HEALTH TIPS

ಶಿಕ್ಷೆ ಅನುಭವಿಸಿದ ಮೀನುಗಾರರ ಬಿಡುಗಡೆ ಮಾಡಿ: ಭಾರತ-ಪಾಕ್ ಸರ್ಕಾರಗಳಿಗೆ ಮನವಿ

ಅಹಮದಾಬಾದ್: ಜೈಲು ಶಿಕ್ಷೆ ಪೂರ್ಣಗೊಳಿಸಿರುವ ಮೀನುಗಾರರನ್ನು ಬಿಡುಗಡೆ ಮಾಡುವಂತೆ ಕೋರಿ ಭಾರತ ಮತ್ತು ಪಾಕಿಸ್ತಾನ ಸರ್ಕಾರಕ್ಕೆ ಮೀನುಗಾರರ ಕುಟುಂಬ ಸದಸ್ಯರು ಹಾಗೂ ಸರ್ಕಾರೇತರ ಸಂಸ್ಥೆಗಳು ಮನವಿ ಮಾಡಿವೆ. 


ಬಂಧನದಲ್ಲಿರುವ ಮೀನುಗಾರರನ್ನು ಎರಡೂ ರಾಷ್ಟ್ರಗಳ ಸ್ವಾತಂತ್ರ್ಯ ದಿನಾಚರಣೆ ಸಂದರ್ಭದಲ್ಲಿ ಮಾನವೀಯ ನೆಲೆಯಲ್ಲಿ ತಕ್ಷಣವೇ ಬಿಡುಗಡೆ ಮಾಡಬೇಕು ಎಂದು ಎನ್‌ಜಿಒಗಳು ಮತ್ತು ಕುಟುಂಬಗಳು ಮನವಿ ಮಾಡಿವೆ.

ಪಾಕಿಸ್ತಾನದಲ್ಲಿ ಆಗಸ್ಟ್‌ 14ರಂದು, ಭಾರತದಲ್ಲಿ ಆಗಸ್ಟ್ 15ರಂದು ಸ್ವಾತಂತ್ರ್ಯ ದಿನವನ್ನು ಆಚರಿಸಲಾಗುತ್ತದೆ.

ʼನನ್ನ ಬಾವ 5 ವರ್ಷಗಳಿಗೂ ಹೆಚ್ಚು ಸಮಯದಿಂದ ಪಾಕಿಸ್ತಾನದ ಜೈಲಿನಲ್ಲಿದ್ದಾರೆ. ಅವರ ಮಾನಸಿಕ ಸ್ಥಿತಿ ಹದಗೆಡುತ್ತಿದೆ. ದಯಮಾಡಿ ಅವರನ್ನು ಬಿಡುಗಡೆ ಮಾಡಿ ಎಂದು ಎರಡೂ ದೇಶಗಳ ಸರ್ಕಾರಗಳಿಗೆ ಕೈಮುಗಿದು ಬೇಡುತ್ತೇನೆʼ ಎಂದು ಜಾಗೃತಿ ಸೋಲಂಕಿ ಎಂಬವರು ಅಹಮದಾಬಾದ್‌ನಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದಾರೆ.

ಜೈಲಿನಲ್ಲಿರುವ ಮೀನುಗಾರರ ಕುಟುಂಬ ಸದಸ್ಯರು, ನ್ಯಾಷನಲ್‌ ಫಿಶ್‌ವರ್ಕರ್ಸ್‌ ಫೋರಂ (NFF), ಪಾಕಿಸ್ತಾನ-ಇಂಡಿಯಾ ಪೀಪಲ್ಸ್ ಫೋರಮ್ ಫಾರ್ ಪೀಸ್ ಅಂಡ್ ಡೆಮಾಕ್ರಸಿ (PIPFPD) ಮತ್ತು ಪಾಕಿಸ್ತಾನ ಫಿಶರ್‌ಫೋಕ್ ಫೋರಂ (PFF) ಸಂಸ್ಥೆಗಳು ಒಟ್ಟಾಗಿ, ಎರಡೂ ದೇಶಗಳು ಶಿಕ್ಷೆ ಪೂರೈಸಿರುವ ಮೀನುಗಾರರನ್ನು ಬಿಡುಗಡೆ ಮಾಡಿ, ಸ್ವದೇಶಕ್ಕೆ ಕಳುಹಿಸುವಂತೆ ಒತ್ತಾಯಿಸಿವೆ. ಇದಕ್ಕೆ ಸಂಬಂಧಿಸಿದಂತೆ, ಎರಡೂ ರಾಷ್ಟ್ರಗಳ ಪ್ರಧಾನಿಗಳಿಗೆ ಜಂಟಿ ಪತ್ರ ಬರೆಯಲಾಗಿದೆ.

ಈ ಸಂಸ್ಥೆಗಳ ಮಾಹಿತಿ ಪ್ರಕಾರ, ಭಾರತದ 198 ಮೀನುಗಾರರು ಪಾಕಿಸ್ತಾನದ ಜೈಲುಗಳಲ್ಲಿ ಇದ್ದಾರೆ. ಅವರಲ್ಲಿ 178 ಮಂದಿ ಈಗಾಗಲೇ ಶಿಕ್ಷೆಯ ಅವಧಿಯನ್ನು ಪೂರ್ಣಗೊಳಿಸಿದ್ದಾರೆ.

ʼಭಾರತದ ಸುಮಾರು ನಾಲ್ಕರಿಂದ ಐವರು ಮೀನುಗಾರರು ಪಾಕಿಸ್ತಾನದಲ್ಲಿ ಜೈಲಿನಲ್ಲಿದ್ದಾಗಲೇ ಮೃತಪಡುತ್ತಿದ್ದಾರೆ. ಕಳೆದ ವರ್ಷ ಮಾರ್ಚ್‌ನಲ್ಲಿ ಒಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದರುʼ ಎಂದು ಈ ಸಂಸ್ಥೆಗಳು ಅಹಮದಾಬಾದ್‌ನಲ್ಲಿ ಜಂಟಿ ಮಾಧ್ಯಮಗೋಷ್ಠಿಯಲ್ಲಿ ತಿಳಿಸಿವೆ.

ʼಬಂಧಿತ ಮೀನುಗಾರರಿಗೆ ಮಾತ್ರವಲ್ಲದೆ, ಅವರ ಮೇಲೆ ಅವಲಂಬಿತರಾಗಿರುವವರು ಆರ್ಥಿಕ ಮತ್ತು ಭಾವನಾತ್ಮಕವಾಗಿ ಸಂಕಷ್ಟಕ್ಕೀಡಾಗುತ್ತಿದ್ದಾರೆ. ಭಾರತದಲ್ಲಿ ಬಂಧನದಲ್ಲಿರುವ ಮೀನುಗಾರರ ಕುಟುಂಬಗಳದ್ದೂ ಇದೇ ಪರಿಸ್ಥಿತಿʼ ಎಂದು ವಿವರಿಸಿವೆ. 





ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries