ಕಾಸರಗೋಡು: ನಗರದ ಬಿ.ಇ.ಎಂ.ಹೈಯರ್ ಸೆಕೆಂಡರಿ ಶಾಲೆಯ ವಿದ್ಯಾರಂಗ ಸಾಹಿತ್ಯ ವೇದಿಕೆ ಆಶ್ರಯದಲ್ಲಿ ವಿದ್ಯಾರ್ಥಿಗಳಿಗಾಗಿ ನಾಟಿ ಉತ್ಸವ ಆಯೋಜಿಸಲಾಯಿತು. ಕೂಡ್ಲು ಕುತ್ಯಾಳ ಶ್ರೀ ಗೋಪಾಲಕೃಷ್ಣ ದೇವಸ್ಥಾನದ ಸಮೀಪವಿರುವ ಮೋಹಿನಿ ರಾವ್ ಅವರ ಗದ್ದೆಯಲ್ಲಿ ವಿದ್ಯಾರ್ಥಿಗಳು ನೇಜಿ ನೆಡುವ ಮೂಲಕ ನಾಟಿ ಉತ್ಸವ ನಡೆಸಿದರು.
ಪ್ರಾರಂಭದಲ್ಲಿ ಮೋಹಿನಿ ರಾವ್ ಅವರು ಭತ್ತದ ಕೃಷಿಯ ವಿವಿಧ ಹಂತಗಳ ಬಗ್ಗೆ, ಕೂಡ್ಲು ಮನೆತನ, ಸಂಪಿಗೆ ಚಾವಡಿ ಹಾಗೂ ಪುರಾತನ ಪದ್ಧತಿಯ ಸಂಕ್ಷಿಪ್ತ ಮಾಹಿತಿಯನ್ನು ವಿದ್ಯರ್ಥಿಗಳಿಗೆ ವಿವಿರಿಸಿದರು.
ಶಾಲೆಯ ಎಸ್.ಎಂ.ಸಿ. ಚಯರ್‍ಮ್ಯಾನ್ ಕೂಡ್ಲು ಮನೆತನದ ನಿಕಟವರ್ತಿ ಡಾ. ಕೆ.ಎನ್. ವೆಂಕಟ್ರಮಣ ಹೊಳ್ಳ ಕಾರ್ಯಕ್ರಮಕ್ಕೆ ನೇತೃತ್ವ ನೀಡಿದರು. ವಿದ್ಯಾರಂಗ ಕಲಾ ಸಾಹಿತ್ಯ ವೇದಿಕೆಯ ಸಂಚಾಲಕಿ ರೋಹಿತಾಕ್ಷಿ ಟೀಚರ್, ರಕ್ಷಿತಾ ಟೀಚರ್, ಸೌಮ್ಯ ಟೀಚರ್ ಸಂರಕ್ಷಕರಾಗಿ ಜೊತೆಗಿದ್ದರು. ಮೋಹಿನಿ ರಾವ್ ಅವರನ್ನು ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷ, ಕಾಸರಗೋಡು ನಗರಸಭಾ ಸದಸ್ಯರೂ ಆದ ಹರೀಶ್ ಕೆ.ಆರ್ ಶಾಲು ಹೊದಿಸಿ ಗೌರವಿಸಿದರು. ಕಾರ್ಯಕ್ರಮದಲ್ಲಿ ಗಾಯಕ ವಸಂತ ಬಾರಡ್ಕ ಅವರು ಕೃಷಿ ಪ್ರಧಾನ ಹಾಡನ್ನು ಹಾಡಿ ಮಕ್ಕಳ ಮನರಂಜಿಸಿದರು. ಸ್ಥಳೀಯ ನಿವಾಸಿ ತುಳಸಿ ಅವರು ನೇಜಿ ನಡುವಲ್ಲಿ ಸಹಕರಿಸಿದರು.


