HEALTH TIPS

ಬಾಡೂರು: ಜನವಾಸವಿಲ್ಲದ ಕಟ್ಟಡ ವಠಾರದಲ್ಲಿ ದುರ್ವಾಸನೆಯಿಂದ ಕೂಡಿದ ಮೃತದೇಹ ಪತ್ತೆ

ಕುಂಬಳೆ: ಪುತ್ತಿಗೆ ಪಂಚಾಯಿತಿ ಬಾಡೂರಿನಲ್ಲಿ ಮುಚ್ಚಿದ ಅಂಗಡಿ ವಠಾರದಲ್ಲಿ ಮದ್ಯವಯಸ್ಕರೊಬ್ಬರ  ಮೃತದೇಹ ಭಾನುವಾರ ಪತ್ತೆಯಾಗಿದೆ. ಈ ಪ್ರದೇಶದಲ್ಲಿ ದುರ್ವಾಸನೆ ವ್ಯಾಪಿಸಿದ್ದ ಹಿನ್ನೆಲೆಯಲ್ಲಿ ಸ್ಥಳೀಯರು ನೀಡಿದ ಮಾಹಿತಿಯನ್ವಯ ತಪಾಸಣೆ ನಡೆಸಿದಾಗ ಮೃತದೇಹ ಪತ್ತೆಯಾಗಿದೆ. ಅಂಗಡಿ ವಠಾರದಲ್ಲಿ ವ್ಯಾಪಕವಾಗಿ ಕುರುಚಲು ಕಾಡು ಬೆಳೆದಿದ್ದ ಹಿನ್ನೆಲೆಯಲ್ಲಿ, ಇವರ ಬಗ್ಗೆ ಮಾಹಿತಿ ಲಭಿಸಿರಲಿಲ್ಲ.

ಬಾಡೂರು ಸನಿಹದ ದೇಲಂಪಾಡಿಯ ಅಕ್ಕರಿ ಆಳ್ವ ಅವರ ಪುತ್ರ ವಿಠಲ ಆಳ್ವ(48)ಮೃತ ವ್ಯಕ್ತಿ. ಇವರು ಅವಿವಾಹಿತರಾಗಿದ್ದರು. ಮೃತದೇಹದಿಂದ ದುರ್ವಾಸನೆ ವ್ಯಾಪಿಸಿದ್ದ ಹಿನ್ನೆಲೆಯಲ್ಲಿ ಎರಡು ದಿವಸಗಳ ಹಿಂದೆಯೇ ಸಾವು ಸಂಭವಿಸಿರಬೇಕೆಂದು ಸಂಶಯಿಸಲಾಗಿದೆ. ಬದಿಯಡ್ಕ ಠಾಣೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries