HEALTH TIPS

ಆ.28 ಸಂತಡ್ಕ ಹಾಗೂ ಮೀಯಪದವಲ್ಲಿ ಶ್ರೀ ವರಮಹಾಲಕ್ಷ್ಮಿ ಪೂಜೆ

ಮಂಜೇಶ್ವರ: ವಿಶ್ವಹಿಂದೂ ಪರಿಷತ್ ಮಾತೃ ಮಂಡಳಿ ಉಪಖಂಡ ಸಮಿತಿ ಸಂತಡ್ಕ ಇದರ ವತಿಯಿಂದ 23ನೇ ವರ್ಷದ ಶ್ರೀ ವರಮಹಾಲಕ್ಷ್ಮಿ ಪೂಜೆ ಆ. 28 ಶುಕ್ರವಾರ ಬೆಳಿಗ್ಗೆ 8.30ಕ್ಕೆ ಸಂತಡ್ಕ ಅರಸು ಸಂಕಲ ಭವನ ಅರಸು ಸಂಕಲ ದೈವ ಕ್ಷೇತ್ರದಲ್ಲಿ ವೇದಮೂರ್ತಿ ಕುರಿಯ ರಾಮಮೂರ್ತಿಯವರ ದಿವ್ಯ ಹಸ್ತದಿಂದ ಜರಗಲಿದೆ. 

ಅಂದು ನಡೆಯುವ ಧಾರ್ಮಿಕ ಸಭೆಯಲ್ಲಿ ಅಧ್ಯಕ್ಷತೆಯನ್ನು ಅರಸು ಸಂಕಲ ದೈವಕ್ಷೇತ್ರ ಸಂತಡ್ಕ ಇದರ ಅಧ್ಯಕ್ಷ ಡಾ. ಶ್ರೀಧರ ಭಟ್ ವಹಿಸಲಿದ್ದು, ದಾಮೋದರ ಕೆ. ಕಬ್ಬಿನಹಿತ್ತಿಲು ಮುಖ್ಯ ಅತಿಥಿಗಳಾಗಿ ಭಾಗವಹಿಸುವರು. ರಾಜಾರಾಮ ರಾವ್ ಚಿಗುರುಪಾದೆ ಧಾರ್ಮಿಕ ಪ್ರವಚನ  ನೀಡುವರು. ಗ್ರಾ.ಪಂ.ಉಪಾಧ್ಯಕ್ಷೆ ಉಷಾ ಪೂಂಜ ಕುಳೂರು ಮಾಣೂರು ಮತ್ತು ಸದಸ್ಯೆ ಆಶಾಲತ ಬಿ.ಎಂ ಕಂಚಿಲ ಉಪಸ್ಥಿತರಿರುವರು. ಮಧ್ಯಾಹ್ನ ಅನ್ನ ಸಂತರ್ಪಣೆ ಜರಗಲಿದೆ ಎಂದು ಕೇತ್ರ ಪ್ರಕಟಣೆ ತಿಳಿಸಿದೆ.

.......................................................................................................................................................................

ಮೀಯಪದವಿನಲ್ಲಿ 27ನೇ ವರ್ಷದ ಶ್ರೀ ವರಮಹಾಲಕ್ಷ್ಮಿ ಪೂಜೆ


ಮಂಜೇಶ್ವರ: ವಿಶ್ವ ಹಿಂದು ಪರಿಷತ್ ಮಾತೃ ಮಂಡಳಿ ಮೀಯಪದವು ವತಿಯಿಂದ 27ನೇ ವರ್ಷದ ವಾರ್ಷಿಕ ಶ್ರೀ ವರಮಹಾಲಕ್ಷ್ಮಿ ಪೂಜೆ ಅಪರಾಹ್ನ 2.30ಕ್ಕೆ ಮೀಯಪದವಿನ ಶ್ರೀ ಅಯ್ಯಪ್ಪ ಮಂದಿರದಲ್ಲಿ ವೇದಮೂರ್ತಿ ಬೋಳಂತಕೋಡಿ ರಾಮ ಭಟ್ ಅವರ ನೇತೃತ್ವದಲ್ಲಿ ಜರಗಲಿದೆ ಎಂದು ಸಂಘಟಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.







ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries