HEALTH TIPS

ಫೇಸ್‌ಬುಕ್‌ನಿಂದ ಮೋದಿ ವಿಡಿಯೊ ಡಿಲೀಟ್: ಕ್ಷಮೆಯಾಚಿಸಿದ ಮೆಟಾ ಉನ್ನತಾಧಿಕಾರಿ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಮಾತನಾಡಿದ್ದ ವಿಡಿಯೊ ಫೇಸ್‌ಬುಕ್‌ನಿಂದ ತಾತ್ಕಾಲಿಕವಾಗಿ ಕಣ್ಮರೆಯಾಗಿದ್ದ ಸಂಬಂಧ ಮೆಟಾ ಸಂಸ್ಥೆಯ ಜಾಗತಿಕ ವ್ಯವಹಾರಗಳ ಉನ್ನತಾಧಿಕಾರಿ ಜೋಯಲ್ ಕಾಪ್ಲನ್ ಅವರು ಕೇಂದ್ರ ಮಾಹಿತಿ ತಂತ್ರಜ್ಞಾನ ಸಚಿವ ಅಶ್ವಿನಿ ವೈಷ್ಣವ್ ಅವರ ಬಳಿ ಕ್ಷಮೆ ಕೇಳಿದ್ದಾರೆ. ಈ ಬಗ್ಗೆ 'ಎನ್‌ಡಿಟಿವಿ' ವರದಿ ಮಾಡಿದೆ.


ಪರೀಕ್ಷಾ ವಿವಾದಗಳು ಮತ್ತು ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣದಲ್ಲಿ ಕೈಗೊಂಡ ಕಠಿಣ ಕ್ರಮಗಳ ಬಗ್ಗೆ ಜೆನ್ ಝೀ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಪ್ರಧಾನಿ ಅವರು ವಿಡಿಯೊದಲ್ಲಿ ಮಾತನಾಡಿದ್ದರು. ಜುಲೈ 23ರಂದು ಈ ವಿಡಿಯೊ ಫೇಸ್‌ಬುಕ್‌ನಿಂದ ಕಣ್ಮರೆಯಾಗಿತ್ತು.

ಈ ತಾಂತ್ರಿಕ ಪ್ರಮಾದಕ್ಕಾಗಿ ಮೆಟಾ ಪರವಾಗಿ ನಾನು ಸಚಿವರಲ್ಲಿ ಕ್ಷಮೆಯಾಚಿಸಿದ್ದೇನೆ ಎಂದು ಜೋಯಲ್ ಕಾಪ್ಲನ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಜೋಯಲ್ ಕಾಪ್ಲನ್ ನೇತೃತ್ವದ ಮೆಟಾದ ಉನ್ನತ ನಾಯಕರ ತಂಡವು ಮಾಹಿತಿ ತಂತ್ರಜ್ಞಾನ ಕಾರ್ಯದರ್ಶಿ ಎಸ್. ಕೃಷ್ಣನ್ ಹಾಗೂ ಸಚಿವಾಲಯದ ಹಿರಿಯ ಅಧಿಕಾರಿಗಳೊಂದಿಗೆ ಸುಮಾರು 45 ನಿಮಿಷಗಳ ಕಾಲ ಸುದೀರ್ಘ ಚರ್ಚೆ ನಡೆಸಿತು. 

ಸಂಸದೀಯ ಸ್ಥಾಯಿ ಸಮಿತಿ ಎಚ್ಚರಿಕೆ:

ಪ್ರಧಾನಿ ಅವರು ಮಾತನಾಡಿದ ವಿಡಿಯೊ ತೆಗೆದ ಕಾರಣಕ್ಕೆ ಮೆಟಾದ ಮುಖ್ಯಸ್ಥ ಮಾರ್ಕ್ ಜುಕರ್‌ಬರ್ಗ್ ಅವರು ಕ್ಷಮೆ ಕೇಳಬೇಕು ಎಂದು ಸಂಸದೀಯ ಸ್ಥಾಯಿ ಸಮಿತಿ ಬುಧವಾರ ಹೇಳಿತ್ತು.

'ಮೂರು ದಿನಗಳಲ್ಲಿ ಕ್ಷಮೆ ಕೇಳದಿದ್ದರೆ ಮಾರ್ಕ್ ಅವರಿಗೆ ಇರುವ ಭದ್ರತೆ ಮತ್ತು ವಿನಾಯಿತಿಗಳನ್ನು ಹಿಂಪಡೆಯಬಹುದು' ಎಂದು ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯದ ಕಾರ್ಯದರ್ಶಿಗೆ ಬರೆದ ಪತ್ರದಲ್ಲಿ ಲೋಕಸಭಾ ಸಚಿವಾಲಯದ ನಿರ್ದೇಶಕಿ ಎ. ಜ್ಯೋತಿರ್ಮಯಿ ಅವರು ತಿಳಿಸಿದ್ದರು. 








ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries