ಇಸ್ಲಾಮಾಬಾದ್: ನಮಗೆ ಯುದ್ಧ ಬೇಡ. ನಾವು ಶಾಂತಿಯನ್ನು ಬಯಸುತ್ತೇವೆ. ಆದರೆ, ಇದು ನಮ್ಮ ಬಲಹೀನತೆಯಲ್ಲ ಎಂದು ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಶರೀಫ್ ಅವರು ಶುಕ್ರವಾರ(ಆ.14) ಹೇಳಿದ್ದಾರೆ.
ಪಾಕಿಸ್ತಾನದ 80ನೇ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದ ವೇಳೆ ಮಾತನಾಡಿದ ಅವರು, 'ರಾಷ್ಟ್ರೀಯ ಐಕ್ಯತೆ, ಶಾಂತಿ ಮತ್ತು ಆರ್ಥಿಕ ಬೆಳವಣಿಗೆಗೆ ನಾವು ಒತ್ತು ನೀಡುತ್ತೇವೆ.
ಪ್ರಾದೇಶಿಕ ಮತ್ತು ಜಾಗತಿಕ ಶಾಂತಿ ಕಾಪಾಡುವ ಪ್ರಯತ್ನಗಳನ್ನು ಮುಂದುವರೆಸುತ್ತೇವೆ' ಎಂದು ಹೇಳಿದ್ದಾರೆ.
ಇದೇ ವೇಳೆ ಭಾರತದ ವಿರುದ್ಧ ಕಿಡಿಕಾರಿದ ಶೆಹಬಾಜ್ ಶರೀಫ್, 'ಪಾಕಿಸ್ತಾನವು ಜಲ ಸಂಪನ್ಮೂಲ ಸೇರಿದಂತೆ, ರಾಷ್ಟ್ರೀಯ ಹಿತಾಸಕ್ತಿಯನ್ನು ಕಾಪಾಡಿಕೊಳ್ಳಲು ಬದ್ಧವಾಗಿದೆ. ಆದರೆ, ಭಾರತವು ಜಲ ಒಪ್ಪಂದಗಳನ್ನು ಏಕಪಕ್ಷೀಯವಾಗಿ ಮತ್ತು ಕಾನೂನುಬಾಹಿರವಾಗಿ ಅಮಾನತುಗೊಳಿಸುತ್ತಿದೆ. ನಮಗೆ ಬರಬೇಕಾದ ಪ್ರತಿಯೊಂದು ಹನಿ ನೀರಿನ ಮೇಲೆಯೂ ನಮ್ಮ ಹಕ್ಕಿದೆ' ಎಂದು ಹೇಳಿದ್ದಾರೆ.
ಕಳೆದ ವರ್ಷ, ಪಾಕಿಸ್ತಾನ ಮತ್ತು ಭಾರತದ ನಡುವಿನ ಕದನ ವಿರಾಮದಲ್ಲಿ ಪ್ರಮುಖ ಪಾತ್ರವಹಿಸಿದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ಧನ್ಯವಾದಗಳು ಎಂದು ಹೇಳಿದ್ದಾರೆ.

