HEALTH TIPS

ಕಾಸರಗೋಡಿನಲ್ಲಿ ಮುಂದುವರಿದ ಮಳೆ, ಹೆಚ್ಚಿನ ಕಡಲ್ಕೊರೆತ: ಮೀನುಗಾರರಿಗೆ ಎಚ್ಚರಿಕೆ

ಕಾಸರಗೋಡು: ಕೇರಳಾದ್ಯಂತ ಬಿರುಸಿನ ಮಳೆಯಾಗುತ್ತಿದ್ದು, ಆರೆಂಜ್ ಅಲರ್ಟ್ ಹಿನ್ನೆಲೆಯಲ್ಲಿ ಶುಕ್ರವಾರ ಕಾಸರಗೋಡು ಜಿಲ್ಲಾದ್ಯಂತ ಶಿಕ್ಷಣ ಸಂಸ್ಥೆಗಳಿಗೆ ರಜೆ ಸಾರಲಾಗಿತ್ತು. ಕೇಂದ್ರ ಹವಾಮಾನ ಇಲಾಖೆ ಮುನ್ಸೂಚನೆ ಪ್ರಕಾರ ಕಾಸರಗೋಡು ಸೇರಿದಂತೆ ಕೇರಳದ ವಿವಿಧ ಜಿಲ್ಲೆಗಳಲ್ಲಿ ಶನಿವಾರವೂ ಆರೆಂಜ್ ಅಲರ್ಟ್ ಮುಂದುವರಿಯಲಿದ್ದು, ಬಿರುಸಿನ ಮಳೆಯಾಗುವ ಸಾಧ್ಯತೆಯಿದೆ.  


ಭಾರತೀಯ ರಾಷ್ಟ್ರೀಯ ಸಾಗರ ಮಾಹಿತಿ ಸೇವೆಗಳ ಕೇಂದ್ರವು(ಐಎನ್‍ಸಿಓಐಎಸ್)ಕೋಯಿಕ್ಕೋಡ್ (ಚೊಂಬಾಲಾ ಎಫ್‍ಎಚ್‍ನಿಂದ ರಾಮನಾಟ್ಟುಕರದವರೆಗೆ), ಕಣ್ಣೂರು(ವಲಪಟ್ಟಣಂನಿಂದ ನ್ಯೂ ಮಾಹೆಯವರೆಗೆ ಹಾಗೂ ಕಾಸರಗೋಡು (ಕುಂಜತ್ತೂರಿನಿಂದ ಕೊಟ್ಟಕ್ಕುನ್ನುವವರೆಗೆ) ಜಿಲ್ಲೆಗಳ ಕರಾವಳಿ ಪ್ರದೇಶಗಳಲ್ಲಿ ಸಮುದ್ರದ ಅಲೆಗಳ ಅಬ್ಬರ (seಚಿ suಡಿges) ಹೆಚ್ಚಾಟಾಗುವ ಸಾಧ್ಯತೆಯಿದೆ. ಜುಲೈ 31ರಿಂದ ಆ.1ರ ಮಧ್ಯಾಹ್ನ ವರೆಗೆ  2.8 ರಿಂದ 3.4 ಮೀಟರ್ ಎತ್ತರದ ವರೆಗೂ ಅಲೆಗಳು ಎದ್ದೇಳುವ ಸಾಧ್ಯತೆಯಿದ್ದು,  

ಈ ಕಾಲಾವಧಿಯಲ್ಲಿ ಮೀನುಗಾರರು ಸಮುದ್ರಕ್ಕೆ ತೆರಳದೆ ಜಾಗ್ರತೆ  ಪಾಲಿಸುವಂತೆ ಸೂಚಿಸಲಾಗಿದೆ. ಮೀನುಗಾರರು ಸಮುದ್ರಕ್ಕಿಳಿಯದೆ ತಮ್ಮ ದೋಣಿಗಳನ್ನು ಸುರಕ್ಷಿತವಾಗಿ ಲಂಗರು ಹಾಕಿ ಇರಿಸುವಂತೆಯೂ ಸೂಚಿಸಲಾಗಿದೆ.

ಜಿಲ್ಲೆಯಲ್ಲಿ ಮತ್ತೆ ಕಡಲ್ಕೊರೆತ ಹೆಚ್ಚಾಗಿದ್ದು, ಉಪ್ಪಳ ಶಾರದಾನಗರದಲ್ಲಿ ಮನೆಗಳು ಸಮುದ್ರಪಾಲಾಗುವ ಭೀತಿ ಎದುರಿಸುತ್ತಿದೆ. ಈಗಾಘಲೇ ಹಲವಾರ ತೆಂಗಿನ ಮರಗಳನ್ನು ಸಮುದ್ರ ತನ್ನ ಗರ್ಭದೊಳಗೆ ಸೇರಿಸಿಕೊಂಡಿದೆ. ಕಾಸರಗೋಡು ಕಾವುಗೋಳಿ ಕಡಪ್ಪುರದಲ್ಲೂ ಸಮುದರಕೊರೆತ ಹೆಚ್ಚಾಘಿದ್ದು, ಇಲ್ಲಿನ ಜನತೆ ಆತಂಕದಲ್ಲಿ ಕಾಲ ಕಳೆಯುವಂತಾಘಿದೆ.


ಉಪ್ಪಳ ಶಾರದಾನಗರದಲ್ಲಿ ಕಡಲ್ಕೊರೆತ ಹೆಚ್ಚಳಗೊಂಡಿದ್ದು, ಮನೆ ಸಮುದ್ರಪಲಗುವ ಭೀತಿಯಲ್ಲಿದೆ.


 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries