ಕುಂಬಳೆ: ನಾಡಿನ ಅಭಿವೃದ್ಧಿಗೆ ಶೌಚಾಲಯ ಮತ್ತು ಕಟ್ಟಡಗಳನ್ನು ನಿರ್ಮಿಸುವುದು ಮಾತ್ರ ಸಾಕಾಗುವುದಿಲ್ಲ, ಅವುಗಳನ್ನು ಸ್ವಚ್ಛವಾಗಿಡುವುದು ಪ್ರತಿಯೊಬ್ಬ ನಾಗರಿಕನ ಕರ್ತವ್ಯ ಎಂದು ಸ್ಥಳೀಯಾಡಳಿತ ಇಲಾಖೆ ಸಚಿವ ಕೆ.ಎಂ. ಶಾಜಿ ಹೇಳಿದರು.
ಕುಂಬಳೆ ಗ್ರಾಮ ಪಂಚಾಯಿತಿಯ 'ಟೇಕ್ ಎ ಬ್ರೇಕ್' ಕಟ್ಟಡವನ್ನು ಶುಕ್ರವಾರ ಉದ್ಘಾಟಿಸಿ ಸಚಿವರು ಮಾತನಾಡುತ್ತಿದ್ದರು.
ಜನ ಸಾಮಾನ್ಯರ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವುದು ಸ್ಥಳೀಯಾಡಳಿತ ಇಲಾಖೆಯ ಕೆಲಸ. ಬಾಡಿಗೆಗೆ ಗೃಹೋಪಯೋಗಿ ವಸ್ತುಗಳನ್ನು ವಿತರಿಸುವ ಹಸಿರು ಕ್ರಿಯಾಸೇನೆಯ ಉಪಕ್ರಮ ಮತ್ತು ಟ್ರಾಲಿಗಳ ವಿತರಣೆಯನ್ನು ಸಚಿವ ಕೆ.ಎಂ. ಶಾಜಿ ಉದ್ಘಾಟಿಸಿದರು. ನಾಡನ್ನು ಸ್ವಚ್ಛವಾಗಿಡುವಲ್ಲಿ ಪ್ರಮುಖ ಪಾತ್ರ ವಹಿಸುವ ಹಸಿರು ಕ್ರಿಯಾಸೇನೆಯ ಪವಿತ್ರ ಕಾರ್ಯ ಶ್ಲಾಘನೀಯ ಎಂದು ಸಚಿವರು ಹೇಳಿದರು.
ಮಂಜೇಶ್ವರ ಶಾಸಕ ಎ.ಕೆ.ಎಂ. ಅಶ್ರಫ್ ಅಧ್ಯಕ್ಷತೆ ವಹಿಸಿದ್ದರು. ಸಮಾರಂಭದಲ್ಲಿ ಸಂಸದ ರಾಜ್ ಮೋಹನ್ ಉಣ್ಣಿತ್ತಾನ್ ಮುಖ್ಯ ಅತಿಥಿಯಾಗಿದ್ದರು. ನಗರಗಳ ಅಭಿವೃದ್ಧಿಯನ್ನು ಹಳ್ಳಿಗಳಲ್ಲಿಯೂ ಜಾರಿಗೆ ತಂದರೆ ಮಾತ್ರ ನಿಜವಾದ ಸ್ವಾತಂತ್ರ್ಯ ಸಾಧ್ಯ ಎಂದು ಸಂಸದ ರಾಜ್ ಮೋಹನ್ ಉಣ್ಣಿತ್ತಾನ್ ಹೇಳಿದರು. ಕುಂಬಳೆ ಗ್ರಾಮ ಪಂಚಾಯತಿ ಅಧ್ಯಕ್ಷ ವಿ.ಪಿ.ಅಬ್ದುಲ್ ಖಾದರ್ ಅವರು ಸಚಿವ ಕೆ.ಎಂ.ಶಾಜಿ ಅವರನ್ನು ಸ್ಮರಣಿಕೆ ನೀಡಿ ಗೌರವಿಸಿದರು.
ಕಾಸರಗೋಡು ಬ್ಲಾಕ್ ಪಂಚಾಯತಿ ಅಧ್ಯಕ್ಷ ಅಬ್ದುಲ್ಲ ಕುಂಞÂ್ಞ ಚೆರ್ಕಳ, ಕುಂಬಳೆ ಗ್ರಾಮ ಪಂಚಾಯತಿ ಉಪಾಧ್ಯಕ್ಷ ಎಂ.ಬಲ್ಕೀಸ್, ಮಂಜೇಶ್ವರ ಬ್ಲಾಕ್ ಪಂಚಾಯತಿ ಅಧ್ಯಕ್ಷ ಸೈಪುಲ್ಲಾ ತಂಙಳ್, ಜಿಲ್ಲಾ ಪಂಚಾಯತಿ ಸದಸ್ಯ ಅಝೀಝ್ ಕಳತ್ತೂರು, ಕಾಸರಗೋಡು ಬ್ಲಾಕ್ ಪಂಚಾಯತಿ ಅಭಿವೃದ್ಧಿ ವ್ಯವಹಾರಗಳ ಸ್ಥಾಯಿ ಸಮಿತಿ ಅಧ್ಯಕ್ಷ ಅಶ್ರಫ್ ಕಾರ್ಲೆ, ಕುಂಬಳೆ ಗ್ರಾಮ ಪಂಚಾಯತಿ ಅಭಿವೃದ್ಧಿ ವ್ಯವಹಾರಗಳ ಸ್ಥಾಯಿ ಸಮಿತಿ ಅಧ್ಯಕ್ಷ ಎ.ಕೆ. ಆರೀಫ್, ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷ ಎಂ.ಪಿ. ಖಾಲಿದ್, ಕ್ಷೇಮಾಭಿವೃದ್ಧಿ ಸ್ಥಾಯಿ ಸಮಿತಿ ಅಧ್ಯಕ್ಷ ಇನಾಸ್ ಫವಾಝ್ ಕೋಹಿನೂರು, ಕಾಸರಗೋಡು ಬ್ಲಾಕ್ ಪಂಚಾಯತಿ ಸದಸ್ಯರಾದ ಪೃಥ್ವಿರಾಜ್ ಜಗನ್ನಾಥ ಶೆಟ್ಟಿ, ಪಿ.ಎಂ. ನಸೀಮಾ ಕೊಡ್ಯಮೆ, ಕುಂಬಳೆ ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷೆ ತಾಹಿರಾ ಯೂಸುಫ್, ಗ್ರಾಮ ಪಂಚಾಯತಿ ಸದಸ್ಯರಾದ ಮಂಜುನಾಥ ಆಳ್ವ, ಜಿ.ಎಂ. ಕೌಸರ್, ಫಾತಿಮತ್ ಸೌರ, ಕೆ.ಅಮಿತಾ, ನಾಫಿಯಾ ಹುಸೇನ್, ಸುಕೇಶ್ ಭಂಡಾರಿ, ಕೆ.ಅಬ್ಬಾಸ್, ಸಬೂರ ಮೊಯ್ದು, ಕೆ.ಅಜಿತ್ ಕುಮಾರ್, ಶಾರದ, ಫಜಲ್, ಜಮೀಲಾ, ಟಿ.ಎ. ಆಯಿಷಾ, ಹಮೀದ್, ಕೆ.ಎಂ. ನಜೀರಾ, ಕೆ.ಸ್ನೇಹಾ, ಆಯಿಷತ್ ರಿಜ್ವಾನಾ, ಕಾಂಚಾರ, ರಮೇಶ್ ಭಟ್, ಕುಂಬಳೆ ಗ್ರಾಮ ಪಂಚಾಯತಿ ಯೋಜನಾ ಸಮಿತಿಯ ಉಪಾಧ್ಯಕ್ಷ ಬಿ.ಎನ್. ಮುಹಮ್ಮದ್ ಅಲಿ, ಎಲ್.ಎಸ್.ಜಿ.ಡಿ. ಅಧಿಕಾರಿ ಕೆ.ವಿ. ಹರಿದಾಸ್, ವಿವಿಧ ರಾಜಕೀಯ ಪಕ್ಷಗಳ ಪ್ರತಿನಿಧಿಗಳು ಉಪಸ್ಥಿತರಿದ್ದರು. ಕುಂಬಳೆ ಗ್ರಾಮ ಪಂಚಾಯತಿ ಅಧ್ಯಕ್ಷ ವಿ.ಪಿ. ಅಬ್ದುಲ್ ಖಾದರ್ ಸ್ವಾಗತಿಸಿ, ಕೆ.ಸಿದ್ಧಾರ್ಥ್ ವಂದಿಸಿದರು.
ಕುಂಬಳೆ ಗ್ರಾಮ ಪಂಚಾಯತಿಯ 2024-25ರ ವಾರ್ಷಿಕ ಯೋಜನೆಯ ಭಾಗವಾಗಿ ನಿರ್ಮಿಸಲಾದ ಟೇಕ್ ಎ ಬ್ರೇಕ್ ಕಟ್ಟಡವು ಮೂರು ಮಹಿಳಾ ಶೌಚಾಲಯಗಳು, ಮೂರು ಪುರುಷರ ಶೌಚಾಲಯಗಳು, ಅಂಗವಿಕಲ ಸ್ನೇಹಿ ಶೌಚಾಲಯ, ಕೆಫೆಟೇರಿಯಾ ಮತ್ತು ಮಹಿಳೆಯರಿಗೆ ಹಾಲುಣಿಸುವ ಕೊಠಡಿಯನ್ನು ಹೊಂದಿದ್ದು, ಸಾರ್ವಜನಿಕರು ಮತ್ತು ದೂರದ ಪ್ರಯಾಣಿಕರಿಗೆ ಪ್ರಯೋಜನಕಾರಿಯಾಗಲಿದೆ.

.jpeg)
.jpeg)
.jpeg)
