HEALTH TIPS

ಚಾಲಕನನ್ನು ಹೊರದಬ್ಬಿ ಕಾರು ಅಪಹರಣ-ದೂರು

ಕುಂಬಳೆ: ಕಾರು ತಡೆದು ನಿಲ್ಲಿಸಿ ಚಾಲಕನನ್ನು ಹೊರದಬ್ಬಿ,  ನಂತರ ಕಾರನ್ನು ಅಪಹರಣಗೈದ ಬಗ್ಗೆ ಕುಂಬಳೆ ಠಾಣೆ ಪೋಲೀಸರು ಕೇಸು ದಾಖಲಿಸಿಕೊಂಡಿದ್ದಾರೆ.  ಠಾಣಾ ವ್ಯಾಪ್ತಿಯ ಮೊಹಮ್ಮದ್ ಸಯ್ಯೀದ್ ಮುಸಮ್ಮಿಲ್ ಎಂಬವರು ನೀಡಿದ ದೂರಿನನ್ವಯ ಈ ಕೇಸು. ಕಾರನ್ನು ಚಟ್ಟಂಚಾಲ್ ಪ್ರದೇಶದಿಂದ ವಾರಸುದಾರರಿಲ್ಲದ ಸಥಿತಿಯಲ್ಲಿ ಪತ್ತೆಹಚ್ಚಲಾಗಿದೆ. 

ಮಂಗಳವಾರ ತಡರಾತ್ರಿ ಮೊಹಮ್ಮದ್ ಸಯ್ಯೀದ್ ಮುಸಮ್ಮಿಲ್ ಚಲಾಯಿಸುತ್ತಿದ್ದ ಟಾಟಾ ಟಿಯಾಗೋ ಇಲೆಕ್ಟ್ರಿಕ್ ಕಾರನ್ನು ಖಾದರ್ ಎಂಬ ವ್ಯಕ್ತಿ ಹಿಂಬಾಲಿಸಿದ್ದಾನೆ. ಬಳಿಕ ಸೀತಾಂಗೋಳಿಯಲ್ಲಿ ಕಾರನ್ನು ತಡೆದು ನಿಲ್ಲಿಸಿ ಚಾಲಕನನ್ನು ಹೊರದಬ್ಬಿದ ಬಳಿಕ ವ್ಯಕ್ತಿ ಕಾರನ್ನು ಅಪಹರಣಗೈದಿರುವುದಾಗಿ ದೂರಲಾಗಿದೆ. ಕಾರು ಚಟ್ಟಂಚಾಲ್ ತಲುಪಿದಾಗ ಕಾರಿನ ಚಾರ್ಜ್ ಖಾಲಿಯಾಗಿದ್ದು,  ಇದರಿಂದ ಕಾರನ್ನು ಅಲ್ಲೇ ಬಿಟ್ಟು ಆರೋಪಿ ಪರಾರಿಯಾಗಿರಬೇಕೆಂದು ಸಂಶಯಿಸಲಾಗಿದೆ.  



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries