HEALTH TIPS

ವಿಡಿಯೋ ಕಾಲ್ ಬಳಿಕ ಆತ್ಮಹತ್ಯೆ ಮಾಡಿಕೊಂಡ ಕಾಸರಗೋಡಿನ ಯುವತಿ; ಆಕೆಯೊಂದಿಗೆ ನಿಶ್ಚಿತಾರ್ಥವಾದ ಯುವಕನೂ ಆತ್ಮಹತ್ಯೆ

ಕಾಸರಗೋಡು: ನಿಶ್ಚಿತಾರ್ಥದ ಬಳಿಕ ವಧು ಮತ್ತು ವರ ಆತ್ಮಹತ್ಯೆ ಮಾಡಿಕೊಂಡ ಘಟನೆ ವರದಿಯಾಗಿದೆ. ಕಾಸರಗೋಡಿನ ಪೂಚಕಾಡ್‍ನ ಕಿಝಕ್ಕೇಕರ ಮೂಲದ ಪಿ. ಅನುಶ್ರೀ (25) ಮತ್ತು ಕಣ್ಣೂರಿನ ಇರಿಟ್ಟಿಯ ವಿಲಮನ ಅಂಬಲತ್ತುಟ್ ಮೂಲದ ಅಮಲ್ (27) ಆತ್ಮಹತ್ಯೆ ಮಾಡಿಕೊಂಡರು. ಇಬ್ಬರೂ ಬ್ಯಾಂಕ್ ಉದ್ಯೋಗಿಗಳು. ಅವರ ಮದುವೆ ಡಿಸೆಂಬರ್ 26 ರಂದು ನಿಗದಿಯಾಗಿತ್ತು. ಅನುಶ್ರೀ ಕರ್ನಾಟಕದ ಹುಣಸೂರಿನಲ್ಲಿರುವ ಎಸ್‍ಬಿಐನಲ್ಲಿ ಕೆಲಸ ಮಾಡುತ್ತಿದ್ದರು. ಯುವತಿ ಕರ್ನಾಟಕದ ತನ್ನ ನಿವಾಸದಲ್ಲಿ ಶವವಾಗಿ ಪತ್ತೆಯಾಗಿದ್ದಾಳೆ. ಯುವತಿ ವಿಡಿಯೋ ಕಾಲ್ ಮಾಡಿದ ನಂತರ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಬಳಿಕ ಆಕೆಯೊಂದಿಗೆ ವಿವಾಹ ನಿಶ್ಚಿತಾರ್ಥಗೈದಿದ್ದ ಅಮಲ್ ಆತ್ಮಹತ್ಯೆ ಮಾಡಿಕೊಂಡಿರುವನು. ಯುವಕ ಎರ್ನಾಕುಳಂ ನೋರ್ತ್ ರೈಲ್ವೆ ನಿಲ್ದಾಣದ ಬಳಿಯ ಹೋಟೆಲ್ ಕೋಣೆಯಲ್ಲಿ ಶವವಾಗಿ ಪತ್ತೆಯಾಗಿದ್ದಾನೆ. ಅವರ ಆತ್ಮಹತ್ಯೆಗೆ ಕಾರಣ ಸ್ಪಷ್ಟವಾಗಿಲ್ಲ. ಸಂಜೆ ಅನುಶ್ರೀ ಅವರ ಶವವನ್ನು ಅಂತ್ಯಸಂಸ್ಕಾರ ಮಾಡಲಾಯಿತು. 


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries