ಅಗರ್ತಲಾ: ಶಾಲೆಯ ಅಂಗಳದಿಂದ ಸಂಸತ್ ಅಂಗಳಕ್ಕೆ ತಲುಪಿದ್ದ ಬಿಜೆಪಿಯ ಮಾಜಿ ಸಂಸದ ರೇಬತಿ ತ್ರಿಪುರಾ, ಇದೀಗ ಮತ್ತೆ ಶಾಲೆಯತ್ತ ಮುಖ ಮಾಡಿದ್ದಾರೆ. ತಮ್ಮ ರಾಜಕೀಯ ಜೀವನದಿಂದ ಹಠಾತ್ ವಿರಾಮ ಪಡೆದಿರುವ ಅವರು, ಶಿಕ್ಷಕನ ವೃತ್ತಿಯು ಕನಿಷ್ಠ ಭವಿಷ್ಯದ ಪಿಂಚಣಿಯ ಖಾತರಿಯನ್ನಾದರೂ ನೀಡುತ್ತದೆ ಎಂದಿದ್ದಾರೆ.
ತ್ರಿಪುರಾದ ಧಲೈ ಜಿಲ್ಲೆಯ ಕುಗ್ರಾಮವೊಂದರ ನಿವಾಸಿಯಾಗಿರುವ ರೇಬತಿ, 2014ರಲ್ಲಿ ಬಿಜೆಪಿ ಸೇರಿದ್ದರು. 2019ರಲ್ಲಿ ಸಂಸದರೂ ಆದರು. ಆದರೆ, 2024ರ ಚುನಾವಣೆಯಲ್ಲಿ ಬಿಜೆಪಿಯು ರೇಬತಿ ಅವರ ಬದಲಿಗೆ ಕೃತಿ ದೇವಿ ದೆಬ್ಬರ್ಮ ಅವರನ್ನು ಕಣಕ್ಕಿಳಿಸುವ ಮೂಲಕ ರೇಬತಿ ಅವರನ್ನು ಬದಿಗೆ ಸರಿಸಿತು.

