ಉಪ್ಪಳ: ಹಿರಿಯ ನಾಗರಿಕರ ಸಮಯವನ್ನು ಸೃಜನಾತ್ಮಕವಾಗಿ ಕಳೆಯುವ ಪಂಚಾಯತಿಯ ಯೋಜನೆಗಳನ್ನು ಸರ್ಕಾರದ ಹಿರಿಯ ನಾಗರಿಕರ ನೀತಿಯು ಬೆಂಬಲಿಸುತ್ತದೆ ಎಂದು ರಾಜ್ಯ ಸ್ಥಳೀಯಾಡಳಿತ ಸಚಿವ ಕೆ.ಎಂ. ಶಾಜಿ ಅವರು ಹೇಳಿದರು.
ಮಂಗಲ್ಪಾಡಿ ಪಂಚಾಯತಿ ಬಂದ್ಯೋಡು ಬಳಿಯ ಪಚ್ಚಂಬಳ ವೈಬ್ ಪಾರ್ಕ್ ಉದ್ಘಾಟಿಸಿ ಸಚಿವರು ಮಾತನಾಡುತ್ತಿದ್ದರು.
ಪಂಚಾಯತಿಯ ಈ ಯೋಜನೆಯಿಂದಾಗಿ, ಬಳಕೆಯಾಗದ ಭೂಮಿಯನ್ನು ಉಪಯುಕ್ತಗೊಳಿಸಲಾಗಿದೆ ಮತ್ತು ಯುವಕರು ಮತ್ತು ವೃದ್ಧರ ಸಂತೋಷಕ್ಕಾಗಿ ಬಳಸಬಹುದು ಎಂದು ಸಚಿವರು ಹೇಳಿದರು. ವೃದ್ಧರನ್ನು ಪ್ರತ್ಯೇಕವಾಗಿ ಬಿಡಲಾಗದು. ಪಂಚಾಯತಿಗಳು ವೃದ್ಧರ ಆರೈಕೆಯ ಜವಾಬ್ದಾರಿಯನ್ನು ತೆಗೆದುಕೊಳ್ಳಬೇಕಾಗುತ್ತದೆ ಅಂತಹದೊಂದು ಮಾದರಿ ಉಪಕ್ರಮ ಇದಾಗಿದೆ ಎಂದು ಸಚಿವರು ಶ್ಲಾಘಿಸಿದರು.
ಜಿಲ್ಲೆಯಲ್ಲಿ ಸರ್ಕಾರಿ ನೌಕರರ ಖಾಲಿ ಹುದ್ದೆಗಳನ್ನು ಭರ್ತಿ ಮಾಡಲು ಕ್ರಮಗಳನ್ನು ತೆಗೆದುಕೊಳ್ಳಲಾಗುವುದು ಎಂದು ಸಚಿವರು ಹೇಳಿದರು. ಯಾವುದೇ ಸಾರ್ವಜನಿಕ ಪ್ರತಿನಿಧಿಗಳಿಗಿಂತ ಜನರು ಪಂಚಾಯತಿ ಸದಸ್ಯರ ಮೇಲೆ ಹೆಚ್ಚು ಅವಲಂಬಿತರಾಗಿದ್ದಾರೆ ಮತ್ತು ಪಂಚಾಯತಿ ಆಡಳಿತ ಮಂಡಳಿಗಳು ಜನರ ಒಳಿತಿಗಾಗಿ ಶ್ರಮಿಸಬೇಕು ಎಂದು ಸಚಿವರು ಕರೆ ನೀಡಿದರು.
ಮಂಜೇಶ್ವರ ಶಾಸಕ ಎ.ಕೆ.ಎಂ. ಅಶ್ರಫ್ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಸಂಸದ ರಾಜಮೋಹನ್ ಉಣ್ಣಿತ್ತಾನ್ ಮುಖ್ಯ ಅತಿಥಿಯಾಗಿದ್ದರು. ಕಾರ್ಯಕ್ರಮದಲ್ಲಿ ಸಚಿವರು ಪಚ್ಚಂಬಳ ಅಭಿವೃದ್ಧಿ ಪುಸ್ತಕವನ್ನು ಬಿಡುಗಡೆ ಮಾಡಿದರು.
ಸಚಿವರು, ಸಂಸದರು, ಶಾಸಕರು, ಮಂಗಲ್ಪಾಡಿ ಗ್ರಾಮ ಪಂಚಾಯತಿ ಅಧ್ಯಕ್ಷ ಗೋಲ್ಡನ್ ಅಬ್ದುಲ್ ರೆಹಮಾನ್ ಮತ್ತು ಮಜೀದ್ ಪಚ್ಚಂಬಳ ಅವರು ಪಂಚಾಯತಿ ಆಡಳಿತ ಸಮಿತಿ ಮತ್ತು ಸಮನ್ ಆಟ್ರ್ಸ್-ಸ್ಪೋಟ್ರ್ಸ್ ಕ್ಲಬ್‍ನ ಸ್ನೇಹದ ಉಡುಗೊರೆ ಸ್ವೀಕರಿಸಿದರು.
ಮಂಜೇಶ್ವರ ಬ್ಲಾಕ್ ಪಂಚಾಯತಿ ಅಧ್ಯಕ್ಷ ಸೈಪುಲ್ಲಾ ತಂಙಳ್, ಮಂಗಲ್ಪಾಡಿ ಗ್ರಾಮ ಪಂಚಾಯತಿ ಉಪಾಧ್ಯಕ್ಷೆ ಶಮೀನಾ ಟೀಚರ್, ಜಿಲ್ಲಾ ಪಂಚಾಯತಿ ಸದಸ್ಯ ಅಝೀಝ್ ಕಳತ್ತೂರು, ಬ್ಲಾಕ್ ಪಂಚಾಯತಿ ಸದಸ್ಯ ಅಝೀಝ್ ಮರಿಕೆ, ಮಂಗಲ್ಪಾಡಿ ಗ್ರಾಮ ಪಂಚಾಯತಿ ಕ್ಷೇಮಾಭಿವೃದ್ಧಿ ಸ್ಥಾಯಿ ಸಮಿತಿ ಅಧ್ಯಕ್ಷೆ ಸುಹಾರಾ, ಅಭಿವೃದ್ಧಿ ಕಾರ್ಯಗಳ ಸ್ಥಾಯಿ ಸಮಿತಿ ಅಧ್ಯಕ್ಷೆ ಅಪೆÇೀಲೋ ಉಮ್ಮರ್, ಆರೋಗ್ಯ ಶಿಕ್ಷಣ ಸ್ಥಾಯಿ ಸಮಿತಿಯ ಅಧ್ಯಕ್ಷರಾದ ಜಿ. ಹನೀಫ್, ನಾಜಿಯಾ ಅಬ್ದುಲ್ ಅಜೀಜ್, ನಜಿಮುನೀಸಾ, ರಹಿಯಾನ ಅಬೂಬಕರ್ ತಲ್ವಾರ್, ವಸಂತ ಕುಮಾರ್, ರವೀಂದ್ರ, ಅಬ್ದುಲ್ ಹಮೀದ್ ಕಲ್ಪನಾ, ತಬ್ಸಿನಾ, ಖದೀಜತ್ ನಜೀರಾ, ಬೀಫಾತಮ್ಮ, ಎ.ಎಚ್.ಸಹೀದ್, ಅಬೂಬಕರ್ ಸಿದ್ದೀಕ್, ಕೆ.ಅಶೋಕ, ಫಾತಿಮತ್ ಸುಹರಾ, ಸಾಕ್ಷಿ, ಎನ್.ಇ.ಪಿ. ರಾಜಮೋಹನ್, ಯೋಜನಾ ಸಮಿತಿ ಉಪಾಧ್ಯಕ್ಷ ಅಬ್ದುಲ್ ರಹಮಾನ್ ಷರೀಫ್, ಕುಟುಂಬಶ್ರೀ ಸಿಡಿಎಸ್ ಅಧ್ಯಕ್ಷೆ ರುಬೀನಾ ನೌಫಲ್, ವಿವಿಧ ರಾಜಕೀಯ ಪಕ್ಷಗಳ ಮುಂಡರು ಭಾಗವಹಿಸಿದ್ದರು. ಮಂಗಲ್ಪಾಡಿ ಗ್ರಾಮ ಪಂಚಾಯತಿ ಅಧ್ಯಕ್ಷ ಗೋಲ್ಡನ್ ಅಬ್ದುಲ್ ರಹಮಾನ್ ಸ್ವಾಗತಿಸಿ, ಕಾರ್ಯದರ್ಶಿ ಕೆ.ವಿನಯರಾಜ್ ವಂದಿಸಿದರು.

.jpeg)
.jpeg)
.jpeg)
