ಬದಿಯಡ್ಕ: ಎಡನೀರು ಜಗದ್ಗುರು ಶ್ರೀ ಶಂಕರಾಚಾರ್ಯ ಸಂಸ್ಥಾನದ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ ಅವರ ಆರನೇ ಚಾತುರ್ಮಾಸ್ಯ ವ್ರತಾಚರಣೆಯ ಸಾಂಸ್ಕøತಿಕ ಕಾರ್ಯಕ್ರಮದ ಅಂಗವಾಗಿ ಶಾಸ್ತ್ರೀಯ ಸಂಗೀತ ಕಾರ್ಯಕ್ರಮ ಆ. 19ರಂದು ಸಂಜೆ 6ಕ್ಕೆ ಶ್ರೀ ಮಠದ ಸಭಾಂಗಣದಲ್ಲಿ ಜರುಗಲಿದೆ. ವಿದ್ವಾನ್ ಲಕ್ಷ್ಮಿ ಭಾಸ್ಕರ್ ಅವರಿಂದ ಹಾಡುಗಾರಿಕೆ ನಡೆಯುವುದು. ವಯಲಿನ್‍ನಲ್ಲಿ ವಿದ್ವಾನ್ ಕಾರ್ತಿಕ್ ಕೋಶಿಕ್, ವಿದ್ವಾನ್ ನಂದನ್ ಕಾಶ್ಯಪ್ ಮೃದಂಗ ಹಾಗೂ ವಿದ್ವಾನ್ ಧೀಮಂತ್ ಭಟ್ ಘಟಂನಲ್ಲಿ ಸಹಕರಿಸುವರು.
ರಾತ್ರಿ ಗಂಟೆ 8ರಿಂದ ಕಾರಗೋಡು ಉಳಿಯತ್ತಡ್ಕ ತನ್ಮಯ ಸ್ಕೂಲ್ ಆಫ್ ಡ್ಯಾನ್ಸ್ ವತಿಯಿಂದ ನೃತ್ಯಾಂಜಲಿ ನಡೆಯುವುದು.
ಆ. 20ರಿಂದ ಬೆಂಗಳೂರಿನ ಅನೂರು ಅನಂತಕೃಷ್ಣ ಶರ್ಮಾ ಫೌಂಡೇಶನ್ ಫೆÇೀರ್ ಮ್ಯೂಸಿಕ್ ಪ್ರಸ್ತುತಪಡಿಸುವ 'ಸಂಗೀತ ಹಬ್ಬ'ನಡೆಯಲಿರುವುದು.


