ಬದಿಯಡ್ಕ: ಬದಿಯಡ್ಕ ಚಿನ್ಮಯ ವಿದ್ಯಾಲಯದಲ್ಲಿ ಗುರು ಪೂರ್ಣಿಮೆಯನ್ನು ಶ್ರದ್ಧಾಭಕ್ತಿಯಿಂದ ಆಚರಿಸಲಾಯಿತು. ಶಾಲಾ ವಿದ್ಯಾರ್ಥಿ ರಶೀಕ್ ಗುರು ಪೂರ್ಣಿಮೆಯ ಮಹತ್ವ ಹಾಗೂ ಜೀವನದಲ್ಲಿ ಗುರುವಿನ ಪಾತ್ರದ ಕುರಿತು ವಿವರಿಸಿದರು. ಬಳಿಕ ವಿದ್ಯಾರ್ಥಿಗಳು ಹಾಗೂ ಅಧ್ಯಾಪಕರು ಗುರುಸ್ತೋತ್ರ ಮತ್ತು ಭಜನೆಗಳನ್ನು ಭಕ್ತಿಭಾವದಿಂದ ಹಾಡಿದರು. ಗುರುಗಳಿಗೆ ಆರತಿ ಬೆಳಗಿಸುವ ಮೂಲಕ ನಮಿಸಲಾಯಿತು. ಗುರುವಿನ ಮಹತ್ವ ಮತ್ತು ಸಂದೇಶವನ್ನು ಸಾರುವ ಮನಮೋಹಕ ನೃತ್ಯ ಕಾರ್ಯಕ್ರಮವನ್ನು ವಿದ್ಯಾರ್ಥಿಗಳು ಪ್ರದರ್ಶಿಸಿದರು. ಮುಖ್ಯೋಪಾಧ್ಯಾಯಿನಿ ಮಾನಸ, ವಿದ್ಯಾರ್ಥಿಗಳು, ಶಿಕ್ಷಕರು ಹಾಗೂ ಬೋಧಕೇತರ ಸಿಬ್ಬಂದಿ ಉಪಸ್ಥಿತರಿದ್ದರು. ವಿದ್ಯಾರ್ಥಿನಿ ಆದ್ಯ ನಿರೂಪಿಸಿದರು.

.jpg)
