HEALTH TIPS

ಭಾರತಕ್ಕೆ ಅಮೆರಿಕದಿಂದ ನೂರು ಮಧ್ಯಮ ದೂರಗಾಮಿ ಕ್ಷಿಪಣಿ

ನವದೆಹಲಿ: ದೇಶದ ಸೇನಾ ಶಕ್ತಿಯನ್ನು ಮತ್ತಷ್ಟು ಬಲಪಡಿಸುವ ನಿಟ್ಟಿನಲ್ಲಿ ಅಮೆರಿಕದಿಂದ 100 'ಜಾವೆಲಿನ್‌ ಟ್ಯಾಂಕ್‌ ನಿಗ್ರಹ ಕ್ಷಿಪಣಿ ವ್ಯವಸ್ಥೆ' ಖರೀದಿಸಲು ಭಾರತ ಒಪ್ಪಂದ ಮಾಡಿಕೊಂಡಿದೆ.


ಈ ಬಗ್ಗೆ ಪ್ರತಿಕ್ರಿಯಿಸಿರುವ ಭಾರತದಲ್ಲಿನ ಅಮೆರಿಕ ರಾಯಭಾರಿ ಸರ್ಗಿಯೊ ಗೊರ್‌, 'ಭಾರತದೊಂದಿಗಿನ ರಕ್ಷಣಾ ದ್ವಿಪಕ್ಷೀಯ ಪಾಲುದಾರಿಕೆಯು ಮತ್ತಷ್ಟು ಬಲಗೊಂಡಿದ್ದು, ಹೆಚ್ಚು ಪರಿಣಾಮಕಾರಿಯಾಗಿದೆ' ಎಂದಿದ್ದಾರೆ.

'ಅಮೆರಿಕದಿಂದ ವಿದೇಶಕ್ಕೆ ಶಸ್ತ್ರಾಸ್ತ್ರ ಮಾರಾಟ ಪ್ರಕ್ರಿಯೆಯ ಮೂಲಕ ಜಾವೆಲಿನ್‌ ಟ್ಯಾಂಕ್ ನಿಗ್ರಹ ಕ್ಷಿಪಣಿ ವ್ಯವಸ್ಥೆಯನ್ನು ಖರೀದಿಸುವ ಒಪ್ಪಂದಕ್ಕೆ (ಎಲ್‌ಒಎ) ಸಹಿ ಹಾಕಿರುವ ಭಾರತೀಯ ಸೇನೆಯ ನಿರ್ಧಾರವನ್ನು ಅಮೆರಿಕವು ಸ್ವಾಗತಿಸುತ್ತದೆ' ಎಂದು ಪ್ರಕಟಣೆ ತಿಳಿಸಿದೆ.

'ಉಭಯ ರಾಷ್ಟ್ರಗಳೂ ಸೇನಾ ಸಹಭಾಗಿತ್ವದಲ್ಲಿ ಮಹತ್ತರ ಮೈಲಿಗಲ್ಲು ಸಾಧಿಸಿದ್ದು, ರಕ್ಷಣಾ ಕೈಗಾರಿಕೆಯಲ್ಲಿನ ಭವಿಷ್ಯದ ಪಾಲುದಾರಿಕೆಗೂ ಬಾಗಿಲು ತೆರೆದಂತೆ ಆಗಿದೆ' ಎಂದು ಹೇಳಿದೆ.

ಮಧ್ಯಮ ದೂರಗಾಮಿ ಟ್ಯಾಂಕ್‌ಗಳನ್ನು ನಾಶಪಡಿಸಲು ಈ ಕ್ಷಿಪಣಿಗಳು ಹೆಚ್ಚು ಉಪಯುಕ್ತವಾಗಿವೆ. ಅಮೆರಿಕ ಸೇರಿದಂತೆ ಹಲವು ದೇಶಗಳು ಈಗಾಗಲೇ ಇವುಗಳನ್ನು ಬಳಸುತ್ತಿವೆ. ಒಮ್ಮೆ ಗುರಿ ಇಟ್ಟು ದಾಳಿ ಮಾಡಿದರೆ, ತಾನಾಗಿಯೇ ತೆರಳಿ ಟ್ಯಾಂಕ್‌ಗಳನ್ನು ನಾಶಪಡಿಸುವ ಸಾಮರ್ಥ್ಯವನ್ನು ಇವು ಹೊಂದಿವೆ.

ಟ್ಯಾಂಕ್‌ನ ಮೇಲ್ಭಾಗದಲ್ಲಿ ದಾಳಿ ಮಾಡುವ ಮೂಲಕ ಶತ್ರು ಪಾಳಯಕ್ಕೆ ಹೆಚ್ಚಿನ ನಾಶ ಉಂಟುಮಾಡುತ್ತವೆ. ಹೆಗಲ ಮೇಲೆ ಇಟ್ಟುಕೊಂಡು ಇವನ್ನು ಸಾಗಿಸಬಹುದು. ಆರ್‌ಟಿಎಕ್ಸ್‌ ಹಾಗೂ ಲಾಕ್‌ಹೀಡ್‌ ಮಾರ್ಟಿನ್‌ನ ಜಂಟಿ ಸಹಭಾಗಿತ್ವದಲ್ಲಿ ಜಾವೆಲಿನ್‌ ಸಂಸ್ಥೆಯು ಈ ಕ್ಷಿಪಣಿ ವ್ಯವಸ್ಥೆಯನ್ನು ಉತ್ಪಾದಿಸುತ್ತಿದೆ.

ಸುಮಾರು ₹8780.34 ಕೋಟಿ ಮೌಲ್ಯದ, ಜಿಪಿಎಸ್‌ ಬಳಸಿ ದಾಳಿ ನಡೆಸಬಲ್ಲ ಗುರಿ ನಿರ್ದೇಶಿತ ಫಿರಂಗಿಗಳು ಹಾಗೂ ಜಾವೆಲಿನ್ ಟ್ಯಾಂಕ್ ನಿಗ್ರಹ ಕ್ಷಿಪಣಿಗಳನ್ನು ಭಾರತಕ್ಕೆ ಪೂರೈಸಲು ಕಳೆದ ವರ್ಷದ ನವೆಂಬರ್‌ನಲ್ಲಿಯೇ ಅಮೆರಿಕ ಸಮ್ಮತಿಸಿತ್ತು.








ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries