HEALTH TIPS

ಯುವಕನನ್ನು ಅಪಹರಿಸಿ ಹಣ ಎಗರಿಸಿದ ತಂಡದ ಒಬ್ಬನ ಬಂಧನ

ಕಾಸರಗೋಡು: ಯುವಕನನ್ನು ಕಾರಿನಲ್ಲಿ ಅಪಹರಿಸಿ ಬೆದರಿಸಿ ಹಣ ಎಗರಿಸಿದ ಪ್ರಕರಣದ ಆರೋಪಿಗಳಲ್ಲಿ ಓರ್ವನನ್ನು ಪೆÇಲೀಸರು ಬಂಧಿಸಿದ್ದಾರೆ. ಚೆಟ್ಟುಂಗುಳಿ ಎಸ್.ಪಿ ನಗರದ ಸೈನುಲ್ ಆಬೀದ್ (34) ಬಂಧಿತ. ಈತನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಈತನಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ. 

ಸೈನುಲ್ ಆಬೀದ್  ಸೆರೆಹಿಡಿಯಲೆಂದು ಮೇಲ್ಪರಂಬ ಠಾಣೆ ಪೆÇಲೀಸರು ಆತನ ಮನೆಗೆ ತೆರಳುತ್ತಿದ್ದಂತೆ ಆರೋಪಿ ಅಲ್ಲಿಂದ ತಪ್ಪಿಸಿ ಕಾರಿನಲ್ಲಿ ಪಲಾಯನಗೈಯ್ಯಲೆತ್ನಿಸಿದ್ದಾನೆ. ಇದನ್ನು ಕಂಡ ಪೆÇಲೀಸರು ತಕ್ಷಣ ತಮ್ಮ ಜೀಪಿನಲ್ಲಿ ಆ ಕಾರನ್ನು ಹಿಂಬಾಲಿಸಿ ಆತನನ್ನು ಸೆರೆಹಿಡಿದಿದ್ದರು. 

ಆ. 24ರಂದು ರಾತ್ರಿ 9ಕ್ಕೆ ಕಳನಾಡು ಕೋಡಂಕೈ ನಿವಾಸಿ ಕೆ.ಎ. ಮುಹಮ್ಮದ್ ಆನ್ಸೀನ್ (19) ಎಂಬಾತನನ್ನು ಕಳನಾಡು ತಾಐಲ್ ಸನಿಹದಿಂದ ಆಕ್ರಮಿಗಳ ತಂಡ ಕಾರಿನಲ್ಲಿ ಅಪಹರಿಸಿ ಕೊಲೆಬೆದರಿಕೆಯೊಡ್ಡಿ ಗೂಗಲ್ ಪೇ ಮೂಲPದೀತನಿಂದ 20,000 ರೂ. ಎಗರಿಸಿದ ಪ್ರಕರಣಕ್ಕೆ ಸಂಬಂಧಿಸಿ ಆರೋಪಿ ಸೈನುಲ್ ಆಬೀದ್ ನನ್ನು ಬಂಧಿಸಲಾಗಿದೆ. ಈ ಪ್ರಕರಣದ ಇನ್ನೋರ್ವ ಆರೋಪಿಯನ್ನು ಸೇರೆಹಿಡಿಯಲು ಬಾಕಿ ಇದೆಯೆಂದು ಪೆÇಲೀಸರು ತಿಳಿಸಿದ್ದಾರೆ.



 

 

 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries