ಕಾಸರಗೋಡು: ಮುಸ್ಲಿಂ, ಕ್ರಿಶ್ಚಿಯನ್, ಬೌದ್ಧ, ಸಿಖ್, ಪಾರ್ಸಿ ಮತ್ತು ಜೈನ ಅಲ್ಪಸಂಖ್ಯಾತ ಸಮುದಾಯಗಳಿಗೆ ಸೇರಿದ ವಿಧವೆಯರು, ವಿಚ್ಛೇದಿತ, ಪತಿಯಿಂದ ತೊರೆಯಲ್ಪಟ್ಟ ಮಹಿಳೆಯರಿಗಾಗಿ ಇಂಬಿಚ್ಚಿ ಬಾವ ವಸತಿ ನವೀಕರಣ ಯೋಜನೆಯನ್ವಯ ಆರ್ಥಿಕ ನೆರವು ಪಡೆಯಲು ಅರ್ಜಿ ಆಹ್ವಾನಿಸಲಾಗಿದೆ.
ಸೆಪ್ಟಂಬರ್ 10 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವಾಗಿದ್ದು, ಮನೆ ದುರಸ್ತಿಗಾಗಿ 50,000 ಆರ್ಥಿಕ ನೆರವು ನೀಡಲಾಗುತ್ತದೆ. ಅರ್ಜಿದಾರರು ಅಥವಾ ಅವರ ಸಂಗಾತಿಯ ಒಡೆತನದಲ್ಲಿರುವ ಮನೆಯ ವಿಸ್ತೀರ್ಣ ಗರಿಷ್ಠ 1,200 ಚದರ ಅಡಿಗಿಂತ ಹೆಚ್ಚಿರಬಾರದು. ಅರ್ಜಿದಾರರು ಕುಟುಂಬದ ಏಕೈಕ ಆದಾಯ ಮೂಲವಾಗಿದ್ದು, ಬಿಪಿಎಲ್ ಕುಟುಂಬಗಳಿಗೆ ಆದ್ಯತೆ ನೀಡಲಾಗುತ್ತದೆ. ದೈಹಿಕ ಅಥವಾ ಮಾನಸಿಕ ವೈಕಲ್ಯ ಎದುರಿಸುತ್ತಿರುವ ಅರ್ಜಿದಾರರು ಅಥವಾ ದೈಹಿಕ, ಮಾನಸಿಕ ಸವಾಲುಗಳನ್ನು ಎದುರಿಸುತ್ತಿರುವ ಮಕ್ಕಳಿರುವ ಅರ್ಜಿದಾರರು, ಹಾಗೂ ಹೆಣ್ಣುಮಕ್ಕಳನ್ನು ಮಾತ್ರ ಹೊಂದಿರುವ ಅಥವಾ ಮಕ್ಕಳಿಲ್ಲದ ಅರ್ಜಿದಾರರಿಗೆ ಆದ್ಯತೆ ನೀಡಲಾಗುವುದು ಎಂದು ಪ್ರಕಟಣೆ ತಿಳಿಸಿದೆ.

