HEALTH TIPS

ಮಹಿಳಾ ಹಾಕಿ ವಿಶ್ವಕಪ್ ಗೆದ್ದ ಅರ್ಜೆಂಟೀನಾ

ಆಯಮ್‌ಸ್ಟಲ್‌ವೀನ್ (ನೆದರ್‌ಲ್ಯಾಂಡ್ಸ್): ಮಹಿಳೆಯರ ಎಫ್‌ಐಎಚ್ ಹಾಕಿ ವಿಶ್ವಕಪ್‌ನ ರೋಚಕ ಫೈನಲ್ ಪಂದ್ಯದಲ್ಲಿ ಶನಿವಾರ ಅರ್ಜೆಂಟೀನಾ ತಂಡವು ಪೆನಾಲ್ಟಿ ಶೂಟೌಟ್‌ನಲ್ಲಿ ಒಂಭತ್ತು ಬಾರಿಯ ಚಾಂಪಿಯನ್ ನೆದರ್‌ಲ್ಯಾಂಡ್ಸ್ ತಂಡವನ್ನು 3-1 ಗೋಲುಗಳ ಅಂತರದಿಂದ ಸೋಲಿಸಿದೆ.


ನಿಗದಿತ ಅವಧಿಯಲ್ಲಿ ಪಂದ್ಯವು 1-1ರ ಸಮಬಲದಲ್ಲಿ ಕೊನೆಗೊಂಡ ಬಳಿಕ ಶೂಟೌಟ್ ಅನಿವಾರ್ಯವಾಯಿತು.

ಇದರೊಂದಿಗೆ ಸತತ ನಾಲ್ಕು ಬಾರಿ ವಿಶ್ವಕಪ್ ಗೆಲ್ಲುವ ಸಹ-ಆತಿಥೇಯ ನೆದರ್‌ಲ್ಯಾಂಡ್ಸ್ ಕನಸು ಭಗ್ನಗೊಂಡಿತು.

ಈ ಗೆಲುವಿನ ಮೂಲಕ ಕಳೆದ ವಿಶ್ವಕಪ್ ಮತ್ತು ಟೋಕಿಯೊ ಒಲಿಂಪಿಕ್ಸ್ ಫೈನಲ್‌ನಲ್ಲಿ ಅನುಭವಿಸಿದ ಸೋಲಿಗೆ ಅರ್ಜೆಂಟೀನಾ ಸೇಡು ತೀರಿಸಿಕೊಂಡಿತು ಹಾಗೂ ತನ್ನ ಮೂರನೇ ವಿಶ್ವಕಪ್ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿತು.

ವಿಶ್ವದ ನಂಬರ್ ವನ್ ಡ್ರ್ಯಾಗ್-ಫ್ಲಿಕ್ಕರ್ ಎನಿಸಿಕೊಂಡಿರುವ ನೆದರ್‌ಲ್ಯಾಂಡ್ಸ್‌ನ ಯಿಬ್ಬೀ ಯಾನ್ಸನ್ 30ನೇ ನಿಮಿಷದಲ್ಲಿ ಮೊದಲ ಗೋಲು ದಾಖಲಿಸಿದರು. ಆ ಮೂಲಕ ನೆದರ್‌ಲ್ಯಾಂಡ್ಸ್ ಆರಂಭಿಕ ಮುನ್ನಡೆ ಪಡೆಯಿತು.

ಪಂದ್ಯದಲ್ಲಿ ಅರ್ಜೆಂಟೀನಾ ಒಟ್ಟು ಎಂಟು ಪೆನಾಲ್ಟಿ ಕಾರ್ನರ್‌ಗಳನ್ನು ಪಡೆಯಿತು. ಆ ಪೈಕಿ, 54ನೇ ನಿಮಿಷದಲ್ಲಿ ಸಿಕ್ಕ ಎಂಟನೇ ಪೆನಾಲ್ಟಿ ಕಾರ್ನರ್‌ನ್ನು ನಾಯಕಿ ಮಾರಿಯಾ ಗ್ರಾನಾಟೊ ರಿಬೌಂಡ್ ಮೂಲಕ ಗೋಲಾಗಿ ಪರಿವರ್ತಿಸಿದರು. ಇದರೊಂದಿಗೆ ಪಂದ್ಯವು ಸಮಬಲಗೊಂಡಿತು.

ಹಾಗಾಗಿ, ಫಲಿತಾಂಶ ನಿರ್ಣಯಕ್ಕಾಗಿ ಪೆನಾಲ್ಟಿ ಶೂಟೌಟ್‌ಗೆ ಅನಿವಾರ್ಯವಾಯಿತು.

ಪೆನಾಲ್ಟಿ ಶೂಟೌಟ್‌ನಲ್ಲಿ ನೆದರ್‌ಲ್ಯಾಂಡ್ಸ್ ಪರವಾಗಿ ಮಾರ್ಜಿನ್ ವೀನ್ ಗೋಲು ಗಳಿಸಿದರೆ, ಪಿಯೆನ್ ಸ್ಯಾಂಡರ್ಸ್ ಮತ್ತು ಫೆಲಿಸ್ ಆಲ್ಬರ್ಸ್ ಅವಕಾಶಗಳನ್ನು ಕೈಚೆಲ್ಲಿದರು.

ಅರ್ಜೆಂಟೀನಾ ಪರವಾಗಿ ವಿಕ್ಟೋರಿಯಾ ಗ್ರಾನಾಟೊ, ಬ್ರಿಸಾ ಬ್ರುಗ್ಗೆಸ್ಸರ್ ಮತ್ತು ಸೋಫಿಯಾ ಕೈರೊ ಗೋಲು ಗಳಿಸಿದರು. ಜೋಯ್ ಡಯಾಜ್ ಹೊಡೆದ ಗೋಲನ್ನು ಮರುಪರಿಶೀಲನೆಯ ನಂತರ ರದ್ದುಗೊಳಿಸಲಾಯಿತು.

ಅರ್ಜೆಂಟೀನ ಗೋಲ್‌ಕೀಪರ್ ಕ್ರಿಸ್ಟಿನಾ ಕೊಸೆಂಟಿನೊ ಎರಡು ಗೋಲುಗಳನ್ನು ತಡೆದು ತಂಡದ ಹೀರೊ ಆಗಿ ಹೊರಹೊಮ್ಮಿದರು.

ಹಿಂದೆ ಅರ್ಜೆಂಟೀನ 2002 ಮತ್ತು 2010ರಲ್ಲಿ ನೆದರ್‌ಲ್ಯಾಂಡ್ಸ್ ತಂಡವನ್ನು ಸೋಲಿಸಿ ಪ್ರಶಸ್ತಿಗಳನ್ನು ಗೆದ್ದಿತ್ತು. 2022ರ ವಿಶ್ವಕಪ್ ಫೈನಲ್‌ನಲ್ಲಿ ನೆದರ್‌ಲ್ಯಾಂಡ್ಸ್ ತಂಡವು ಅರ್ಜೆಂಟೀನಾವನ್ನು 3-1 ಗೋಲುಗಳಿಂದ ಸೋಲಿಸಿ ಪ್ರಶಸ್ತಿ ಜಯಿಸಿತ್ತು. ಟೋಕಿಯೊ ಒಲಿಂಪಿಕ್ಸ್‌ನ ಚಿನ್ನದ ಪದಕದ ಪಂದ್ಯದಲ್ಲೂ ನೆದರ್‌ಲ್ಯಾಂಡ್ಸ್ ತಂಡವು ಅರ್ಜೆಂಟೀನವನ್ನು ಸೋಲಿಸಿತ್ತು.







ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries