HEALTH TIPS

ನಗರಗಳಲ್ಲಿ ಖಾಸಗಿ ಆಸ್ಪತ್ರೆ ಕೊಠಡಿಯ ಬಾಡಿಗೆ ತ್ರಿತಾರಾ ಹೋಟೆಲ್ ದರವನ್ನು ಮೀರಕೂಡದು : ಸಂಸದೀಯ ಸಮಿತಿ

ನವದೆಹಲಿ:: ಭಾರತದಲ್ಲಿ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸಾ ವೆಚ್ಚಗಳು ಗಗನಕ್ಕೇರುತ್ತಿರುವ ಹಿನ್ನೆಲೆಯಲ್ಲಿ ಮಹಾನಗರಗಳಲ್ಲಿ ಆಸ್ಪತ್ರೆಯ ಕೊಠಡಿಗಳ ವೆಚ್ಚವನ್ನು ಆಯಾ ಆಸ್ಪತ್ರೆಯ ಸಮೀಪದಲ್ಲಿರುವ ತ್ರಿತಾರಾ ಹೋಟೆಲ್ ಕೊಠಡಿಯ ಸರಾಸರಿ ದರಕ್ಕೆ ಮಿತಿಗೊಳಿಸಬೇಕೆಂದು ಸಂಸದೀಯ ಸಮಿತಿಯೊಂದು ಶಿಫಾರಸು ಮಾಡಿದೆ.


ಭಾರತದಲ್ಲಿ ಆರೋಗ್ಯ ರಕ್ಷಣೆಯ ವೆಚ್ಚವನ್ನು ಕೈಗೆಟುಕುವಂತೆ ಮಾಡಲು ಮತ್ತು ಜನರು ತಮ್ಮ ಸ್ವಂತ ಜೇಬಿನಿಂದ ಮಾಡುವ ವೆಚ್ಚವನ್ನು ಕಡಿಮೆ ಮಾಡಲು ಕೈಗೊಳ್ಳಲಾದ ಸರಣಿ ಕ್ರಮಗಳ ಭಾಗವಾಗಿ ಈ ಸಲಹೆಯನ್ನು ನೀಡಲಾಗಿದೆ.

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಕುರಿತ ಸಂಸದೀಯ ಸ್ಥಾಯಿ ಸಮಿತಿಯು 'ಸಾರ್ವಜನಿಕ ಮತ್ತು ಖಾಸಗಿ ವಲಯದಲ್ಲಿ ಆರೋಗ್ಯ ರಕ್ಷಣಾ ಸೌಲಭ್ಯಗಳ ಕೈಗೆಟುಕುವಿಕೆ ಮತ್ತು ಲಭ್ಯತೆ' ಶೀರ್ಷಿಕೆಯ ತನ್ನ 176ನೇ ವರದಿಯನ್ನು ಆಗಸ್ಟ್ 7ರಂದು ಸಂಸತ್ತಿನ ಉಭಯ ಸದನಗಳಲ್ಲಿ ಮಂಡಿಸಿದೆ.

ನಿರೀಕ್ಷೆಗೂ ಮೀರಿದ ಆಸ್ಪತ್ರೆ ಬಿಲ್‌ಗಳ ಆರ್ಥಿಕ ಅನಿಶ್ಚಿತತೆಯಿಂದ ರೋಗಿಗಳನ್ನು ರಕ್ಷಿಸಬೇಕು ಎಂದು ಸಮಿತಿಯು ಅಭಿಪ್ರಾಯಿಸಿದೆ. ಹೃದಯಸಂಬಂಧಿ ಸಮಸ್ಯೆಗಳು ಅಥವಾ ಕ್ಯಾನ್ಸರ್‌ನಂತಹ ದೀರ್ಘಕಾಲದ ಕಾಯಿಲೆಗಳ ವಿಷಯದಲ್ಲಿ ಸಂಕೀರ್ಣ ಚಿಕಿತ್ಸೆಗಳು ಮತ್ತು ಪ್ರತ್ಯೇಕ ಚಿಕಿತ್ಸಾ ಯೋಜನೆಗಳಿಂದಾಗಿ ರೋಗಿಯು ಆಸ್ಪತ್ರೆಯಲ್ಲಿ ಇರಬೇಕಾದ ಇಡೀ ಅವಧಿಯ ವೆಚ್ಚವನ್ನು ಮುಂಚಿತವಾಗಿ ಅಂದಾಜು ಮಾಡುವುದು ಅತ್ಯಂತ ಕಷ್ಟಕರವಾಗಿರುತ್ತದೆ. ಜೊತೆಗೆ ಒಟ್ಟಾರೆ ವೆಚ್ಚವನ್ನು ತರ್ಕಬದ್ಧಗೊಳಿಸಲು ಮೂಲ ಕೊಠಡಿ ದರಕ್ಕೆ ನಿವಾಸಿ ವೈದ್ಯರ ವೆಚ್ಚ, ಶುಶ್ರೂಷಾ ವೆಚ್ಚ,ಬಳಸಿ ಎಸೆಯುವವ ಸಾಮಗ್ರಿಗಳ ವೆಚ್ಚ, ಊಟದ ವೆಚ್ಚ ಮತ್ತು ಲಾಂಡ್ರಿ ವೆಚ್ಚಗಳನ್ನು ಸೇರಿಸಬಹುದು ಎಂದು ವರದಿಯು ತಿಳಿಸಿದೆ.

ಸಂಕೀರ್ಣ ಅಥವಾ ಸುದೀರ್ಘ ವೈದ್ಯಕೀಯ ಚಿಕಿತ್ಸೆಯನ್ನು ಪ್ರಾರಂಭಿಸುವ ಮೊದಲು ಎಲ್ಲಾ ತೃತೀಯ ಹಂತದ ಆರೈಕೆ ಆಸ್ಪತ್ರೆಗಳು ರೋಗಿಗಳಿಗೆ ವೆಚ್ಚದ ಅಂದಾಜನ್ನು ತಿಳಿಸುವುದನ್ನು ಕೇಂದ್ರ ಸರಕಾರವು ಕಡ್ಡಾಯಗೊಳಿಸಬೇಕು ಎಂದೂ ಅದು ಸಮಿತಿಯು ಶಿಫಾರಸು ಮಾಡಿದೆ.

ಚಿಕಿತ್ಸಾ ವೆಚ್ಚಗಳನ್ನು ತಿಳಿದುಕೊಳ್ಳುವಲ್ಲಿ ರೋಗಿಗಳು ಅಥವಾ ಕುಟುಂಬಗಳಿಗೆ ನೆರವಾಗಲು ಆಸ್ಪತ್ರೆಗಳು ನಿರ್ದಿಷ್ಟ ಆರ್ಥಿಕ ಮಾರ್ಗದರ್ಶಕರನ್ನು ನೇಮಿಸಿಕೊಳ್ಳಬೇಕು ಎಂದು ಅದು ಹೇಳಿರುವ ವರದಿಯು, 'ಎಲ್ಲರಿಗೂ ಆರೋಗ್ಯ' ಎಂಬ ಭಾರತದ ದೀರ್ಘಕಾಲದ ಘೋಷಣೆಯು ಪ್ರತಿಯೊಬ್ಬರಿಗೂ ಗುಣಮಟ್ಟದ ಮತ್ತು ಕೈಗೆಟುಕುವ ಆರೋಗ್ಯ ಸೇವೆಗಳ ಭರವಸೆ ನೀಡುತ್ತದೆ. ಆದರೆ ವಾಸ್ತವ ಸ್ಥಿತಿ ಇದಕ್ಕೆ ಭಿನ್ನವಾಗಿದೆ ಎಂದು ಬೆಟ್ಟು ಮಾಡಿದೆ.

ಸರ್ಕಾರಿ ಆಸ್ಪತ್ರೆಗಳಿಗಿಂತ 5ರಿಂದ 10 ಪಟ್ಟು ಹೆಚ್ಚು ದುಬಾರಿಯಾಗಿದ್ದರೂ ಸಹ ದೇಶದ ಸುಮಾರು ಶೇ.70 ರಷ್ಟು ಜನಸಂಖ್ಯೆಗೆ ಖಾಸಗಿ ಆಸ್ಪತ್ರೆಗಳೇ ಸೇವೆಯನ್ನು ಒದಗಿಸುತ್ತಿವೆ. ದ್ವಿತೀಯ ಮತ್ತು ತೃತೀಯ ಹಂತದ ಆರೈಕೆ ಆಸ್ಪತ್ರೆಗಳಿಗಾಗಿ ಸರಕಾರವು ಮಾಡುವ ವೆಚ್ಚವು ಕಡಿಮೆಯಿರುವುದರಿಂದ ಜನರು ಖಾಸಗಿ ಸೌಲಭ್ಯಗಳತ್ತ ಮುಖ ಮಾಡುತ್ತಿದ್ದಾರೆ. ಇದರಿಂದಾಗಿ ಸ್ವಂತ ಜೇಬಿನಿಂದ ಭರಿಸುವ ವೆಚ್ಚ ಹೆಚ್ಚಾಗುತ್ತಿದೆ ಎಂದು ವರದಿಯು ಬೆಟ್ಟು ಮಾಡಿದೆ.

ಖಾಸಗಿ ಆಸ್ಪತ್ರೆಗಳಲ್ಲಿ ಹೆಚ್ಚುತ್ತಿರುವ ಚಿಕಿತ್ಸಾ ವೆಚ್ಚಗಳು ಕುಟುಂಬಗಳು ತೀವ್ರ ಆರ್ಥಿಕ ಸಂಕಷ್ಟವನ್ನು ಎದುರಿಸಲು ಕಾರಣವಾಗುತ್ತವೆ. ವೈದ್ಯಕೀಯ ಹಣದುಬ್ಬರವು ಶೇ.12 ರಿಂದ 13 ರಷ್ಟು ಏರಿಕೆಯಾಗುತ್ತಿರುವುದರಿಂದ, ಖಾಸಗಿ ಆಸ್ಪತ್ರೆಗಳಲ್ಲಿನ ಪ್ರಮಾಣಿತ ಚಿಕಿತ್ಸೆಗಳಿಗಾಗಿ ಕೊಠಡಿ ದರಕ್ಕೆ ತಳುಕು ಹಾಕಲಾಗಿರುವ ಹಣದುಬ್ಬರ ಮಾದರಿಗಳನ್ನು ತೆಗೆದುಹಾಕಲು ಮತ್ತು ಅನಿಯಂತ್ರಿತ ಬೆಲೆ ವ್ಯತ್ಯಾಸಗಳನ್ನು ತಡೆಯಲು ಪ್ರಮಾಣಿತ ಚಿಕಿತ್ಸಾ ಮಾರ್ಗಸೂಚಿಗಳು ಹಾಗೂ ನಿಯಂತ್ರಣ ವ್ಯವಸ್ಥೆಗಳನ್ನು ಜಾರಿಗೆ ತರಲು ಸಮಿತಿಯು ಶಿಫಾರಸು ಮಾಡಿದೆ.






ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries