HEALTH TIPS

ನೀಟ್: 51ನೇ ವಯಸ್ಸಿನಲ್ಲಿ ಪರೀಕ್ಷೆ ಬರೆದು ವೈದ್ಯಕೀಯ ಸೀಟು ಗಿಟ್ಟಿಸಿದ ಛಲದಂಕಮಲ್ಲ

ಚೆನ್ನೈ: ಜೀವನದುದ್ದಕ್ಕೂ ಕಲಿಯುವುದು ಇದ್ದೇ ಇರುತ್ತದೆ.. ಸಾಧನೆಗೆ ವಯಸ್ಸಿಲ್ಲ ಎಂಬ ಮಾತಿಗೆ ತಮಿಳುನಾಡಿನ ನಾಗಪಟ್ಟಣಂನ 51 ವರ್ಷದ ಸುರೇಶ್ ಕುಮಾರ್ ಉದಾಹರಣೆಯಾಗಿದ್ದಾರೆ. ಈ ವಯಸ್ಸಿನಲ್ಲಿ ಅವರು ನೀಟ್ ಪರೀಕ್ಷೆ ಪಾಸ್ ಮಾಡುವ ಮೂಲಕ ವೈದ್ಯಕೀಯ ಸೀಟು ಗಿಟ್ಟಿಸಿದ್ಧಾರೆ. 


ಎರಡು ಪಿಎಚ್‌ಡಿ ಮತ್ತು ಒಂದು ಎಂಬಿಎ ಪದವಿ ಹೊಂದಿದ್ದರೂ ಅವರ ವಿದ್ಯಾಭ್ಯಾಸದ ದಾಹ ಇಂಗಿಲ್ಲ. ವೈದ್ಯರಾಗುವ ತಮ್ಮ ಕನಸನ್ನು ನನಸಾಗಿಸಿಕೊಳ್ಳಲು ಕಷ್ಟಪಟ್ಟು ಓದಿ ನೀಟ್ ಪರೀಕ್ಷೆ ಬರೆದು ಉತ್ತೀರ್ಣರಾಗಿದ್ದಾರೆ.

ಗುರುವಾರ ಅವರಿಗೆ ತಮ್ಮ ಮನೆಗೆ ಹತ್ತಿರವಿರುವ ನಾಗಪಟ್ಟಣಂ ವೈದ್ಯಕೀಯ ಕಾಲೇಜಿನಲ್ಲಿ ಸೀಟು ದೊರೆತಿದೆ. ಇದರೊಂದಿಗೆ, 'ಪ್ಲಸ್ ಟು' (ದ್ವಿತೀಯ ಪಿಯುಸಿ) ಪೂರ್ಣಗೊಳಿಸಿದ 34 ವರ್ಷಗಳ ನಂತರ ವೈದ್ಯರಾಗುವ ತಮ್ಮ ಕನಸನ್ನು ಸಾಕಾರಗೊಳಿಸುತ್ತಿದ್ದಾರೆ.

ನಾಗಪಟ್ಟಣಂ ಜಿಲ್ಲೆಯ ವೇಲಂಕಣ್ಣಿಯವರಾದ ಸುರೇಶ್ ಕುಮಾರ್ ಅವರು, ತಮಗಿಂತ ಚಿಕ್ಕ ವಯಸ್ಸಿನ ವಿದ್ಯಾರ್ಥಿಗಳೊಂದಿಗೆ ಕಲಿಯುವ ಕುರಿತಂತೆ ಉತ್ಸಾಹ ವ್ಯಕ್ತಪಡಿಸಿದ್ದಾರೆ. ವಯಸ್ಸು ಕೇವಲ ಒಂದು ಸಂಖ್ಯೆ ಮಾತ್ರ ಎಂದು ಅವರು ನಂಬಿದ್ದಾರೆ.

ವೈದ್ಯರಾಗಬೇಕೆಂಬ ಸುರೇಶ್ ಅವರ ಮಹದಾಸೆ 34 ವರ್ಷಗಳಿಂದ ಫಲಿಸಿರಲಿಲ್ಲ. ಫಾರ್ಮಸಿಯಲ್ಲಿ ವೃತ್ತಿಪರ ಯಶಸ್ಸು ಕಂಡರೂ, ಹಲವು ಪದವಿ ಪಡೆದಿದ್ದರೂ ಅವರ ವೈದ್ಯರಾಗುವ ಆಸೆ ಕಡಿಮೆ ಆಗಿರಲಿಲ್ಲ.

1992ರಲ್ಲಿ 12ನೇ ತರಗತಿ ಪೂರ್ಣಗೊಳಿಸಿದಾಗಿನಿಂದಲೂ ವೈದ್ಯಕೀಯ ಶಿಕ್ಷಣ ಪಡೆಯುವ ಕನಸು ಕಂಡಿದ್ದಾಗಿ ಹೇಳುವ ಸುರೇಶ್, ಕೌಟುಂಬಿಕ ಜವಾಬ್ದಾರಿ ಕಾರಣದಿಂದಾಗಿ ಆರಂಭದಲ್ಲಿ ಫಾರ್ಮಸಿ (ಔಷಧ ವಿಜ್ಞಾನ) ಕ್ಷೇತ್ರವನ್ನು ಆಯ್ಕೆ ಮಾಡಿಕೊಂಡು, ಔಷಧ ಮತ್ತು ರೋಗನಿರ್ಣಯ ಉದ್ಯಮಗಳಲ್ಲಿ ವೃತ್ತಿಜೀವನವನ್ನು ರೂಪಿಸಿಕೊಂಡಿದ್ದಾಗಿ ತಿಳಿಸಿದ್ದಾರೆ.

ನೀಟ್ ಪರೀಕ್ಷೆಗೆ ಇದ್ದ ವಯೋಮಿತಿ ತೆಗೆದುಹಾಕುವ ಸುಪ್ರೀಂ ಕೋರ್ಟ್‌ನ ನಿರ್ಧಾರದಿಂದ ಉತ್ತೇಜನಗೊಂಡು, ತಮ್ಮ ದೀರ್ಘಕಾಲದ ಆಕಾಂಕ್ಷೆಯನ್ನು ಸಾಕಾರಗೊಳಿಸಲು ನಿರ್ಧರಿಸಿದ್ದಾಗಿ ತಿಳಿಸಿದ್ದಾರೆ.

'ಕೆಲಸದಲ್ಲಿದ್ದರೂ ರಾತ್ರಿ ವೇಳೆ ಅಧ್ಯಯನ ಮಾಡುತ್ತಿದ್ದೆ. ವಿಷಯದೊಂದಿಗೆ ಸಂಪರ್ಕ ಕಾಯ್ದುಕೊಳ್ಳಲು ಮಗನಿಗೆ ಜೀವಶಾಸ್ತ್ರ ಕಲಿಸುತ್ತಿದ್ದೆ'ಎಂದೂ ಅವರು ಹೇಳಿದ್ದಾರೆ.






ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries