HEALTH TIPS

ಸಿಎಸ್‌ಇಎಎಂ ಒಳಗೊಂಡಿರುವ ಜಾಹೀರಾತು ಪ್ರಸಾರ: ಭಾರತದ ಕ್ಷಮೆಯಾಚಿಸಿದ ಜುಕರ್‌ಬರ್ಗ್

ನವದೆಹಲಿ: ತಮ್ಮ ಸಂಸ್ಥೆಯ ವೇದಿಕೆಗಳಲ್ಲಿ ಪ್ರಸಾರವಾದ ಮಕ್ಕಳ ಮೇಲಿನ ಲೈಂಗಿಕ ಶೋಷಣೆ ಹಾಗೂ ನಿಂದನೆಯ ವಿಷಯ (ಸಿಎಸ್‌ಇಎಎಂ) ಒಳಗೊಂಡಿರುವ ಜಾಹೀರಾತುಗಳು, ಡೀಪ್‌ಫೇಕ್ ಕಂಟೆಂಟ್ ಮತ್ತು ಪ್ಲಾಟ್‌ಫಾರ್ಮ್ ಕಾರ್ಯನಿರ್ವಹಣೆಯಲ್ಲಿನ ಪ್ರಮಾದಗಳಿಗಾಗಿ ಮೆಟಾ ಸಿಇಒ ಮಾರ್ಕ್ ಜುಕರ್‌ಬರ್ಗ್ ಅವರು ಭಾರತ ಸರ್ಕಾರದ ಕ್ಷಮೆಯಾಚಿಸಿದ್ದಾರೆ ಎಂದು ಮೂಲಗಳನ್ನು ಉಲ್ಲೇಖಿಸಿ 'ಮನಿ ಕಂಟ್ರೋಲ್' ವರದಿ ಮಾಡಿದೆ. 


ಪ್ರಧಾನಿ ಮೋದಿ ಅವರ ವಿಡಿಯೊವನ್ನು ಫೇಸ್‌ಬುಕ್‌ನಿಂದ ತೆಗೆದುಹಾಕಿದ್ದಕ್ಕಾಗಿ ಜುಕರ್‌ಬರ್ಗ್ ಮೂರು ದಿನಗಳೊಳಗೆ ಕ್ಷಮೆಯಾಚಿಸಬೇಕು, ಇಲ್ಲವಾದಲ್ಲಿ ಐಟಿ ಕಾಯ್ದೆಯಡಿಯ (ಸೆಕ್ಷನ್ 79) ನೀಡಲಾಗಿರುವ ಕಾನೂನು ರಕ್ಷಣೆಯನ್ನು ಹಿಂಪಡೆಯಲಾಗುವುದು ಎಂದು ಮಾಹಿತಿ ತಂತ್ರಜ್ಞಾನಕ್ಕೆ ಸಂಬಂಧಿಸಿದ ಸಂಸದೀಯ ಸಮಿತಿ ಎಚ್ಚರಿಕೆ ನೀಡಿತ್ತು.

ಏತನ್ಮಧ್ಯೆ , ನಿರ್ದಿಷ್ಟ ರೀತಿಯ ವಿಷಯಗಳನ್ನು ಬೂಸ್ಟ್ ಮಾಡಲು (ಪ್ರಚಾರ) ಹೆಚ್ಚಿನ ಹಣ ಪಾವತಿಸಲಾಗಿದೆ ಎಂಬುದನ್ನು ಮೆಟಾ ತಂಡವು ಒಪ್ಪಿಕೊಂಡಿದೆ. ನಡೆದಿರುವ ತಪ್ಪುಗಳಿಗಾಗಿ ಜುಕರ್‌ಬರ್ಗ್, ವಿಷಾದ ವ್ಯಕ್ತಪಡಿಸಿ ಕ್ಷಮೆ ಕೋರಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಮಂಗಳವಾರ ಮೆಟಾ ಉನ್ನತಾಧಿಕಾರಿಗಳು ಮತ್ತು ಭಾರತ ಸರ್ಕಾರದ ಅಧಿಕಾರಿಗಳ ನಡುವೆ ನಡೆದ ಸಭೆಯಲ್ಲಿ ಕ್ಷಮೆಯಾಚಿಸಿದ್ದಾರೆ ಎಂದು ವರದಿಯಾಗಿದೆ.

ಆದರೆ ಈ ಕುರಿತು ಮೆಟಾ ಸಂಸ್ಥೆಯು, ತಕ್ಷಣಕ್ಕೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.|

ಮಕ್ಕಳ ಮೇಲಿನ ಶೋಷಣೆಗೆ ಸಂಬಂಧಿಸಿದ ಎಲ್ಲ ಜಾಹೀರಾತುಗಳನ್ನು ಇನ್‌ಸ್ಟಾಗ್ರಾಮ್‌ನಲ್ಲಿ ನಿಷ್ಕ್ರಿಯಗೊಳಿಸುವಂತೆ ಎಲೆಕ್ಟ್ರಾನಿಕ್ ಹಾಗೂ ಮಾಹಿತಿ ತಂತ್ರಜ್ಞಾನ ಸಚಿವಾಲಯವು ಮೆಟಾ ಅಧಿಕಾರಿಗಳಿಗೆ ಕಳೆದ ಜುಲೈನಲ್ಲಿ ಸೂಚನೆ ನೀಡಿತ್ತು. ‌

ಜಾಹೀರಾತು ಪ್ರಕಟಿಸಿದ ಸಂಬಂಧ ಮೆಟಾ ಅಧಿಕಾರಿಗಳಿಗೆ ಸಮನ್ಸ್‌ ನೀಡುವಂತೆ ಕೇಂದ್ರ ಐಟಿ ಖಾತೆ ಸಚಿವ ಅಶ್ವಿನಿ ವೈಷ್ಣವ್‌ ಸೂಚನೆ ನೀಡಿದ್ದರು. ಈ ಕುರಿತು ಸಂಸ್ಥೆಯು ತೆಗೆದುಕೊಂಡಿರುವ ಕ್ರಮಗಳ ಕುರಿತಂತೆ 7 ದಿನಗಳ ಒಳಗಾಗಿ ವಿಸ್ತೃತ ವರದಿ ನೀಡುವಂತೆ ಇಲಾಖೆಯು ಸೂಚಿಸಿದೆ ಎಂದು ಮೂಲಗಳನ್ನು ಉಲ್ಲೇಖಿಸಿ ಬಿಬಿಸಿ ವರದಿ ಮಾಡಿತ್ತು.

ಅದಕ್ಕೆ ಪ್ರತಿಕ್ರಿಯಿಸಿದ್ದ ಮೆಟಾ, ಮಕ್ಕಳ ಮೇಲಿನ ಲೈಂಗಿಕ ಶೋಷಣೆಯ ವಿಷಯಗಳಲ್ಲಿ ತಾನು 'ಶೂನ್ಯ ಸಹಿಷ್ಣುತೆ' ನೀತಿಯನ್ನು ಹೊಂದಿದ್ದು, ಅದನ್ನು ಪತ್ತೆಹಚ್ಚುವ ವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸುತ್ತಿರುವುದಾಗಿ ತಿಳಿಸಿತ್ತು.

ಫೇಸ್‌ಬುಕ್‌ನಲ್ಲಿ ಮೋದಿ ವಿಡಿಯೊ ಡಿಲೀಟ್: ತಾಂತ್ರಿಕ ದೋಷ ಎಂದ ಮೆಟಾ, ಕ್ಷಮೆಯಾಚನೆ

ಮೋದಿ ವಿಡಿಯೊ ಡಿಲೀಟ್:

ನೀಟ್‌ ಪ್ರಶ್ನೆಪತ್ರಿಕೆ ಸೋರಿಕೆ ಕುರಿತು ದೇಶದಾದ್ಯಂತ ನಡೆಯುತ್ತಿದ್ದ ಪ್ರತಿಭಟನೆಗಳನ್ನು ಉದ್ದೇಶಿಸಿ ಪ್ರಧಾನಿ ಮೋದಿ ಅವರು ಮಾತನಾಡಿದ್ದ ವಿಡಿಯೊವನ್ನು ಫೇಸ್‌ಬುಕ್‌ನಲ್ಲಿ ಕೆಲಕಾಲ ತೆಗೆದುಹಾಕಲಾಗಿತ್ತು. ಇದಕ್ಕೆ ಆಕ್ಷೇಪಣೆ ವ್ಯಕ್ತಪಡಿಸಿದ್ದ ಭಾರತದ ಮಾಹಿತಿ ಮತ್ತು ತಂತ್ರಜ್ಞಾನ ಸಚಿವಾಲಯವು ಮೆಟಾ ಅಧಿಕಾರಿಗಳಿಗೆ ಸಮನ್ಸ್ ನೀಡಿತ್ತು.

ತಾಂತ್ರಿಕ ಲೋಪದಿಂದ ವಿಡಿಯೊ ಡಿಲೀಟ್‌ ಆಗಿತ್ತು. ನಂತರ ಅದನ್ನು ಮರುಸ್ಥಾಪಿಸಲಾಗಿದೆ ಎಂದು ಸ್ಪಷ್ಟನೆ ನೀಡಿದ್ದ ಮೆಟಾ, ಬಳಿಕ ವಿಷಾದ ವ್ಯಕ್ತಪಡಿಸಿತ್ತು.

ಇದಲ್ಲದೆ, ಪ್ರಧಾನಿ ಮೋದಿ ಅವರನ್ನು ನಿಂದನೀಯ ರೀತಿಯಲ್ಲಿ ಚಿತ್ರಿಸಲಾಗಿದೆ ಎನ್ನಲಾದ ವಿಡಿಯೊಗಳು ಫೇಸ್‌ಬುಕ್‌ನಲ್ಲಿ ಪೋಸ್ಟ್ ಆದ ಹಿನ್ನೆಲೆಯಲ್ಲಿ, ಹೈದರಾಬಾದ್ ಪೊಲೀಸರು ಮೆಟಾ ಇಂಡಿಯಾ ಮುಖ್ಯಸ್ಥ ಅರುಣ್ ಶ್ರೀನಿವಾಸ್ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. 









ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries