ಭಾರತವು 2026 ಆಗಸ್ಟ್ 15ರಂದು ತನ್ನ 80ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸುತ್ತಿರುವ ಹಿನ್ನೆಲೆಯಲ್ಲಿ ವಿಶೇಷ ಡೂಡಲ್ ತಯಾರಿಸುವ ಜೊತೆಗೆ ಗೂಗಲ್ ಆಚರಣೆಯಲ್ಲಿ ಸೇರಿಕೊಂಡಿದೆ.
ಗೂಗಲ್ ನ ಮುಖಪುಟದಲ್ಲಿರುವ ವರ್ಣರಂಜಿತ ಡೂಡಲ್ ಭಾರತೀಯ ಜವಳಿಗಳಿಂದ ಪ್ರೇರಿತವಾದ ವಿನ್ಯಾಸಗಳನ್ನು ಪ್ರದರ್ಶಿಸುವ ಮೂಲಕ ಭಾರತದ ಶ್ರೀಮಂತ ಸಂಸ್ಕೃತಿ, ಸಂಪ್ರದಾಯಗಳು ಮತ್ತು ವೈವಿಧ್ಯತೆಯನ್ನು ಎತ್ತಿ ತೋರಿಸಿದೆ.
ವಿಶೇಷ ಡೂಡಲ್ ಸಾಮಾನ್ಯ ಗೂಗಲ್ ಲೋಗೋದ ಬದಲಿಗೆ ಮಿನುಗುವ ಬಣ್ಣಗಳು, ಸಾಂಪ್ರದಾಯಿಕ ಜರತಾರಿಯಂತಹ ಲಕ್ಷಣಗಳು ಮತ್ತು ವಿವರವಾದ ವಿನ್ಯಾಸಗಳಿಂದ ತುಂಬಿದ ಕಲಾತ್ಮಕತೆಯನ್ನು ಪ್ರದರ್ಶಿಸಿದೆ. ಡೂಡಲ್ ಪರಿಚಿತ ಗೂಗಲ್ ಅಕ್ಷರಗಳಿಗೆ ವಿಶಿಷ್ಟ ಭಾರತೀಯ ಸ್ಪರ್ಶವನ್ನು ನೀಡಿದ್ದು, ದೇಶದ ವರ್ಣರಂಜಿತ ಸಾಂಸ್ಕೃತಿಕ ಪರಂಪರೆಯನ್ನು ಪ್ರತಿಬಿಂಬಿಸಿದೆ. ಭಾರತದ ಶ್ರೀಮಂತ ಸಾಂಸ್ಕೃತಿಕ ಪರಂಪರೆಯನ್ನು ಪ್ರತಿಬಿಂಬಿಸಲು ರಚಿಸಲಾದ ಡೂಡಲ್ ಜವಳಿ ಪ್ರೇರಿತ ವಿನ್ಯಾಸಗಳು ಮತ್ತು ಸಾಂಪ್ರದಾಯಿಕ ಕಲಾತ್ಮಕ ಅಂಶಗಳನ್ನು ಒಳಗೊಂಡಿದೆ.
ಗೂಗಲ್ ಹೇಳಿರುವ ಪ್ರಕಾರ, ಈ ಚಿತ್ರವನ್ನು ಹೊಸದಿಲ್ಲಿ ಮೂಲದ ಕಲಾವಿದೆ ಮತ್ತು ಗ್ರಾಫಿಕ್ ಡಿಸೈನರ್ ನಮ್ರತಾ ಕುಮಾರ್ ರಚಿಸಿದ 2023ರ ಐಕಾನಿಕ್ ಡೂಡಲ್ ಅನ್ನು ಮಾರ್ಪಡಿಸಿ ಮರುಬಿಡುಗಡೆ ಮಾಡಲಾಗಿದೆ. 2026ರ ಆವೃತ್ತಿಗಾಗಿ ಗೂಗಲ್ ಡಿಜಿಟಲ್ ಜವಳಿ ನಮೂನೆಗಳ ಮೇಲೆ ಅಪ್ಡೇಟ್ ಮಾಡಿದ, ಮ್ಯಾಗ್ನಿಫೈ ಮಾಡಿದ ಫಾಂಟ್ ಅನ್ನು ಪರಿಚಯಿಸಿದೆ.
ಡೂಡಲ್ ಅನ್ನು ಭಾರತದ ವಿವಿಧ ಪ್ರದೇಶಗಳು, ಸಂಸ್ಕೃತಿಗಳು ಮತ್ತು ಕರಕುಶಲ ಸಂಪ್ರದಾಯಗಳನ್ನು ಒಟ್ಟುಗೂಡಿಸುವ ನೇಯ್ದ ಬಟ್ಟೆಯಾಗಿ ಬಿಡುಗಡೆ ಮಾಡಲಾಗಿದೆ. ದೇಶದ ಸಾಂಸ್ಕೃತಿಕ ಗುರುತನ್ನು ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿರುವ ನೇಕಾರರು, ಬಣ್ಣ ಬಳಿಯುವವರು ಮತ್ತು ಮುದ್ರಕರ ತಲೆಮಾರುಗಳ ಕೊಡುಗೆಯನ್ನು ಸಹ ಇದು ಗುರುತಿಸುತ್ತದೆ.
ಭಾರತವು ಸ್ವಾತಂತ್ರ್ಯ ಗಳಿಸಿದ ನಂತರ 1947 ಆಗಸ್ಟ್ 15ರಂದು ಸಾಂಸ್ಕೃತಿಕ ಕಾರ್ಯಕ್ರಮಗಳು, ಗಾಳಿಪಟ ಹಾರಿಸುವಿಕೆ, ಮೆರವಣಿಗೆಗಳು ಮತ್ತು ಧ್ವಜಾರೋಹಣ ಸಮಾರಂಭಗಳ ಮೂಲಕ ದೇಶಾದ್ಯಂತ ಸ್ವಾತಂತ್ರ್ಯ ದಿನವನ್ನು ಉತ್ಸಾಹದಿಂದ ಆಚರಿಸಲಾಗುತ್ತದೆ. ಈ ಸಂದರ್ಭದಲ್ಲಿ ಗೂಗಲ್ ಪ್ರತಿ ವರ್ಷ ವಿಶೇಷ ಡೂಡಲ್ ಆಚರಣೆಗಳ ಮೂಲಕ ವರ್ಣರಂಜಿತ ಡಿಜಿಟಲ್ ಗೌರವವನ್ನು ನೀಡುತ್ತದೆ.

