ಮಂಜೇಶ್ವರ: ಪೈವಳಿಕೆ ಪಂಚಾಯತಿಯ ಬಾಯಾರಿನಲ್ಲಿ ಆಗಸ್ಟ್ 3ರ ಮುಂಜಾನೆ 3ರಿಂದ ಮಧ್ಯರಾತ್ರಿ ನಡುವೆ (21 ಗಂಟೆಗಳಲ್ಲಿ) 121.5 ಮಿ.ಮೀ ಮಳೆ ಸುರಿದಿದ್ದು, ರಾಜ್ಯದಲ್ಲೇ ಅಧಿಕ ಎಂದು ಐಎಂಡಿ ತಿಳಿಸಿದೆ.
ಕಾಸರಗೋಡಿನ ಮುಳಿಯಾರ್‍ನಲ್ಲಿ 81 ಮಿ.ಮೀ ಹಾಗೂ ಕಣ್ಣೂರು ಏರ್‍ಪೋರ್ಟ್‍ನಲ್ಲಿ 74 ಮಿ.ಮೀ ಮಳೆಯಾಗಿದೆ. ಕೋಯಿಕ್ಕೋಡಿನ ಉರುಮಿಯಲ್ಲಿ 65 ಮಿ.ಮೀ. ಮಳೆಯಾಗಿದೆ.
ಕಣ್ಣೂರಿನ ಚೆರುವಾಂಚೇರಿ ಹಾಗೂ ಕಾಸರಗೋಡಿನ ಪಿಲಿಕೋಡಿನಲ್ಲಿ 59.9 ಮಿ.ಮೀ ಮಳೆಯಾಗಿದೆ. ಏರ್ನಾಕುಳಂನ ನೆರಿಯಮಂಗಳಂನಲ್ಲಿ 59 ಮಿ.ಮೀ ಮಳೆಯಾಗಿದೆ.
ಐಎಂಡಿ ಪ್ರಕಾರ 24 ಗಂಟೆಯಲ್ಲಿ 60 ಮಿ.ಮೀ ಗಿಂತ ಹೆಚ್ಚು ವರ್ಷಧಾರೆಯಾಗಿದ್ದರೆ ಅದನ್ನು ಭಾರಿ ಪ್ರಮಾಣದ ಮಳೆ ಎಂದು ಪರಿಗಣಿಸಲಾಗುತ್ತದೆ.
ಮಂಗಳವಾರ ಬೆಳಿಗ್ಗೆ ವೇಳೆಗೆ ಮುವಾಟ್ಟುಪುಝ ಹಾಗೂ ತೋಡುಪುಝ ನದಿಗಳಲ್ಲಿ ಹರಿವಿನ ಪ್ರಮಾಣ ಇಳಿಕೆಯಾಗುತ್ತಿದ್ದರೂ ನೀರಿನ ಪ್ರಮಾಣ ಅಪಾಯಮಟ್ಟದಲ್ಲಿಯೇ ಇದೆ. ಕಳಿಯಾರ್ ನದಿಯಲ್ಲಿ ನೀರಿನ ಪ್ರಮಾಣ ಅಪಾಯ ಮಟ್ಟಕ್ಕಿಂತ ಕೆಳಗಿದೆ.

