ಮಧೂರು: ಕೂಡ್ಲು ಕುತ್ಯಾಳ ಶ್ರೀಗೋಪಾಲಕೃಷ್ಣ ಯಕ್ಷಗಾನ ತರಬೇತಿ ಕೇಂದ್ರದ ರಜತ ಮಹೋತ್ಸವ ಸಲುವಾಗಿ ನಾಡಿನುದ್ದಕ್ಕೂ ನಡೆಯುತ್ತಿರುವ ಸರಣಿ ಕಾರ್ಯಕ್ರಮಗಳ ಅಂಗವಾಗಿ ಇತ್ತೀಚೆಗೆ ರಜತ ರಂಗ ಸರಣಿಯ 20ನೇ ಕಾರ್ಯಕ್ರಮ ಹಾಗೂ ಹಿರಿಯ ಕಲಾವಿದರ ಸಂಸ್ಮರಣೆ ಅಂಗವಾಗಿ ಕಲಾವಿದ ಗೋಪಾಲಕೃಷ್ಣ ಶ್ಯಾನುಭೋಗ್ ಮೆಮೋರಿಯಲ್ ಟ್ರಸ್ಟ್ ಇದರ ನೇತೃತ್ವದಲ್ಲಿ ಕೂಡ್ಲು ವಿಷ್ಣುಮಂಗಲ ಶ್ರೀ ಮಹಾವಿಷ್ಣು ಕ್ಷೇತ್ರದಲ್ಲಿ ನಡೆಯಿತು. ರಾಜೇಂದ್ರ ಮಾಸ್ತರ್ ಬಜಕೂಡ್ಲು ಕೀರ್ತಿಶೇಷ ಕಲಾವಿದ ಗೋಪಾಲಕೃಷ್ಣ ಶ್ಯಾನುಭೋಗ್ ರ ಬಗ್ಗೆ ಸಂಸ್ಮರಣಾ ನುಡಿಗಳನ್ನಾಡಿ ಭಾವುಕರಾದರು.
ಬಳಿಕ ಕೇಂದ್ರದ ಸದಸ್ಯರು ಮತ್ತು ಅತಿಥಿ ಕಲಾವಿದರ ಕೂಡುವಿಕೆಯಲ್ಲಿ ತ್ರಿಶಂಕು ಸ್ವರ್ಗ ಆಖ್ಯಾನದ ಯಕ್ಷಗಾನ ತಾಳಮದ್ದಳೆ ನಡೆಯಿತು. ಭಾಗವತರಾಗಿ ರಾಮಪ್ರಸಾದ್ ಮಯ್ಯ ಕೂಡ್ಲು, ಚಂಡೆ ಮದ್ದಲೆಯಲ್ಲಿ ಮಧ್ವರಾಜ ಅಡಿಗ, ಕಿಶನ್ ಅಗ್ಗಿತ್ತಾಯ, ಚಕ್ರತಾಳದಲ್ಲಿ ಚಂದ್ರಮೋಹನ ಕೂಡ್ಲು, ಮುಮ್ಮೇಳದಲ್ಲಿ ಗೋಪಾಲಕೃಷ್ಣ ನಾಯಕ್ ಸೂರಂಬೈಲು, ವೇದಮೂರ್ತಿ ಹರಿನಾರಾಯಣ ಮಯ್ಯ, ಗುರುರಾಜ ಹೊಳ್ಳ ಬಾಯಾರು, ನವೀನಚಂದ್ರ ಶರ್ಮ ಭಾಗವಹಿಸಿದ್ದರು. ಕ್ಷೇತ್ರದ ಅನುವಂಶಿಕ ಮೊಕ್ತೇಸರ ಕೆ.ಜಿ. ಶ್ಯಾನುಭೋಗ್, ವಿಷ್ಣು ಶ್ಯಾನುಭೋಗ್ ಉಪಸ್ಥಿತರಿದ್ದರು. ನವೀನಚಂದ್ರ ಸ್ವಾಗತಿಸಿ, ಕಿಶೋರ್ ಕೂಡ್ಲು ವಂದಿಸಿದರು. ಜಗದೀಶ್ ಕೂಡ್ಲು ನಿರೂಪಿಸಿದರು. ಶಮಿತಾ ಶ್ಯಾನುಭೋಗ್ ಪ್ರಾರ್ಥಿಸಿದರು. ಪ್ರಸನ್ನ ಶ್ಯಾನುಭೋಗ್, ವೀಣಾ ಪ್ರಸನ್ನ, ಚೈತ್ರ ಶ್ಯಾನುಭೋಗ್, ಕಿರಣ್ ಕುಮಾರ್ ಪಾಯಿಚ್ಚಾಲು, ವಿಘ್ನೇಶ್ ಕಾರಂತ್ ಸಹಕರಿಸಿದರು.

.jpg)
.jpg)
