ಕಾಸರಗೋಡು: ಜಿಲ್ಲಾ ಮಟ್ಟದ ಓಣಂ ಆಚರಣೆಯ ಅಂಗವಾಗಿ ಸಾಂಸ್ಕøತಿಕ ಮೆರವಣಿಗೆ ಹಾಗೂ ಸಮಾರೋಪ ಸಮಾರಂಭ ಕಾಸರಗೋಡು ಸರ್ಕಾರಿ ಹಿರಿಯ ಮಾಧ್ಯಮಿಕ ಶಾಲೆಯಲ್ಲಿ ಜರುಗಲಿದೆ.ಮಧ್ಯಾಹ್ನ 3:30 ಗಂಟೆಗೆ ಕಾಸರಗೋಡು ನಗರದಲ್ಲಿ ಸಾಂಸ್ಕøತಿಕ ಮೆರವಣಿಗೆಯನ್ನು ಆಯೋಜಿಸಲಾಗಿದೆ. ನುಳ್ಳಿಪ್ಪಾಡಿ ಶ್ರೀ ಅಯ್ಯಪ್ಪ ಕ್ಷೇತ್ರ ವಠಾರದಿಂದ ಆರಂಭವಾಗುವ ಈ ಮೆರವಣಿಗೆಯು ಎಂ.ಜಿ. ರಸ್ತೆ, ಟ್ರಾಫಿಕ್ ಸರ್ಕಲ್, ಮಲ್ಲಿಕಾರ್ಜುನ ದೇವಸ್ಥಾನ, ಏರ್‍ಲೈನ್ ಸರ್ಕಲ್, ಕಾಸರಗೋಡು ಅಂಚೆ ಕಚೇರಿ ಮತ್ತು ಎಲ್‍ಐಸಿ ಕಚೇರಿಯ ಮೂಲಕ ಸಾಗಿ, ಕಾಸರಗೋಡು ಸರ್ಕಾರಿ ಹಿರಿಯ ಮಾಧ್ಯಮಿಕ ಶಾಲೆಯಲ್ಲಿ ಮುಕ್ತಾಯಗೊಳ್ಳಲಿದೆ. ಮೆರವಣಿಗೆಯಲ್ಲಿ ಶಿಂಗಾರಿ ಮೇಳ, ಚೆಂಡೆ ಮೇಳ ಸೇರಿದಂತೆ ವಿವಿಧ ಕಲಾ ಪ್ರಕಾರಗಳು ಪ್ರದರ್ಶನಗೊಳ್ಳಲಿವೆ.
ಮೆರವಣಿಗೆಯ ನಂತರ, ಸಂಜೆ 5:30ಕ್ಕೆ ಸ್ಥಳೀಯಾಡಳಿತ ಸಚಿವ ಕೆ.ಎಂ. ಶಾಜಿ ಅವರು ಸಮಾರೋಪ ಸಮಾರಂಭವನ್ನು ಉದ್ಘಾಟಿಸಲಿದ್ದಾರೆ. ಇದರ ಬೆನ್ನಲ್ಲೇ, ಸಂಜೆ 7:00 ರಿಂದ 9:30 ರವರೆಗೆ ಸುರುಮಿ ವಯನಾಡ್ ಮತ್ತು ಅವರ ತಂಡದಿಂದ ಸಂಗೀತ ಕಾರ್ಯಕ್ರಮ ನಡೆಯಲಿದೆ.

