ಬೆಂಗಳೂರು: ಓಣಂ ಹಬ್ಬದ ಪ್ರಯುಕ್ತ ಬೆಂಗಳೂರಿನಿಂದ ಕೇರಳಕ್ಕೆ ವಿಶೇಷ ರೈಲಿಗೆ ಅನುಮತಿ ನೀಡಲಾಗಿದೆ. ಆಗಸ್ಟ್ 20 ರಂದು ಬೆಂಗಳೂರು ಕಂಟೋನ್ಮೆಂಟ್‍ನಿಂದ ಕಣ್ಣೂರಿಗೆ ಮತ್ತು 21 ರಂದು ಕಣ್ಣೂರಿನಿಂದ ಬೆಂಗಳೂರಿಗೆ ವಿಶೇಷ ರೈಲು ಸೇವೆಯನ್ನು ಘೋಷಿಸಲಾಗಿದೆ.
ಬೆಂಗಳೂರು ಕಂಟೋನ್ಮೆಂಟ್-ಕಣ್ಣೂರು ರೈಲು 20 ರಂದು ರಾತ್ರಿ 10.30 ಕ್ಕೆ ಹೊರಟು 21 ರಂದು ಮಧ್ಯಾಹ್ನ 12.50 ಕ್ಕೆ ಕಣ್ಣೂರಿಗೆ ತಲುಪಲಿದೆ.
ಕಣ್ಣೂರು-ಬೆಂಗಳೂರು ಕಂಟೋನ್ಮೆಂಟ್ ರೈಲು 21 ರಂದು ಸಂಜೆ 4.10 ಕ್ಕೆ ಕಣ್ಣೂರಿನಿಂದ ಹೊರಟು 22 ರಂದು ಬೆಳಿಗ್ಗೆ 6 ಗಂಟೆಗೆ ಬೆಂಗಳೂರಿಗೆ ತಲುಪಲಿದೆ.
23 ಬೋಗಿಗಳು ಇರುತ್ತವೆ. ಸೇವೆಯು ಪಾಲಕ್ಕಾಡ್ ಮೂಲಕ ಇರುತ್ತದೆ. ನಿಲ್ದಾಣಗಳು ಬೆಂಗಳೂರು, ಕೃಷ್ಣರಾಜಪುರಂ, ಬಂಗಾರಪೇಟೆ, ಕುಪ್ಪಂ, ಸೇಲಂ, ಈರೋಡ್, ತಿರುಪ್ಪೂರು, ಪೆÇೀದನೂರು. ಪಾಲಕ್ಕಾಡ್, ಶೋರನೂರು, ತಿರೂರ್, ಪರಪ್ಪನಂಗಡಿ, ಕೋಝಿಕ್ಕೋಡ್, ವಡಕರ, ತಲಸ್ಸೇರಿ ಮತ್ತು ಕಣ್ಣೂರು ನಿಲ್ದಾಣಗಳಿರಲಿವೆ.

