ಬದಿಯಡ್ಕ: ಬದಿಯಡ್ಕ ಬಂಟರ ಸಂಘದ ಆಶ್ರಯದಲ್ಲಿ ಆಟಿದ ಲೇಸ್ ಕಾರ್ಯಕ್ರಮ ವಳಮಲೆ ಇರಾ ಸಭಾ ಭವನದಲ್ಲಿ ಜರಗಿತು. ಸಭಾ ಸಭಾ ಕಾರ್ಯಕ್ರಮವನ್ನು ಜಿಲ್ಲಾ ಬಂಟರ ಅಧ್ಯಕ್ಷ ವಕೀಲ ಐ. ಸುಬ್ಬಯ್ಯ ರೈ ಉದ್ಘಾಟಿಸಿ ಮಾತನಾಡಿ, ತುಳುನಾಡಿನಲ್ಲಿ ಬಂಟರು ರಕ್ತಗತವಾಗಿ ನಾಯಕತ್ವ ಗುಣವನ್ನು ಬೆಳೆಸಿಕೊಂಡು ಎಲ್ಲ ಕ್ಷೇತ್ರದಲ್ಲಿ ಮುಂದೆ ನಿಂತು ಸಮಾಜದ ಅಭಿವೃದ್ಧಿಗೆ ತೊಡಗಿಕೊಂಡವರು. ಬದಿಯಡ್ಕ ಬಂಟರ ಸಂಘದ ಮೂಲಕ ಬಂಟರ ಆಚಾರ ವಿಚಾರ ಸಂಸ್ಕøತಿಯನ್ನು ಯುವ ತಲೆಮಾರಿಗೆ ಮನವರಿಕೆ ಮಾಡುವ ಕೆಲಸ ಶ್ಲಾಘನೀಯ ಎಂದು ತಿಳಿಸಿದರು.
ಬದಿಯಡ್ಕ ಬಂಟರ ಸಂಘದ ಅಧ್ಯಕ್ಷ ನಿರಂಜನ್ ರೈ ಪೆರಡಾಲ ಅಧ್ಯಕ್ಷತೆ ವಹಿಸಿದ್ದರು. ಕಾಸರಗೋಡು ಜಿಲ್ಲಾ ಬಂಟರ ಸಂಘದ ಉಪಾಧ್ಯಕ್ಷ ಚಂದ್ರಹಾಸ ರೈ ಪೆರಡಾಲ ಗುತ್ತು, ಕೋಶಾಧಿಕಾರಿ ಚಿದಾನಂದ ಆಳ್ವ, ಕುಂಬಳೆ ಫಿರ್ಕಾ ಬಂಟರ ಸಂಘದ ಅಧ್ಯಕ್ಷ ಸಂತೋಷ್ ಕುಮಾರ್ ಶೆಟ್ಟಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.
ಆಟಿ ತಿಂಗಳ ಬಂಟರ ಆಚರಣೆಗಳ ಬಗ್ಗೆ ಡಾ. ಯತೀಶ್ ಕುಮಾರ್ ರೈ ಉಪನ್ಯಾಸ ನೀಡಿದರು. ಬಂಟರು ಪ್ರಕೃತಿ ಆರಾಧಕರು. ಪ್ರಕೃತಿಯೊಂದಿಗೆ ಅವಿನಾಭಾವ ಸಂಬಂಧ ಹೊಂದಿದ್ದು ಬಂಟರ ಆಚಾರ ವಿಚಾರಗಳು ಸಾರ್ವಕಾಲಿಕವಾಗಿದೆ ಎಂದು ಹೇಳಿದರು.
ಕುಂಬಳೆ ಫಿರ್ಕಾ ಪ್ರಧಾನ ಕಾರ್ಯದರ್ಶಿ ಅಶೋಕ್ ರೈ ಕೊರೆಕ್ಕಾನ, ಪೆರಡಾಲ ಶ್ರೀ ಉದನೇಶ್ವರ ದೇವಸ್ಥಾನದ ಮೊಕ್ತೇಸರ ಜಗನ್ನಾಥ ರೈ ಪೆರಡಾಲ ಗುತ್ತು, ಕುಂಬಳೆ ಫಿರ್ಕಾ ಜೊತೆ ಕಾರ್ಯದರ್ಶಿ ರವೀಂದ್ರನಾಥ ಶೆಟ್ಟಿ ವಳಮಲೆ, ಗಿರೀಶ ರೈ , ಗಂಗಾಧರ ಆಳ್ವ ಸಾಂಸ್ಕೃತಿಕ ಪ್ರತಿಷ್ಠಾನ ಒಳಮಲೆ ಇದರ ಅಧ್ಯಕ್ಷ ಗಂಗಾಧರ ಆಳ್ವ ಪೆರಡಾಲ, ಬದಿಯಡ್ಕ ಬಂಟರ ಸಂಘದ ಉಪಾಧ್ಯಕ ಜಗನ್ನಾಥ ರೈ ಕೊರೆಕ್ಕಾನ, ಸಂತೋಷ್ ಕುಮಾರ್ ಶೆಟ್ಟಿ ಬದಿಯಡ್ಕ ಮೊದಲಾದವರು ಉಪಸ್ಥಿತರಿದ್ದರು.
ವಿವಿಧ ಆಟೋಟ ಸ್ಪರ್ಧೆಗಳು, ವಿಜೇತರಿಗೆ ಬಹುಮಾನ, ಶಾಲಾ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ, ಹಿರಿಯರಿಗೆ ಗೌರವರ್ಪಣೆ ನಡೆಯಿತು. ಆಟಿ ತಿಂಗಳ ವಿವಿಧ ತಿಂಡಿ ತಿನಿಸುಗಳ ಪ್ರದರ್ಶನ, ಬಂಟರ ಶೈಲಿಯ ಉಪಹಾರ ಏರ್ಪಡಿಸಲಾಗಿತ್ತು. ಪ್ರಧಾನ ಕಾರ್ಯದರ್ಶಿ ಪ್ರದೀಪ್ ಕುಮಾರ್ ಶೆಟ್ಟಿ ಬೇಳ ಸ್ವಾಗತಿಸಿ, ಕೋಶಧಿಕಾರಿ ದಯಾನಂದ ರೈ ಮೇಗಿನ ಕಡಾರು ವಂದಿಸಿದರು. ಅಶ್ವಿನಿ ಪ್ರದೀಪ್ ಶೆಟ್ಟಿ ಬೇಳ ಕಾರ್ಯಕ್ರಮ ನಿರ್ವಹಿಸಿದರು. ಕುಮಾರಿ ಶ್ರದ್ಧಾ ರೈ ಮೇಗಿನ ಕಡಾರು ಪ್ರಾರ್ಥಿಸಿದರು.

.jpg)
.jpg)
.jpg)
