HEALTH TIPS

ಅಸಾರಾಂ ಆಸ್ಪತ್ರೆಗೆ ಸೇರಬೇಕಿಲ್ಲ: ಏಮ್ಸ್‌ ವೈದ್ಯರಿಂದ ಸುಪ್ರೀಂಕೋರ್ಟ್‌ಗೆ ಮಾಹಿತಿ

ನವದೆಹಲಿ/ಜೋಧಪುರ (PTI): 'ಸ್ವಯಂ ಘೋಷಿತ ದೇವಮಾನವ ಅಸಾರಾಂ ಬಾಪುನನ್ನು ಆಸ್ಪತ್ರೆಗೆ ಸೇರಿಸುವ ಅಗತ್ಯವಿಲ್ಲ. ಆದರೆ, ನಿತ್ಯವೂ ವೈದ್ಯಕೀಯ ನಿಗಾದಲ್ಲಿ ಇರಬೇಕಾಗುತ್ತದೆ' ಎಂದು ಏಮ್ಸ್‌ನ ತಜ್ಞ ವೈದ್ಯರ ತಂಡ ಸುಪ್ರೀಂ ಕೋರ್ಟ್‌ಗೆ ಮಂಗಳವಾರ ತಿಳಿಸಿದೆ.


2013ರಲ್ಲಿ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ ಪ್ರಕರಣದಲ್ಲಿ ಮೇ 27ರಂದು ಅಸಾರಾಂಗೆ ರಾಜಸ್ಥಾನ ಹೈಕೋರ್ಟ್‌ ಜೀವಾವಧಿ ಶಿಕ್ಷೆ ವಿಧಿಸಿತ್ತು.

ಆರೋಗ್ಯದ ಕಾರಣ ನೀಡಿ ಅಸಾರಾಂ, ಸುಪ್ರೀಂ ಕೋರ್ಟ್‌ನಲ್ಲಿ ಜಾಮೀನು ಅರ್ಜಿ ಸಲ್ಲಿಸಿದ್ದ. ತಜ್ಞ ವೈದ್ಯರ ತಂಡ ರಚಿಸಿ ವರದಿ ನೀಡುವಂತೆ ಜುಲೈ 21ರಂದು ಸುಪ್ರೀಂ ಕೋರ್ಟ್‌ ಏಮ್ಸ್‌ಗೆ ಸೂಚಿಸಿತ್ತು.

ಪೆರೋಲ್‌: ಅಸಾರಾಂ ಬಾಪುಗೆ ರಾಜಸ್ಥಾನ ಹೈಕೋರ್ಟ್‌ ಮಂಗಳವಾರ 20 ದಿನಗಳ ಪೆರೋಲ್‌ ಮಂಜೂರು ಮಾಡಿದೆ. 'ಪೆರೋಲ್‌ ಅರ್ಜಿಯನ್ನು ರದ್ದು ಮಾಡುವ ಕಾರಣಗಳನ್ನು ನೀಡಲು ರಾಜ್ಯ ಸರ್ಕಾರ ವಿಫಲವಾಗಿದೆ' ಎಂದು ಹೈಕೋರ್ಟ್‌ ಹೇಳಿದೆ.

20 ದಿನಗಳ ಪೆರೋಲ್‌ ಮಂಜೂರು

ಅಸಾರಾಂ ಬಾಪುಗೆ ರಾಜಸ್ಥಾನ ಹೈಕೋರ್ಟ್‌ ಮಂಗಳವಾರ 20 ದಿನಗಳ ಪೆರೋಲ್‌ ಮಂಜೂರು ಮಾಡಿದೆ. 'ಪೆರೋಲ್‌ ಅರ್ಜಿಯನ್ನು ರದ್ದು ಮಾಡುವ ಕಾರಣಗಳನ್ನು ನೀಡಲು ರಾಜ್ಯ ಸರ್ಕಾರ ವಿಫಲವಾಗಿದೆ' ಎಂದು ಹೈಕೋರ್ಟ್‌ ಹೇಳಿದೆ.

'ಬಾಪು, ಈಗಾಗಲೇ 13 ವರ್ಷ ಒಂದು ತಿಂಗಳ ಮತ್ತು 24 ದಿನಗಳಿಂದ ಜೈಲಿನಲ್ಲಿದ್ದಾರೆ. ಈ ಹಿಂದೆ ಅವರಿಗೆ ಹಲವು ಬಾರಿ ಮಧ್ಯಂತ ಜಾಮೀನು ನೀಡಲಾಗಿದೆ. ಈ ಯಾವ ಸಂದರ್ಭಗಳಲ್ಲಿಯೂ ಆತ ಜಾಮೀನು ಷರತ್ತು ಉಲ್ಲಂಘಿಸಿದ ಉದಾಹರಣೆಗಳು ಇಲ್ಲ' ಎಂದು ಪೀಠ ಅಭಿಪ್ರಾಯಪಟ್ಟಿದೆ.







 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries