ಕುಂಬಳೆ: ಕುಂಬಳೆಯ ಚಿರಂಜೀವಿ ಸಂಸ್ಥೆ ವತಿಯಿಂದ 80ನೇ ಸ್ವಾತಂತ್ರ್ಯೋತ್ಸವವನ್ನು ಆಗಸ್ಟ್ 15ರಂದು ವಿಶಿಷ್ಟ ರೀತಿಯಲ್ಲಿ ಆಚರಿಸಲಾಯಿತು. ಕಾಸರಗೋಡು ಬ್ಲಾಕ್ ಪಂಚಾಯಿತಿ ಸದಸ್ಯ ಪೃಥ್ವಿರಾಜ್ ಶೆಟ್ಟಿ, ಪಂಚಾಯತ್ ಸದಸ್ಯರಾದ ರಮೇಶ್ ಭಟ್, ಉದ್ಯಮಿ ನಾರಾಯಣ ಪ್ರಭು, ಸತೀಶ್ ನಾಯಕ್ ಅತಿಥಿಗಳಾಗಿ ಭಾಗವಹಿಸಿದರು.
ಈ ಸಂದರ್ಭ ಸಾಮಾಜಿಕ ಕಳಕಳಿಯೊಂದಿಗೆ ಗಡಿನಾಡಿನ ಶಾಲಾ ಮಕ್ಕಳಿಗೆ ಉಚಿತ ಪ್ರಯಾಣದ ಸೌಲಭ್ಯ ಕಲ್ಪಿಸುವಲ್ಲಿ ಪ್ರಯತ್ನಿಸಿದ ಕುಂಬಳೆ ಕಾಂಗ್ರೆಸ್ ಮಂಡಲ ಅಧ್ಯಕ್ಷರಾದ ರವಿ ಪೂಜಾರಿ ಅವರನ್ನು ಉದ್ಯಮಿ ನಾರಾಯಣ ಪ್ರಭು ಸನ್ಮಾನಿಸಿದರು. ಇದೇ ಸಂದರ್ಭ ಕುಂಬಳೆಯ ಸಮೀಪದ ನಾಯಕ್ಸ್ ಜಂಕ್ಷನ್‍ನಲ್ಲಿ ನಾಲ್ಕು ರಸ್ತೆಗಳು ಒಟ್ಟುಸೇರುವ ಸ್ಥಳದಲ್ಲಿ ವಾಹನ ಚಾಲಕರಿಗೆ ಅನುಕೂಲವಾಗುವಂತೆ ಕಾನ್ವೆಕ್ಸ್ ಮಿರರ್ ಅಳವಡಿಸಲಾಯಿತು. ಬ್ಲಾಕ್ ಪಂಚಾಯತ್ ಸದಸ್ಯರಾದ ಪೃಥ್ವಿರಾಜ್ ಜಗನ್ನಾಥ್ ಶೆಟ್ಟಿ ಉದ್ಘಾಟಿಸಿದರು.
ಕಾರ್ಯಕ್ರಮದಲ್ಲಿ ಚಿರಂಜೀವಿ ಸಂಸ್ಥೆಯ ಅಧ್ಯಕ್ಷ ಬಾಲಕೃಷ್ಣ ಗಟ್ಟಿ, ಉಪಾಧ್ಯಕ್ಷ ಕೆ.ಸಿ. ಮೋಹನ್, ಕಾರ್ಯದರ್ಶಿ ಕೃಷ್ಣ ಕುಂಬಳೆ, ಜೊತೆ ಕಾರ್ಯದರ್ಶಿಗಳಾದ ಪ್ರಣವ್ ಭಂಡಾರಿ ಕಾರ್ಲೆ, ಕಿರಣ್ ಪೂಜಾರಿ, ಕೋಶಾಧಿಕಾರಿ ಗೋಪಿ, ಸಂತೋಷ ಕುಂಬಳೆ, ದೀಪಕ್ ಕೃಷ್ಣನಗರ, ನವೀನ್, ರತ್ನಾಕರ ರೈ ಕುಂಡಾಪು, ರವಿ ನಾಯ್ಕಾಪು, ವಿನಯ್ ಕುಮಾರ್, ಸತೀಶ್ ಶಾಂತಿಪಳ್ಳ, ವಿಜಯ್ ಕುಮಾರ್ ಮೊಗ್ರಾಲ್, ವೈಶಾಕ್, ನಾರಾಯಣ ಪೂಜಾರಿ, ವಿಶ್ವನಾಥ್ ಭoಡಾರಿ, ಸಂಜೀವ ಅಮೀನ್, ಮಹೇಶ್ವರ, ರಾಜೇಶ್ ದೇವಿನಗರ, ಪ್ರದೀಪ ಕೃಷ್ಣನಗರ, ವಿನೋದ್ ಮಲಂಗರ, ಅಶೋಕ್ ಅಜ್ಜಿಗೋಳಿ, ವಾಸುದೇವ ಗಟ್ಟಿ, ದಯಾಸಾಗರ್, ನಳಿನಿ ಕೋಟೆಕಾರ್, ಮಮತಾ ಕುಲಾಲ್, ಜಲಜಾಕ್ಷಿ, ಮಾಲತಿ, ತನ್ವಿ ಕೆ. ಕೋಟೆಕಾರ್ ಉಪಸ್ಥಿತರಿದ್ದರು. ಕಾರ್ಯದರ್ಶಿ ಕೃಷ್ಣ ಕುಂಬಳೆ ಸ್ವಾಗತಿಸಿದರು. ಪ್ರಜೇಶ್ ಗಟ್ಟಿ ಪೆರ್ವಾಡ್ ವಂದಿಸಿದರು.



