HEALTH TIPS

ಗ್ಲೋರಿ ಆಫ್ ಇಂಡಿಯಾ ಅವಾರ್ಡ್ ಮುಡಿಗೇರಿಸಿದ ಡಾ. ಮಲ್ಲಿಕಾರ್ಜುನ ಎಸ್ ನಾಸಿ-ರಾಷ್ಟ್ರೀಯ ಪ್ರಶಸ್ತಿ ಪ್ರದಾನ ಸಮಾರಂಭ

ಕಾಸರಗೋಡು: ಕರ್ನಾಟಕ ಜಾನಪದ ಪರಿಷತ್ತಿನ ಕೇರಳ ಘಟಕದ  ಅಧ್ಯಕ್ಷ ಹಾಗೂ  ಹಿರಿಯ ವೈದ್ಯ, ಶ್ರೇಷ್ಠ ಹೊರನಾಡ ಕನ್ನಡಿಗ ಪ್ರಶಸ್ತಿ ಪುರಸ್ಕøತ ಡಾ. ಮಲ್ಲಿಕಾರ್ಜುನ ಎಸ್ ನಾಸಿ ಅವರಿಗೆ ದೆಹಲಿಯ ಗ್ಲೋಬಲ್ ಅಚೀವ್‍ಮೆಂಟ್ ಕೌನ್ಸಿಲ್ ನೀಡುವ ಪ್ರತಿಷ್ಠಿತ ಗ್ಲೋಬಲ್ ಐಕಾನಿಕ್ ಅಚೀವ್ಮೆಂಟ್ ಪ್ರಶಸ್ತಿ ನೀಡಿ ಗೌರವಿಸಲಾಯಿತು.


 

ನವದೆಹಲಿಯಲ್ಲಿ ಗ್ಲೋಬಲ್ ಅಚೀವರ್ಸ್ ಕೌನ್ಸಿಲ್ ಆಯೋಜಿಸಿದ ಗ್ಲೋರಿ ಆಫ್ ಇಂಡಿಯಾ ಅವಾರ್ಡ್ -2026 ರಾಷ್ಟ್ರೀಯ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಛತ್ತೀಸ್‍ಗಡ್ ರಾಜ್ಯ ವಸತಿ ಮತ್ತು ನಗರಾಭಿವೃದ್ಧಿ  ಸಚಿವ ತೊಖನ್ ಸಾಹು ಪ್ರಶಸ್ತಿ ಪ್ರದಾನ ಮಾಡಿದರು.  ಕೇಂದ್ರ ಕಾನೂನು ಮತ್ತು ನ್ಯಾಯ ಸಚಿವಾಲಯದ ಹಿಂದಿ ಸಲಹಾ ಸಮಿತಿ ಸದಸ್ಯೆ ವೈಶಾಲಿ ತೊಮರ್, ಡಾ ಜಿ ಶಿವಬಾಲ ಮುರುಗನ್. ಡಾ ಶೈಜು ಡೊಲ್ಪಿ ಮೊದಲಾದವರು ಉಪಸ್ಥಿತರಿದ್ದರು. ಸಮಾಜ ಸೇವೆ ಹಾಗೂ ನಾಯಕತ್ವ,  ಆರೋಗ್ಯ ಕ್ಷೇತ್ರಕ್ಕೆ ನೀಡಿದ ಸೇವೆಯನ್ನು ಗುರುತಿಸಿ ಈ ಪ್ರಶಸ್ತಿಯನ್ನು ನೀಡಲಾಗಿದೆ 

ಮೂಲತಃ ಕಲಬುರ್ಗಿ ಜಿಲ್ಲೆಯವರಾದ ನಾಸಿ ಅವರು  2004ರಲ್ಲಿ ಕೇರಳದ ಕೊಚ್ಚಿನ್‍ಗೆ ಆಗಮಿಸಿದ್ದು, 2016ರಲ್ಲಿ ಪೆÇೀತನಿಕ್ಕಾಡ್‍ನಲ್ಲಿ ಸೈಂಟ್‍ಮೇರಿಸ್ ಎಂಬ ಆಸ್ಪತ್ರೆಯನ್ನು ತೆರೆದು ಇಲ್ಲಿ ಜನಾನುರಾಗಿ ವೈದ್ಯರಾಗಿ ಸೇವೆ ಸಲ್ಲಿಸುತ್ತಿದ್ದಾರೆ

ಈ ಪ್ರದೇಶದಲ್ಲಿರುವ ಕನ್ನಡ ಭಾಷಿಗರನ್ನು ಒಗ್ಗೂಡಿಸಿ ಅವರಲ್ಲಿ ಕನ್ನಡ ಭಾಷೆ, ಸಂಸ್ಕೃತಿ ಕಲೆಗಳನ್ನು ಬೆಳೆಸಲು ನಿರಂತರ ಪೆÇ್ರೀತ್ಸಾಹ ನೀಡುತ್ತಾ ಬಂದಿದ್ದಾರೆ, ಕನ್ನಡ ಮತ್ತು ಮಲೆಯಾಲ ಭಾಷಾ ಸೌಹಾರ್ದತೆಗೆ ಹೆಚ್ಚಿನ ಕೊಡುಗೆ ನೀಡಿದ್ದಾರೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries