HEALTH TIPS

ಹೊಸ ಆಶಯಗಳಿಗೆ ಹಾದಿಮಾಡಿಕೊಟ್ಟ ಭಾರತ, ಆಫ್ರಿಕನ್ ಸಂಬಂಧ-ಕೇರಳ ಕೇಂದ್ರೀಯ ವಿವಿಯಲ್ಲಿ ಉಪನ್ಯಾಸದಲ್ಲಿ ಜೆ.ಕೆ. ತ್ರಿಪಾಠಿ ಅಭಿಪ್ರಾಯ

ಕಾಸರಗೋಡು: ಭಾರತ ಮತ್ತು ಆಫ್ರಿಕನ್ ರಾಷ್ಟ್ರಗಳ ನಡುವಿನ ಸಂಬಂಧ ಹೊಸ ಆಶಯಗಳಿಗೆ ಹಾದಿಮಾಡಿಕೊಟ್ಟಿರುವುದಾಗಿ ಮಾಜಿ ಆಫ್ರಿಕನ್ ರಾಯಭಾರಿ ಜೆ.ಕೆ. ತ್ರಿಪಾಠಿ ತಿಳಿಸಿದ್ದಾರೆ. ಅವರು ಕೇರಳದ ಕೇಂದ್ರೀಯ ವಿಶ್ವವಿದ್ಯಾಲಯದ ಅಂತಾರಾ ರಾಷ್ಟ್ರೀಯ ಸಂಬಂಧ ಮತ್ತು ರಾಜಕೀಯ ವಿಭಾಗ ವತಿಯಿಂದ ಆಯೋಜಿಸಲಾಗಿದ್ದ 'ಭಾರತ-ಆಫ್ರಿಕಾ ಸಂಬಂಧಗಳು: ಭೂತ, ವರ್ತಮಾನ ಮತ್ತು ಭವಿಷ್ಯ' ಕುರಿತು ಉಪನ್ಯಾಸ ನೀಡಿದರು. 


ಭಾರತದ ಲಸಿಕೆ ರಾಜತಾಂತ್ರಿಕತೆ, ಶಿಕ್ಷಣ ಮತ್ತು ವ್ಯಾಪಾರ ಕ್ಷೇತ್ರಗಳಲ್ಲಿನ ಸಂಬಂಧಗಳನ್ನು ಬಲಪಡಿಸುವಲ್ಲಿ ಪ್ರಮುಖ ಪಾತ್ರ ವಹಿಸಿವೆ.  2023ರಲ್ಲಿ ಭಾರತದ ಆತಿಥ್ಯದಲ್ಲಿ ನಡೆದ ಜಿ-20 ಶೃಂಗಸಭೆಯಲ್ಲಿ ಆಫ್ರಿಕನ್ ಒಕ್ಕೂಟಕ್ಕೆ ಶಾಶ್ವತ ಸದಸ್ಯತ್ವವನ್ನು ಪಡೆಯುವಲ್ಲಿ ಭಾರತ ವಹಿಸಿದ ಪ್ರಮುಖ ಪಾತ್ರವನ್ನು ಆಫ್ರಿಕನ್ ರಾಷ್ಟ್ರಗಳು ಗುರುತಿಸಿದ್ದು,  ಕೋವಿಡ್-19 ಅವಧಿಯಲ್ಲಿನ 'ವ್ಯಾಕ್ಸಿನ್ ಮೈತ್ರಿ' ಉಪಕ್ರಮದ ಮೂಲಕ, ಭಾರತವು 41 ಆಫ್ರಿಕನ್ ದೇಶಗಳಿಗೆ ಲಸಿಕೆಗಳನ್ನು ವಿತರಿಸಿದೆ. ವ್ಯಾಪಾರ ಮತ್ತು ವಾಣಿಜ್ಯ ಕ್ಷೇತ್ರದಲ್ಲಿ, 2025-26ರ ಅವಧಿಯಲ್ಲಿ ಭಾರತ ಮತ್ತು ಆಫ್ರಿಕಾ ನಡುವಿನ ದ್ವಿಪಕ್ಷೀಯ ವ್ಯಾಪಾರವು 93.69 ಶತಕೋಟಿ ಅಮೆರಿಕನ್ ಡಾಲರ್‍ಗಳನ್ನು ತಲುಪಿರುವುದಾಗಿ ಮಾಹಿತಿ ನೀಡಿದರು. 

ಆಫ್ರಿಕಾದ ಕುರಿತಾದ ತಪ್ಪು ಕಲ್ಪನೆಗಳು ಇನ್ನೂ ಉಳಿದುಕೊಂಡಿದ್ದು, ಇದರಿಂದ ಹೆಚ್ಚಿನ ಅರಿವು ಹಾಗೂ ಸಂವಹನ ಅತ್ಯಗತ್ಯ.  ಮುಂಬರುವ ವರ್ಷಗಳಲ್ಲಿ ಭಾರತ-ಆಫ್ರಿಕಾ ಸಂಬಂಧ ಮತ್ತಷ್ಟು ಬಲಗೊಳ್ಳಲಿದೆ ಎಂಬ ವಿಶ್ವಾಸವನ್ನೂ ಅವರು ವ್ಯಕ್ತಪಡಿಸಿದರು. 

ಸ್ಕೂಲ್ ಆಫ್ ಗ್ಲೋಬಲ್ ಸ್ಟಡೀಸ್‍ನ ಡೀನ್ ಪೆÇ್ರ. ಸುರೇಶ್ ರಂಗರಾಜನ್ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ವಿದ್ಯಾರ್ಥಿನಿಯರಾದ ಪಾರ್ವತಿ ಕ್ರಮವಾಗಿ ಸ್ವಾಗತಿಸಿದರು.  ಇಂದ್ರಜಾ ವಂದಿಸಿದರು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries