ಕಾಸರಗೋಡು: ನಗರದ ಮೀಪುಗುರಿ ನಿವಾಸಿಗಳಾದ ತಂದೆ ಮತ್ತು ಪುತ್ರಿಯ ಮೃತದೇಹ ಚೆಮ್ನಾಡು ಕೋಳಿಯಡ್ಕ ಶಿವಪುರ ಕ್ಷೇತ್ರದ ಸಮೀಪದ ಬಾಡಿಗೆ ಮನೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿವೆ.
ಮೀಪುಗುರಿ ನಿವಾಸಿ ಗಣೇಶನ್ (55) ಮತ್ತು ಅವರ ಪುತ್ರಿ ವೈಷ್ಣವಿ (17) ಮೃತಪಟ್ಟವರು. ವೈಷ್ಣವಿ ಪರವನಡ್ಕ ಸರ್ಕಾರಿ ಹೈಯರ್ ಸೆಕೆಂಡರಿ ಶಾಲೆಯ ಪ್ಲಸ್ ಟು ವಿದ್ಯಾರ್ಥಿನಿಯಾಗಿದ್ದರು. ಶನಿವಾರ ತಡರಾತ್ರಿ ಮನೆಯ ಮಲಗುವ ಕೋಣೆಯಲ್ಲಿ ಇಬ್ಬರ ಮೃತದೇಹಗಳು ಪತ್ತೆಯಾಗಿವೆ. ಘಟನೆ ಕುರಿತು ಪೆÇಲೀಸರು ತನಿಖೆ ಆರಂಭಿಸಿದ್ದಾರೆ.
ರಾತ್ರಿ 10ರ ವೇಳೆಗೆ ಗಣೇಶನ್ ಮನೆಯಿಂದ ಹೊರಬಂದು, ತಮ್ಮ ಪುತ್ರಿ ಕಾಣೆಯಾಗಿರುವುದಾಗಿ ನೆರೆಯವರ ಬಳಿ ತಿಳಿಸಿದ್ದರು. ಬಳಿಕ ಮನೆಗೆ ಮರಳಿ ಒಳಗೆ ಹೋಗಿ ಬಾಗಿಲು ಹಾಕಿಕೊಂಡಿದ್ದರು. ಇದರಿಂದ ಅನುಮಾನಗೊಂಡ ಸ್ಥಳೀಯರು ಪೆÇಲೀಸರಿಗೆ ಮಾಹಿತಿ ನೀಡಿದ್ದರು. ಸ್ಥಳಕ್ಕೆ ಆಗಮಿಸಿದ ಪೆÇಲೀಸರು ಬಾಗಿಲು ಒಡೆದು ಒಳಪ್ರವೇಶಿಸಿದಾಗ ಗಣೇಶನ್ ಮತ್ತು ವೈಷ್ಣವಿ ಇಬ್ಬರೂ ಮೃತಪಟ್ಟಿರುವುದು ಪತ್ತೆಯಾಯಿತು.
ಘಟನೆ ಸಂದರ್ಭ ಗಣೇಶನ್ ಅವರ ಪತ್ನಿ ಓಮನಾ ಹೋಂ ನರ್ಸ್ ಆಗಿದ್ದು ಕರ್ತವ್ಯಕ್ಕೆ ಹಾಗೂ ಪುತ್ರ ವಿನು ಕ್ಯಾಟರಿಂಗ್ ಕೆಲಸಕ್ಕೆ ತೆರಳಿದ್ದರು. ತಂದೆ ಮತ್ತು ಪುತ್ರಿ ಮೃತಪಟ್ಟಿರುವ ಇದೇ ಬಾಡಿಗೆ ಮನೆಯಲ್ಲಿ ಈ ಹಿಂದೆ ಕೂಡ ಆತ್ಮಹತ್ಯೆ ಪ್ರಕರಣ ನಡೆದಿರುವುದಾಗಿ ಪೋಲೀಸರು ತಿಳಿಸಿದ್ದಾರೆ.



