ಇಸ್ಲಮಾಬಾದ್: ಪಾಕ್ ಆಕ್ರಮಿತ ಕಾಶ್ಮೀರದಲ್ಲಿ (ಪಿಒಕೆ) ನಡೆಯುತ್ತಿರುವ ಚುನಾವಣೆಗಳ ವರದಿಗಾರಿಕೆ ಮಾಡದಂತೆ ಪಾಕಿಸ್ತಾನ ಸರಕಾರವು ಅಂತರ್‍ರಾಷ್ಟ್ರೀಯ ಮಾಧ್ಯಮ ಸಂಸ್ಥೆಯಾದ ʼಂಟ ಎಚಿzeeಡಿಚಿ'ಗೆ ನಿರ್ಬಂಧ ಹೇರಿದೆ. ಈ ಕ್ರಮವು ಚುನಾವಣಾ ಪ್ರಕ್ರಿಯೆಯಲ್ಲಿ ಮಾಧ್ಯಮ ಸ್ವಾತಂತ್ರ್ಯ ಮತ್ತು ಪಾರದರ್ಶಕತೆಯ ಕುರಿತು ಕಳವಳವನ್ನು ಉಂಟುಮಾಡಿದೆ ಎಂದು ವ್ಯಾಪಕ ಟೀಕೆ ವ್ಯಕ್ತವಾಗಿದೆ.
`ಅಲ್ ಜಜೀರಾ ಸಂಸ್ಥೆಯು ಮುಜಫರಾಬಾದ್‍ನ `ಆಯ್ದ ಕೆಲವು ಮತಗಟ್ಟೆಗಳಿಂದ ಮಾತ್ರ ಏಕಪಕ್ಷೀಯ ವರದಿಗಾರಿಕೆ' ಮಾಡುತ್ತಿದೆ. ಜೊತೆಗೆ, ಪಿಒಕೆಯ ಚುನಾವಣಾ ಪ್ರಕ್ರಿಯೆಯನ್ನು ತಪ್ಪಾಗಿ ಬಿಂಬಿಸಲು ಈ ಮಾಧ್ಯಮ ಸಂಸ್ಥೆಯು `ವಿಶೇಷ ಸಮಯವನ್ನು ಆಯ್ಕೆ ಮಾಡಿಕೊಂಡು, ಪೂರ್ವಯೋಜಿತ ಹೇಳಿಕೆಗಳನ್ನು' ಬಳಸಿಕೊಂಡಿದೆ ಎಂದು ಪಾಕಿಸ್ತಾನ ಸರಕಾರವು ಬಿಡುಗಡೆ ಮಾಡಿದ ಹೇಳಿಕೆಯಲ್ಲಿ ಆರೋಪಿಸಲಾಗಿದೆ.
ಈ ವರದಿಗಾರಿಕೆಯನ್ನು `ಹಳದಿ ಪತ್ರಿಕೋದ್ಯಮ' ಎಂದು ಬಣ್ಣಿಸಿರುವ ಸರಕಾರ, ಚುನಾವಣೆಯ ಸಿಂಧುತ್ವವನ್ನು ಕುಗ್ಗಿಸಲು ಯತ್ನಿಸುತ್ತಿರುವ `ಸ್ವಾರ್ಥ ಹಿತಾಸಕ್ತಿಯುಳ್ಳ ಬಾಹ್ಯ ಶಕ್ತಿಗಳ' ಅಜೆಂಡಾವನ್ನು ಇದು ಪ್ರತಿಬಿಂಬಿಸುತ್ತದೆ ಎಂದು ಪ್ರತಿಪಾದಿಸಿದೆ.
ಆದರೆ, ಮತದಾನದ ಸ್ಥಳಗಳಿಂದ ವರದಿ ಮಾಡಲು ಅಂತರರಾಷ್ಟ್ರೀಯ ಸುದ್ದಿ ಸಂಸ್ಥೆಗೆ ನಿರ್ಬಂಧ ವಿಧಿಸಿರುವುದು ಸ್ವತಂತ್ರ ಮಾಧ್ಯಮ ವರದಿಗಾರಿಕೆಯನ್ನು ಹತೋಟಿಯಲ್ಲಿಡಲು ಮತ್ತು ಚುನಾವಣಾ ಸಮಯದಲ್ಲಿ ಮಾಹಿತಿಯ ಹರಿವನ್ನು ತಡೆಯಲು ನಡೆಸಿದ ಯತ್ನವನ್ನು ತೋರಿಸುತ್ತದೆ ಎಂದು ಪಿಒಕೆ ಮೂಲಗಳನ್ನು ಉಲ್ಲೇಖಿಸಿ ಸಿಎನ್‍ಎನ್-ನ್ಯೂಸ್18 ವರದಿ ಮಾಡಿದೆ.

