HEALTH TIPS

ಮೆಲ್ಬೋರ್ನ್‌ ಚಿತ್ರೋತ್ಸವದಲ್ಲಿ 'ಬಯಾನ್‌' ಪ್ರದರ್ಶನ

ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಪ್ರಭಾವಿ ನಾಯಕನ ವಿರುದ್ಧ ಹೋರಾಡುವ ಪೊಲೀಸ್ ಅಧಿಕಾರಿಯ ಕಥನವುಳ್ಳ 'ಬಯಾನ್' ಹಿಂದಿ ಚಿತ್ರವು ಭಾರತೀಯ ಚಲನಚಿತ್ರೋತ್ಸವದಲ್ಲಿ (ಐಎಫ್‌ಎಫ್‌ಎಂ) ಪ್ರದರ್ಶನ ಕಾಣಲಿದೆ.


ನಟಿ ಹುಮಾ ಖುರೇಷಿ ಚಿತ್ರದ ಮುಖ್ಯಪಾತ್ರದಲ್ಲಿ 'ರೂಹಿ'ಯಾಗಿ ಕಾಣಿಸಿಕೊಂಡಿದ್ದಾರೆ.

'ಈ ಚಿತ್ರದ ಪಾತ್ರ ಸವಾಲಿನದಾಗಿತ್ತು. ಚಿತ್ರೋತ್ಸವದಲ್ಲಿ ಪ್ರದರ್ಶನ ಕಾಣಲಿರುವುದು ಹೆಮ್ಮೆಯ ಸಂಗತಿ' ಎಂದು ಹುಮಾ ಹೇಳಿದ್ದಾರೆ.

ಚಿತ್ರೋತ್ಸವದಲ್ಲಿ ಪ್ರದರ್ಶನದ ಹಿನ್ನೆಲೆಯಲ್ಲಿ ಮಾತನಾಡಿದ ಅವರು, 'ಹಲವು ಒತ್ತಡದ ನಡುವೆಯೂ ಕೆಲಸದ ಬದ್ಧತೆ ತೋರುವ ಅಧಿಕಾರಿಯ ಪಾತ್ರವದು. ಹಲವು ರೀತಿಯಲ್ಲಿ ನಾನು ನಟಿಯಾಗಿ ಬಿಂಬಿತವಾಗಲು ನೆರವಾಗಿದೆ. ಇದು, ಕೇವಲ ‍ಪ್ರಕರಣದ ತನಿಖೆಯ ಚಿತ್ರಣವಲ್ಲ. ಅಧಿಕಾರ, ಸತ್ಯ, ನ್ಯಾಯ ಕುರಿತ ಪ್ರಶ್ನೆ ಎತ್ತಲಿದೆ' ಎಂದರು.

ಚಲನಚಿತ್ರೋತ್ಸವ ಆಗಸ್ಟ್‌ 13ರಿಂದ 23ರವರೆಗೂ ಮೆಲ್ಬರ್ನ್‌ನಲ್ಲಿ ನಡೆಯಲಿದೆ. ವಿಕಾಸ್‌ ರಂಜನ್‌ ನಿರ್ದೇಶನದ ಚಿತ್ರದಲ್ಲಿ ಚಂದ್ರಚೂಡ್‌ ಸಿಂಗ್ ಮತ್ತು ಸಚಿನ್‌ ಖೇಡೆಕರ್‌ 'ಬಯಾನ್‌' ಪ್ರಮುಖ ಪಾತ್ರದಲ್ಲಿದ್ದಾರೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries