HEALTH TIPS

ಸರ್ಕಾರದಿಂದ ತೈಲ ಸಂಸ್ಕರಣಾಗಾರಗಳಿಗೆ ಎಲ್‌ಪಿಜಿ ಉತ್ಪಾದನಾ ಗುರಿ ನಿಗದಿ

ನವದೆಹಲಿ: ಪಶ್ಚಿಮ ಏಷ್ಯಾ ಸಂಘರ್ಷದಿಂದ ಉಂಟಾದ ತೈಲ ಕೊರತೆಯಿಂದ ಆಮದು ಮಾಡಿಕೊಳ್ಳುವ ಅಡುಗೆ ಅನಿಲ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿತ್ತು. ಇದರಿಂದಾಗಿ, ದೇಶೀಯ ಪೂರೈಕೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಮುಂದಾಗಿದೆ. 


ಇದೇ ಮೊದಲ ಬಾರಿಗೆ ಸರ್ಕಾರವು, ಸಾರ್ವಜನಿಕ ಮತ್ತು ಖಾಸಗಿ ವಲಯದ ತೈಲ ಸಂಸ್ಕರಣಾ ಕಂಪನಿಗಳಿಗೆ ಗರಿಷ್ಠ ಅಡುಗೆ ಅನಿಲ (ಎಲ್‌ಪಿಜಿ) ಉತ್ಪಾದನಾ ಗುರಿಗಳನ್ನು ನಿಗದಿಪಡಿಸಿದೆ.

ಈ ಕುರಿತು ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯವು ಆಗಸ್ಟ್ 13ರಂದು ಅದೇಶ ಹೊರಡಿಸಿದೆ. ದೇಶದಲ್ಲಿನ 21 ತೈಲ ಸಂಸ್ಕರಣಾ ಕಂಪನಿಗಳಿಗೆ ಗರಿಷ್ಠ ಎಲ್‌ಪಿಜಿ ಉತ್ಪಾದನಾ ಮಟ್ಟವನ್ನು ನಿಗದಿಪಡಿಸಿದೆ. ಇವುಗಳ ಒಟ್ಟು ಉತ್ಪಾದನಾ ಸಾಮರ್ಥ್ಯವನ್ನು ದಿನಕ್ಕೆ 63,810 ಟನ್‌ಗಳಿಗೆ ನಿಗದಿಪಡಿಸಲಾಗಿದೆ. ಇದು ದೇಶದ ದೈನಂದಿನ ಬಳಕೆಯ ಶೇಕಡಾ 70ರಷ್ಟಿದೆ.

ತೈಲ ಪೂರೈಕೆಯಲ್ಲಿ ವ್ಯತ್ಯಯ ಅಥವಾ ಕೊರತೆ ಉಂಟಾದಾಗ ಈ ಉತ್ಪಾದನಾ ಪರಿಮಿತಿಗಳು ಜಾರಿಗೆ ಬರಲಿವೆ.

ಇದರಲ್ಲಿ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್‌ನ ತೈಲ ಸಂಸ್ಕರಣಾಗಾರಕ್ಕೆ ಗರಿಷ್ಠ ಕೋಟಾ ಲಭಿಸಿದೆ. ಈ ಘಟಕವು ದಿನಕ್ಕೆ 18,000 ಟನ್‌ಗಳಷ್ಟು ಎಲ್‌ಪಿಜಿಯನ್ನು ಉತ್ಪಾದಿಸಬೇಕಾಗುತ್ತದೆ. ನಯಾರಾ ಎನರ್ಜಿಯ ವಾಡಿನಾರ್ ಸಂಸ್ಕರಣಾಗಾರಕ್ಕೆ ದಿನಕ್ಕೆ 4,480 ಟನ್ ಉತ್ಪಾದಿಸಲು ಆದೇಶಿಸಲಾಗಿದೆ.

ಭಾರತವು 2025-26ರ ಹಣಕಾಸು ವರ್ಷದಲ್ಲಿ ದಿನಕ್ಕೆ ಸುಮಾರು 91,000 ಟನ್ ಎಲ್‌ಪಿಜಿ ಬಳಸಿದೆ. ಇದರಲ್ಲಿ ದಿನಕ್ಕೆ ಸುಮಾರು 35,900 ಟನ್ ಸ್ಥಳೀಯವಾಗಿ ಉತ್ಪಾದನೆಯಾಗಿದ್ದರೆ, ಬಾಕಿ ಸುಮಾರು 58,400 ಟನ್ ಆಮದು ಮಾಡಿಕೊಳ್ಳಲಾಗಿತ್ತು.

ಪಶ್ಚಿಮ ಏಷ್ಯಾ ಸಂಘರ್ಷದ ವೇಳೆ ಎಲ್‌ಪಿಜಿ ಉತ್ಪಾದನೆಯನ್ನು ದಿನಕ್ಕೆ ಸುಮಾರು 55,000 ಟನ್‌ಗಳಿಗೆ ಹೆಚ್ಚಿಸಲಾಗಿತ್ತು. ಆದರೆ ಜೂನ್ ಮಧ್ಯಭಾಗದಿಂದ ತೈಲ ಪೂರೈಕೆ ಸುಗಮಗೊಂಡ ನಂತರ ಉತ್ಪಾದನೆಯನ್ನು ಗರಿಷ್ಠಗೊಳಿಸಲು ಸಂಸ್ಕರಣಾಗಾರಗಳಿಗೆ ನೀಡಲಾಗಿದ್ದ ತುರ್ತು ಆದೇಶಗಳನ್ನು ಕ್ರಮೇಣ ಹಿಂಪಡೆಯಲಾಗಿತ್ತು.

ನಿರ್ದೇಶನಗಳನ್ನು ಹೊರಡಿಸಿದಾಗಲೆಲ್ಲಾ, ಕಂಪನಿಗಳು ನಿಗದಿಪಡಿಸಿದ ಕಾಲಮಿತಿಯೊಳಗೆ ಎಲ್‌ಪಿಜಿ ಉತ್ಪಾದನಾ ಮಟ್ಟವನ್ನು ಹೆಚ್ಚಿಸಬೇಕಾಗುತ್ತದೆ.








ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries