HEALTH TIPS

ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಬಿಎಂಎಸ್ ವತಿಯಿಂದ ಮೆರವಣಿಗೆ, ಸಾರ್ವಜನಿಕ ಸಭೆ

ಕಾಸರಗೋಡು: ಭಾರತೀಯ ಮಜ್ದೂರ್ ಸಂಘದ (ಬಿಎಂಎಸ್) ರಾಷ್ಟ್ರವ್ಯಾಪಿ ಪ್ರತಿಭಟನೆಯ ಅಂಗವಾಗಿ ಕಾಸರಗೋಡಿನಲ್ಲಿ ಪ್ರತಿಭಟನಾ ಮೆರವಣಿಗೆ ಮತ್ತು ಸಾರ್ವಜನಿಕ ಸಭೆಯನ್ನು ಆಯೋಜಿಸಲಾvಯಿತು. 


ಬಿಎಂಎಸ್ ಕಾಸರಗೋಡು ಜಿಲ್ಲಾ ಸಮಿತಿ ವತಿಯಿಮದ ನಡೆದ ಸಮಾರಂಭದಲ್ಲಿ Pನಗರದ ಕರಂದಕ್ಕಾಡಿನಿಂದ ಆರಂಭಗೊಂಡ ಕಾರ್ಮಿಕರ ಮೆರವಣಿಗೆ ಕಾಸರಗೋಡಿನ ಹೊಸ ಬಸ್ ನಿಲ್ದಾಣ ವರೆಗೆ ನಡೆಯಿತು.  ಈ ಸಂದರ್ಭ ನಡೆದ ಸಾರ್ವಜನಿಕ ಸಭೆಯನ್ನು ಬಿಎಂಎಸ್ ರಾಜ್ಯ ಉಪಾಧ್ಯಕ್ಷ ವಕೀಲ ಪಿ. ಮುರಳೀಧರನ್  ಉದ್ಘಾಟಿಸಿದರು.  ಬಿಎಂಎಸ್ ಜಿಲ್ಲಾ ಅಧ್ಯಕ್ಷ ಉಪೇಂದ್ರನ್ ಕೋಟೆಕಣಿ ಅಧ್ಯಕ್ಷತೆ ವಹಿಸಿದ್ದರು. 

ಕೇಂದ್ರ ಸರ್ಕಾರವು 29 ಕಾರ್ಮಿಕ ಕಾನೂನುಗಳನ್ನು ನಾಲ್ಕು ಸಂಹಿತೆಗಳಾಗಿ ಕ್ರೋಢೀಕರಿಸಿರುವ ಕ್ರಮದ ಭಾಗವಾಗಿರುವ 'ಕೈಗಾರಿಕಾ ಸಂಬಂಧಗಳ ಸಂಹಿತೆ' ಕೆಲೊಂದು  ನ್ಯೂನತೆಗಳನ್ನು ಸರಿಪಡಿಸಬೇಕು, ಅಂಗನವಾಡಿ, 'ಆಶಾ'ಮತ್ತು ವಿವಿಧ ಯೋಜನೆಗಳಡಿ ಕಾರ್ಯನಿರ್ವಹಿಸುವ ಸಿಬ್ಬಂದಿಯ ಗೌರವಧನ ಹೆಚ್ಚಿಸುವುದರೊಂದಿಗೆ ಅವರನ್ನು ಸರ್ಕಾರಿ ನೌಕರರೆಂದು ಪರಿಗಣಿಸುವುದು ಮತ್ತು ಇಎಸ್‍ಐ ಹಾಗೂ ಇಪಿಎಫ್ ವ್ಯಾಪ್ತಿಯ ಮಿತಿಗಳನ್ನು ಹೆಚ್ಚಿಸುವುದು ಸೇರಿದಂತೆ ಹನ್ನೆರಡರಷ್ಟು ಬೇಡಿಕೆಗಳನ್ನು ಮುಂದಿಟ್ಟುಕೊಂಡು ಈ ಪ್ರತಿಭಟನೆಯನ್ನು ಆಯೋಜಿಸಲಾಗಿತ್ತು.

ರಾಜ್ಯ ಸಮಿತಿ ಸದಸ್ಯರಾದ ವಿ.ವಿ. ಬಾಲಕೃಷ್ಣನ್, ಉನ್ನಿಕೃಷ್ಣನ್ ಎಂ.ಕೆ. ಮತ್ತು ಟಿ. ಕೃಷ್ಣನ್ ಉಪಸ್ಥಿತರಿದ್ದರು. ಬಿಎಂಎಸ್ ಜಿಲ್ಲಾ ಉಪಾಧ್ಯಕ್ಷ ಭರತನ್ ಕಲ್ಯಾಣ್ ರೋಡ್ ಸ್ವಾಗತಿಸಿದರು. ಜಿಲ್ಲಾ ಉಪಾಧ್ಯಕ್ಷೆ ಗೀತಾ ವಂದಿಸಿದರು. 

ಬಿಎಂಎಸ್ ಜಿಲ್ಲಾ ಪದಾಧಿಕಾರಿಗಳಾದ ದಿನೇಶ ಬಂಬ್ರಾಣ, ಮಿನಿ ಶ್ರೀನಿವಾಸನ್, ಸುನಿಲ್ ಮುಲ್ಲಚೇರಿ, ಅನಿಲ್ ಬಿ.ನಾಯರ್, ಗುರುದಾಸ್ ಮಧೂರು, ಪ್ರದೀಪ್ ಕೇಳೋತ್, ಹರೀಶ್ ಕುದ್ರಿಪಾಡಿ, ಭಾಸ್ಕರನ್ ಪೆÇಯಿನಾಚಿ, ಯಶವಂತಿ ಮೀಂಜ, ಮತ್ತು ಮನೀಶ್ ಲೀಲಾಕೃಷ್ಣನ್ ಪ್ರತಿಭಟನೆಯ ನೇತೃತ್ವ ವಹಿಸಿದ್ದರು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries