HEALTH TIPS

ಅಮೆಜಾನ್ ಕಾಡು ಉಳಿಸಲು ಐದು ದೇಶಗಳ ಪೊಲೀಸರ ಕಸರತ್ತು; 893 ಜನರ ಬಂಧನ

ಮಳೆಕಾಡು ಅಮೆಜಾನ್‌ನಲ್ಲಿ ಅಕ್ರಮ ಗಣಿಗಾರಿಕೆ, ಮರಗಳ ಕಳ್ಳ ಸಾಗಾಣಿಕೆ ಹಾಗೂ ಅನಧಿಕೃತ ಕಾಡಿನ ಒತ್ತುವರಿ ಆರೋಪದ ಮೇಲೆ 893 ಜನರನ್ನು ಪೊಲೀಸರು ಬಂಧಿಸಿದ್ದಾರೆ. 

ಬೊಲಿವಿಯಾ, ಬ್ರೆಜಿಲ್, ಕೊಲಂಬಿಯಾ, ಈಕ್ವೆಡಾರ್ ಹಾಗೂ ಪೆರು ದೇಶದ ಅಧಿಕಾರಿಗಳ ಸಹಭಾಗಿತ್ವದಲ್ಲಿ ಈ ಕಾರ್ಯಾಚರಣೆ ಯನ್ನು ನಡೆಸಲಾಗಿತ್ತು.

ಜುಲೈ 15 ರಿಂದ 31ರವರೆಗೆ ನಡೆದ ಈ ಕಾರ್ಯಾಚರಣೆಗೆ 'ಆಪರೇಷನ್ ಗ್ರೀನ್ ಶೀಲ್ಡ್ 2026' ‌ಎಂಬ ಹೆಸರನ್ನು ಇಡಲಾಗಿದೆ. ಈ ಕಾರ್ಯಾಚರಣೆಯಲ್ಲಿ 3,600ಕ್ಕೂ ಹೆಚ್ಚು ಪೊಲೀಸ್‌ ಅಧಿಕಾರಿಗಳು ಭಾಗಿಯಾಗಿದ್ದರು.

ಇದೇ ವೇಳೆ 2.2 ಲಕ್ಷ ಟನ್ ತೂಕದ ಮರದ ದಿಮ್ಮಿಗಳು, 195 ಮೆಟ್ರಿಕ್ ಟನ್ ತೂಕದ ಚಿನ್ನ, ಕಬ್ಬಿಣ ಮತ್ತು ತಾಮ್ರದಂತಹ ಲೋಹಗಳು ಹಾಗೂ ಅಕ್ರಮ ಗಣಿಗಾರಿಕೆ ನಡೆಸಲು ಬಳಸಿದ್ದ ಯಂತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕಾರ್ಯಾಚರಣೆ ವೇಳೆ 3,000ಕ್ಕೂ ಹೆಚ್ಚು ಜೀವಂತ ವನ್ಯಜೀವಿಗಳನ್ನು ರಕ್ಷಿಸಲಾಗಿದೆ. ಆ ಪೈಕಿ ಹಾವು, ವಿವಿಧ ಜಾತಿಯ ಪಕ್ಷಿಗಳು, ಹಲ್ಲಿಗಳು ಮತ್ತು ಮೀನುಗಳು ಸೇರಿವೆ. ಇದರ ಜೊತೆ 430 ಮೃತ ಪ್ರಾಣಿಗಳ ದೇಹ ಪತ್ತೆಯಾಗಿದೆ. ವಶಪಡಿಸಿಕೊಂಡ ಸರಕುಗಳ ಒಟ್ಟು ಮೌಲ್ಯ 200 ಮಿಲಿಯನ್ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

'ಇಂತಹ ಕೃತ್ಯಗಳನ್ನು ತಡೆಗಟ್ಟಲು ಅಂತರರಾಷ್ಟ್ರೀಯ ಸಹಕಾರದ ಅವಶ್ಯಕತೆ ಇದೆ. ಸರ್ಕಾರಿ ಸಂಸ್ಥೆಗಳು ಒಟ್ಟಾಗಿ ಕೆಲಸ ಮಾಡಿದರೆ ಮಾತ್ರ ಕಡಿವಾಣ ಹಾಕಬಹುದು' ಎಂದು ಯುಎಇ ಆಂತರಿಕ ಸಚಿವಾಲಯದ ಅಂತರರಾಷ್ಟ್ರೀಯ ವ್ಯವಹಾರಗಳ ಮಹಾನಿರ್ದೇಶಕ ಕರ್ನಲ್ ಡಾನಾ ಹುಮೈದ್ ಹೇಳಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries