HEALTH TIPS

ಜಿಲ್ಲಾ ಅಕ್ವಾಟಿಕ್ ಅಕಾಡೆಮಿಯ ಈಜುಕೊಳಕ್ಕೆ ಜಿಲ್ಲಾಧಿಕಾರಿ ಅರ್ಜುನ್ ಪಾಂಡಿಯನ್ ಭೇಟಿ

ಕಾಸರಗೋಡು: ವಿದ್ಯಾನಗರ ನಗರಸಭೆ ಕ್ರೀಡಾಂಗಣದ ಬಳಿಯ ಕಾಸರಗೋಡಿನಲ್ಲಿರುವ ಜಿಲ್ಲಾ ಅಕ್ವಾಟಿಕ್ ಅಕಾಡೆಮಿಯ ಈಜುಕೊಳಕ್ಕೆ ಜಿಲ್ಲಾಧಿಕಾರಿ ಅರ್ಜುನ್ ಪಾಂಡಿಯನ್ ಭೇಟಿ ನೀಡಿದರು. ಮೂಲಸೌಕರ್ಯವನ್ನು ಮತ್ತಷ್ಟು ಸುಧಾರಿಸಲು ಕ್ರಮ ಕೈಗೊಳ್ಳುವಂತೆ ಅವರು ಜಿಲ್ಲಾ ಕ್ರೀಡಾ ಮಂಡಳಿಗೆ ನಿರ್ದೇಶನ ನೀಡಿದರು. ಹೆಚ್ಚಿನ ಆಸನಗಳನ್ನು ಒದಗಿಸುವುದು, ಸೈನ್‍ಬೋರ್ಡ್‍ಗಳನ್ನು ಅಳವಡಿಸುವುದು ಮತ್ತು ಅಕಾಡೆಮಿಯ ಸುತ್ತಮುತ್ತಲಿನ ಪ್ರದೇಶಗಳನ್ನು ಸುಂದರಗೊಳಿಸುವ ಮೂಲಕ ಹೆಚ್ಚಿನ ಈಜು ಉತ್ಸಾಹಿಗಳನ್ನು ಆಕರ್ಷಿಸಬಹುದು ಎಂದು ಜಿಲ್ಲಾಧಿಕಾರಿ ಹೇಳಿದರು.


ಪ್ರಸ್ತುತ ಈಜು ತರಬೇತಿ ನೀಡಲಾಗುತ್ತಿದ್ದರೂ, ಕಡಿಮೆ ಜನರು ತರಬೇತಿಗೆ ಬರುತ್ತಿದ್ದಾರೆ, ಆದ್ದರಿಂದ ಮಹಿಳೆಯರು ಮತ್ತು ಮಕ್ಕಳಿಗೆ ಸೇರಿದಂತೆ ಈಜು ತರಬೇತಿ ನೀಡಲು ಸೌಲಭ್ಯಗಳನ್ನು ಅಭಿವೃದ್ಧಿಪಡಿಸಲು ಜಿಲ್ಲಾಧಿಕಾರಿ ಸೂಚನೆ ನೀಡಿದರು. ಕಾಸರಗೋಡು ನಗರಸಭೆ ಅಧ್ಯಕ್ಷೆ ಶಾಹಿನಾ ಸಲೀಂ ಅವರು ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿದ ಮೇರೆಗೆ ಭೇಟಿ ನೀಡಲಾಯಿತು. ಉಪಾಧ್ಯಕ್ಷೆ ಕೆ.ಎಂ. ಹನೀಫ್, ಜಿಲ್ಲಾ ಕ್ರೀಡಾ ಮಂಡಳಿ ಅಧ್ಯಕ್ಷ ಪೆÇ್ರ. ಪಿ. ರಘುನಾಥ್, ಪುರಸಭೆ ಅಭಿವೃದ್ಧಿ ವ್ಯವಹಾರಗಳ ಸ್ಥಾಯಿ ಸಮಿತಿ ಅಧ್ಯಕ್ಷೆ ಸಮೀನಾ ಮುಜೀಬ್, ಕ್ರೀಡಾ ಮಂಡಳಿ ಕಾರ್ಯದರ್ಶಿ ಕೆ. ಗಣೇಶನ್, ಜಿಲ್ಲಾ ಅಕ್ವಾಟಿಕ್ ಸಂಘದ ಕಾರ್ಯದರ್ಶಿ ಎಂ.ಟಿ.ಪಿ. ಅಶ್ರಫ್ ಅವರು ಜಿಲ್ಲಾಧಿಕಾರಿ ಜೊತೆಗಿದ್ದರು. ಎಚ್‍ಎಎಲ್‍ನ ಸಾಮಾಜಿಕ ಬದ್ಧತಾ ನಿಧಿಯನ್ನು ಬಳಸಿಕೊಂಡು ನಿರ್ಮಿಸಲಾದ ಈಜುಕೊಳವನ್ನು ಜಿಲ್ಲಾಡಳಿತ, ಕಾಸರಗೋಡು ಜಿಲ್ಲಾ ಕ್ರೀಡಾ ಮಂಡಳಿ ಮತ್ತು ಕಾಸರಗೋಡು ನಗರಸಭೆಯನ್ನು ಒಳಗೊಂಡ ಸಮಿತಿಯು ನಿರ್ವಹಿಸುತ್ತಿದೆ. 


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries