ಕಾಸರಗೋಡು: ಜಿಲ್ಲೆಯ ಐ.ಸಿ.ಡಿ.ಎಸ್ ವ್ಯಾಪ್ತಿಯ ಮಧೂರು, ಕುಂಬಳೆ, ಮೊಗ್ರಾಲ್‍ಪುತ್ತೂರು, ಕಾಸರಗೋಡು ನಗರಸಭೆ ಒಳಗೊಂಡಂತೆ 140 ಅಂಗನವಾಡಿಗಳಿಗೆ ವಾರಕ್ಕೆ ಮೂರು ದಿನ ಕೋಳಿ ಮೊಟ್ಟೆ ಪೂರೈಸಲು ಟೆಂಡರ್ ಆಹ್ವಾನಿಸಲಾಗಿದೆ. ಟೆಂಡರ್ ಸಲ್ಲಿಸಲು ಆಗಸ್ಟ್ 14 ಕೊನೆಯ ದಿನಾಂಕವಾಗಿದ್ದು, ಅಂದೇ ಮಧ್ಯಾಹ್ನ 2.30 ಗಂಟೆಗೆ ಟೆಂಡರ್ ತೆರೆಯಲಾಗುವುದು.
ಈ ಬಗ್ಗೆ ಮಾಹಿತಿಗಾಗಿ ದೂರವಾಣಿ ಸಂಖ್ಯೆ(ಮಧೂರು - 9961806928, ಕುಂಬಳೆ- 8075431304, ಮೊಗ್ರಾಲ್-6238228006, ನಗರಸಭೆ-9048605254)ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.
ಸೆಕ್ಯುರಿಟಿ ಗಾರ್ಡ್ ನೇಮಕಾತಿ:
ಕಾಸರಗೋಡು ಸಿಪಿಸಿಆರ್‍ಐ ನಲ್ಲಿ ಸೆಕ್ಯುರಿಟಿ ಗಾರ್ಡ್ ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿದೆ. ಆಗಸ್ಟ್ 14ರೊಳಗೆ ಅರ್ಜಿಗಳನ್ನು ಸಲ್ಲಿಸಬೇಕು. ವಯೋಮಿತಿ: 50 ವರ್ಷಗಳಾಗಿದ್ದು, ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ (04994 256860) ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.


