HEALTH TIPS

ಕನ್ನೆಪ್ಪಾಡಿಯಲ್ಲಿ ಫ್ರೆಂಡ್ಸ್ ಆಟೋ ಸ್ಟಾಂಡ್ ನಾಮಫಲಕ ಅನಾವರಣ

ಬದಿಯಡ್ಕ: ಬದಿಯಡ್ಕ ಗ್ರಾಮ ಪಂಚಾಯಿತಿಯ ಕನ್ನೆಪ್ಪಾಡಿಯಲ್ಲಿ ಫ್ರೆಂಡ್ಸ್ ಆಟೋ ಸ್ಟೇಂಡ್‍ನ ಉದ್ಘಾಟನೆ ಗುರುವಾರ ಬೆಳಗ್ಗೆ ಜರಗಿತು. ಗ್ರಾಮಪಂಚಾಯಿತಿ ಅಧ್ಯಕ್ಷ ಶಂಕರ ಡಿ. ನಾಮಫಲಕವನ್ನು ಅನಾವರಣಗೊಳಿಸಿ ಮಾತನಾಡಿ, ನಾಡಿನ ಸುಸ್ಥಿತಿಯನ್ನು ಕಾಯುವಲ್ಲಿ ಕನ್ನೆಪ್ಪಾಡಿಯ ಆಟೋಚಾಲಕರು ಮಾದರಿಯಾಗಿದ್ದಾರೆ. ಗ್ರಾಮ ಪಂಚಾಯಿತಿ ಹಾಗೂ ಸಾರಿಗೆ ಇಲಾಖೆಯ ಆದೇಶಗಳನ್ನು ಯಥಾವತ್ತಾಗಿ ಪಾಲಿಸುತ್ತಿದ್ದಾರೆ. ಚಾಲಕರು ನಾಡಿನ ಜನತೆಯ ಸೇವೆಯನ್ನು ಮಾಡುವುದರೊಂದಿಗೆ ಸಮಾಜಮುಖಿಯಾಗಿ ಕಾರ್ಯಪ್ರವೃತ್ತರಾಗಬೇಕು ಎಂದರು. 


ವಾರ್ಡು ಸದಸ್ಯ ಗಂಗಾಧರ ಗೋಳಿಯಡ್ಕ ಅಧ್ಯಕ್ಷತೆ ವಹಿಸಿದ್ದರು. ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಅಶ್ವಿನಿ ಕೆ.ಎಂ., ಬ್ಲಾಕ್ ಪಂಚಾಯಿತಿ ಸದಸ್ಯ ಮಹೇಶ್ ವಳಕ್ಕುಂಜ, ಆರೋಗ್ಯ ಮತ್ತು ವಿದ್ಯಾಭ್ಯಾಸ ಸ್ಥಾಯಿಸಮಿತಿ ಅಧ್ಯಕ್ಷ ಅವಿನಾಶ್ ರೈ, ಸದಸ್ಯರುಗಳಾದ ಶ್ಯಾಮಪ್ರಸಾದ ಮಾನ್ಯ, ಬಿಂದ್ಯಾ ನೀರ್ಚಾಲು, ಶ್ಯಾಮಪ್ರಸಾದ ಸರಳಿ, ಪ್ರಮುಖರಾದ ಮದನ ಮಾಡತ್ತಡ್ಕ, ಅಬ್ಬಾಸ್ ನಿಡುಗಳ ಮೊದಲಾದವರು ಪಾಲ್ಗೊಂಡಿದ್ದರು. ಫ್ರೆಂಡ್ಸ್ ಆಟೋ ಸ್ಟಾಂಡ್‍ನ ಸಂಚಾಲಕ, ಹಿರಿಯ ಚಾಲಕ ವಸಂತ ಕುಮಾರ್ ಗ್ರಾಮ ಪಂಚಾಯಿತಿ ಅಧ್ಯಕ್ಷರಿಗೆ ಶಾಲು ಹಾಕಿ ಅಭಿನಂದಿಸಿದರು. ಕಾರ್ಯದರ್ಶಿ ವಿಜಯಕುಮಾರ್ ಉರ್ಮಿ ನಿರೂಪಿಸಿದರು. ಫ್ರೆಂಡ್ಸ್ ಆಟೋ ಚಾಲಕರ ಸಂಘದ ಅಧ್ಯಕ್ಷ ಶಾಫಿ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಕೋಶಾಧಿಕಾರಿ ಸುರೇಶ್ ನಿಡುಗಳ ವಂದಿಸಿದರು.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries