HEALTH TIPS

ಸ್ವಾತಂತ್ರ್ಯ ದಿನಾಚರಣೆ-ಜಿಲ್ಲೆಯಲ್ಲಿ ಸ್ಥಳೀಯಾಡಳಿತ ಸಚಿವರಿಂದ ಧ್ವಜಾರೋಹಣ

ಕಾಸರಗೋಡು: ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಕಾಸರಗೋಡು ನಗರಸಭಾ ಕ್ರೀಡಾಂಗಣದಲ್ಲಿ ನಡೆಯಲಿರುವ ಪಥಸಂಚಲನದಲ್ಲಿ  ಜಿಲ್ಲಾ ಉಸ್ತುವಾರಿ ಹಾಗೂ ಸ್ಥಳೀಯಾಡಳಿತ ಖಾತೆ ಸಚಿವ ಕೆ.ಎಂ. ಶಾಜಿ ಅವರು ಧ್ವಜಾರೋಹಣ ನೆರವೇರಿಸಿ ಗೌರವ ವಂದನೆಯನ್ನು ಸ್ವೀಕರಿಸುವರು.  

ಜಿಲ್ಲೆಯಲ್ಲಿ ಸ್ವಾತಂತ್ರ್ಯ ದಿನಾಚರಣೆಯ ಸಿದ್ಧತೆಗಳು ಪೂರ್ಣಗೊಂಡಿದ್ದು, ಆಗಸ್ಟ್ 10 ರಂದು ಪರೇಡ್‍ನ ತಾಲೀಮು ಆರಂಭಗೊಳ್ಳಲಿದೆ.  ಸ್ವಾತಂತ್ರ್ಯದಿನಾಚರಣೆಯ ಪಥಸಂಚಲನದಲ್ಲಿಸಶಸ್ತ್ರ ಪಡೆಗಳು, ಪೆÇಲೀಸ್, ಅಬಕಾರಿ, ವೃತ್ತಿಪರ ಉನ್ನತ ಪ್ರೌಢ ಶಿಕ್ಷಣ ವಿಭಾಗ, ವಿದ್ಯಾರ್ಥಿ ಪೆÇಲೀಸ್ ಕೆಡೆಟ್‍ಗಳು, ಎನ್‍ಸಿಸಿ ಮತ್ತು ಶಾಲಾ ಬ್ಯಾಂಡ್ ತಂಡಗಳು ಒಳಗೊಂಡಂತೆ ಹದಿನಾರು ತುಕಡಿಗಳು ಪಾಲ್ಗೊಳ್ಳಲಿದೆ. ಭದ್ರತಾ ಕ್ರಮದ ಅಂಗವಾಗಿ, ಕಾಸರಗೋಡು ಪೆÇಲೀಸರು ಆಗಸ್ಟ್ 9ರ ವೇಳೆಗೆ ಪರೇಡ್ ಮೈದಾನದ ಉಸ್ತುವಾರಿಯನ್ನು ವಹಿಸಿಕೊಳ್ಳಲಿದ್ದು, ಸಂಚಾರ ನಿಯಂತ್ರಣ ಕ್ರಮಗಳನ್ನು ಜಾರಿಗೆ ತರಲಿದ್ದಾರೆ. ಆಗಸ್ಟ್ 10ರಂದು ಪರೇಡ್ ತಾಲೀಮು ಆರಂಭವಾಗಲಿದೆ. ನಗರಸಭಾ ಕ್ರೀಡಾಂಗಣದಲ್ಲಿ ಪೆಂಡಾಲ್ ನಿರ್ಮಾಣ, ಆಸನ ವ್ಯವಸ್ಥೆ ಮತ್ತು ವೇದಿಕೆಯ ಸೌಲಭ್ಯಗಳಲ್ಲದೆ, ಕುಡಿಯುವ ನೀರು, ಸಾರ್ವಜನಿಕ ಪ್ರಸಾರ ವ್ಯವಸ್ಥೆ (ಪಿಎ ಸಿಸ್ಟಮ್), ದೀಪಾಲಂಕಾರ ಹಾಗೂ ಆರೋಗ್ಯ ಸೇವೆಗಳ ವ್ಯವಸ್ಥೆಯನ್ನು ಕಾರ್ಯನಿರ್ವಾಹಕ ಎಂಜಿನಿಯರ್ ಮೇಲ್ವಿಚಾರಣೆ ಮಾಡಲಿದ್ದಾರೆ. 


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries