ನವದೆಹಲಿ: ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ದೆಹಲಿಯ ಕೆಂಪು ಕೋಟೆಯಿಂದ ಶನಿವಾರ ದೇಶವನ್ನು ಉದ್ದೇಶಿಸಿ ಮಾತನಾಡುವ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರು ಬಳಸಿದ 'ನಕ್ಸಲ್ ಮನಸ್ಥಿತಿಯವರು' (ದಿಮಾಗಿ ನಕ್ಸಲ್) ಎಂಬ ಪದ ಈಗ ರಾಜಕೀಯ ಜಟಾಪಟಿಗೆ ಕಾರಣವಾಗಿದೆ.
ಕಾಂಗ್ರೆಸ್‌ನ ಹಿರಿಯ ನಾಯಕ ಪಿ. ಚಿದಂಬರಂ ಅವರು ಈ ವಿಚಾರವಾಗಿ ಪ್ರಧಾನಿ ಮೋದಿ ವಿರುದ್ಧ ಭಾನುವಾರ ಟೀಕಾಪ್ರಹಾರ ನಡೆಸುವ ಜೊತೆಗೆ, 'ನಕ್ಸಲ್ ಮನಸ್ಥಿತಿಯವನಾಗಿರುವುದಕ್ಕೆ ನನಗೆ ಹೆಮ್ಮೆ ಎನಿಸುತ್ತದೆ' ಎಂದು 'ಎಕ್ಸ್'ನಲ್ಲಿ ಪೋಸ್ಟ್ ಮಾಡಿದ್ದಾರೆ.
ಕಾಂಗ್ರೆಸ್‌ನ ಮತ್ತೊಬ್ಬ ಮುಖಂಡ, ಪಕ್ಷದ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್, 'ತಮ್ಮನ್ನು ವಿರೋಧಿಸುವವರೆಲ್ಲರನ್ನು ಅವರು (ಮೋದಿ) ನಕ್ಸಲ್ ಮನಸ್ಥಿತಿಯವರು ಎಂದು ಕರೆಯುತ್ತಾರೆ' ಎಂದಿದ್ದಾರೆ.
ಜೈರಾಮ್ ರಮೇಶ್'ಅವರನ್ನು ಪ್ರಶ್ನಿಸುವವರನ್ನೂ ಇದೇ ವರ್ಗಕ್ಕೆ ಸೇರಿಸುತ್ತಾರೆ. ಸಾಮಾಜಿಕ ನ್ಯಾಯ ಕೇಳುವವರು ನಕ್ಸಲ್ ಮನಸ್ಥಿತಿ ಉಳ್ಳವರಾಗುತ್ತಾರೆಯೇ' ಎಂದು ಪ್ರಶ್ನಿಸಿದ್ದಾರೆ.
ಪಿ.ಚಿದಂಬರಂಕಾಕ್ರೋಚ್ ಜನತಾ ಪಾರ್ಟಿ(ಸಿಜೆಪಿ) ನೇತೃತ್ವದಲ್ಲಿ ಇತ್ತೀಚೆಗೆ ನಡೆದ ಹೋರಾಟವನ್ನು ಉಲ್ಲೇಖಿಸಿರುವ ಟಿಎಂಸಿ ಸಂಸದೆ ಮಹುವಾ ಮೊಯಿತ್ರಾ, 'ನಾನು ಹಾಗೂ ಎಲ್ಲ ಕಾಕ್ರೋಚ್‌ಗಳು ನಕ್ಸಲ್ ಮನಸ್ಥಿತಿಯವರೇ' ಎಂದು ಪ್ರತಿಕ್ರಿಯಿಸಿದ್ದಾರೆ.
ಮಹುವಾ ಮೊಯಿತ್ರಾ'ಸರ್ಕಾರವನ್ನು ಪ್ರಶ್ನಿಸಿದ ಕಾರಣಕ್ಕೆ ಯುವ ಜನತೆಯನ್ನು ನಕ್ಸಲರು ಎಂದು ಕರೆಯುವುದು ಏಕೆ' ಎಂದು ಸಿಜೆಪಿ ರಾಷ್ಟ್ರೀಯ ವಕ್ತಾರ ಸೌರವ್ ದಾಸ್ ಪ್ರಶ್ನಿಸಿದ್ದಾರೆ.
ಪ್ರಧಾನಿ ಮೋದಿ ಅವರ ಈ ಹೇಳಿಕೆಯನ್ನು ಸಮರ್ಥಿಸಿ ಸಾಮಾಜಿಕ ಜಾಲತಾಣ 'ಎಕ್ಸ್'ನಲ್ಲಿ ಪೋಸ್ಟ್ ಮಾಡಿರುವ ಕೇಂದ್ರ ಸಚಿವ ಕಿರಣ್ ರಿಜಿಜು ಯಾರನ್ನೆಲ್ಲಾ 'ನಕ್ಸಲ್ ಮನಸ್ಥಿತಿಯವರು' ಎಂದು ಪರಿಗಣಿಸಬಹುದು ಎಂಬ ವಿವರಣೆ ನೀಡಿದ್ದಾರೆ. 'ಪ್ರಧಾನಿ ಮೋದಿಯವರು ವಿರೋಧ ಪಕ್ಷಗಳ ನಾಯಕರನ್ನು ಗುರಿಯಾಗಿಸಿ ' ನಕ್ಸಲ್ ಮನಸ್ಥಿತಿಯವರು' ಎಂಬ ಪದ ಬಳಸಿಲ್ಲ. ದೇಶದಲ್ಲಿ ನಕ್ಸಲರನ್ನು ಬೆಂಬಲಿಸಿದ ಹಾಗೂ ಭಾರತದ ಸಂವಿಧಾನವನ್ನು ತಿರಸ್ಕರಿಸಿದವರನ್ನು ಉದ್ದೇಶಿಸಿ ಈ ಮಾತು ಹೇಳಿದ್ದಾರೆ' ಎಂದು ಸಚಿವ ಕಿರಣ್ ರಿಜಿಜು ಹೇಳಿದ್ದಾರೆ. 'ಪ್ರತ್ಯೇಕತಾವಾದಿಗಳ ಜೊತೆ ನಿಂತವರು ಹಾಗೂ ಸಂವಿಧಾನದ 370ನೇ ವಿಧಿಯನ್ನು ಬೆಂಬಲಿಸುವವರು ದೇಶದ ಈಶಾನ್ಯ ಭಾಗವನ್ನು ಭಾರತದಿಂದ ಪ್ರತ್ಯೇಕಿಸುವುದಕ್ಕಾಗಿ 'ಚಿಕನ್‌ನೆಕ್' ಭೂಭಾಗವನ್ನು ಕತ್ತರಿಸಬೇಕು ಎಂದು ಕರೆ ನೀಡಿದವರು ಕೂಡ ಇದೇ ವರ್ಗಕ್ಕೆ ಸೇರುತ್ತಾರೆ' ಎಂದು ಕುಟುಕಿದ್ದಾರೆ.ವಿರೋಧ ಪಕ್ಷಗಳನ್ನು ಗುರಿಯಾಗಿಸಿಕೊಂಡಿಲ್ಲ: ಕಿರಣ್ ರಿಜಿಜು

