಭಾಂಗಣದಲ್ಲಿ ನಡೆಸಲಾಯಿತು. ಕುಂಬಳೆ ಗ್ರಾಮ ಪಂಚಾಯಿತಿ ಅಧ್ಯಕ್ಷ ವಿ.ಪಿ. ಅಬ್ದುಲ್ ಖಾದರ್ ಅಧ್ಯಕ್ಷತೆ ವಹಿಸಿದ್ದರು. ಸಮಾರಂಭದಲ್ಲಿ ಅತ್ಯುತ್ತಮ ರೈತರನ್ನು ಸನ್ಮಾನಿಸಲಾಯಿತು. ಬಳಿಕ, ಕೇರಳ ಗ್ರಾಮೀಣ ಬ್ಯಾಂಕ್ ಪ್ರಾದೇಶಿಕ ವ್ಯವಸ್ಥಾಪಕಿ ಶಿಮ್ನಾ ಚಂದ್ರ ಕಿಸಾನ್ ಕಾರ್ಡ್ ಕುರಿತು ತರಗತಿ ನಡೆಸಿದರು. ಸ್ಥಳೀಯಾಡಳಿತ ಸಂಸ್ಥೆಗಳ ಪ್ರತಿನಿಧಿಗಳು ಮತ್ತು ಅಧಿಕಾರಿಗಳು ಭಾಗವಹಿಸಿದ್ದರು. ಕೃಷಿ ಅಧಿಕಾರಿ ನಾಣುಕುಟ್ಟನ್ ಮಾತನಾಡಿದರು. ಕಾರ್ಯಕ್ರಮದಲ್ಲಿ ಸಹಾಯಕ ಕೃಷಿ ಅಧಿಕಾರಿ ಶ್ರೀಹರಿ ವಲ್ಲಿಯನ್ ವಂದಿಸಿದರು.

ಬದಿಯಡ್ಕ ಗ್ರಾಮ ಪಂಚಾಯತಿಯಲ್ಲಿ ನಡೆದ ರೈತ ದಿನಾಚರಣೆಯನ್ನು ಶಾಸಕ ಕಲ್ಲಟ್ರ ಮಾಹಿನ್ ಉದ್ಘಾಟಿಸಿದರು. ಬದಿಯಡುಕ್ಕ ಕೃಷಿ ಭವನದ ನೇತೃತ್ವದಲ್ಲಿ ಕನ್ಯಾನ ಕನ್ವೆನ್ಷನ್ ಹಾಲ್‍ನಲ್ಲಿ ರೈತ ದಿನಾಚರಣೆಯನ್ನು ಆಚರಿಸಲಾಯಿತು. ಬದಿಯಡ್ಕ ಗ್ರಾಮ ಪಂಚಾಯತಿ ಅಧ್ಯಕ್ಷ ಡಿ. ಶಂಕರ ಅಧ್ಯಕ್ಷತೆ ವಹಿಸಿದ್ದರು. ಎಟಿಎಂ ಪ್ರಭಾರ ಎಡಿಪಿಡಿ ಶೆರಿನ್ ಮುಲ್ಲರ್ ಅವರು ತರಕಾರಿ ಕೃಷಿಯ ಕುರಿತು ಜಾಗೃತಿ ತರಗತಿಯನ್ನು ನಡೆಸಿದರು. ಉಪ ನಿರ್ದೇಶಕಿ ಪಿ.ವಿ. ಅರ್ಗಿತಾ ಯೋಜನೆಯನ್ನು ವಿವರಿಸಿದರು. ಸ್ಥಳೀಯಾಡಳಿತ ಇಲಾಖೆಯ ಪ್ರತಿನಿಧಿಗಳು ಮತ್ತು ಅಧಿಕಾರಿಗಳು ಭಾಗವಹಿಸಿದ್ದರು. ಬದಿಯಡ್ಕ  ಕೃಷಿ ಅಧಿಕಾರಿ ಬಿಂದು ಜಾರ್ಜ್ ಸ್ವಾಗತಿಸಿ, ಸಹಾಯಕ ಕೃಷಿ ಅಧಿಕಾರಿ ಸಿ. ಮೋಹನನ್ ವಂದಿಸಿದರು.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries