HEALTH TIPS

ಹೊರ್ಮುಜ್‌: ಶೀಘ್ರ ಒಪ್ಪಂದ ಸಾಧ್ಯತೆ-ಟ್ರಂಪ್

ಕೈರೊ: ಹೊರ್ಮುಜ್‌ ಜಲಸಂಧಿಯನ್ನು ಪುನಃ ತೆರೆಯುವ ಕುರಿತಂತೆ ಶೀಘ್ರ ಒಪ್ಪಂದ ಏರ್ಪಡುವ ಸಾಧ್ಯತೆ ಇದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಹೇಳಿದ್ದಾರೆ. 


ಮಂಗಳವಾರ ಕ್ಯಾಲಿಫೋರ್ನಿಯಾದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 'ಜಲಸಂಧಿಯನ್ನು ಮತ್ತೆ ತೆರೆಯುವ ಕುರಿತು ಬುಧವಾರ ಅಥವಾ ಮುಂದಿನ ವಾರ ಒಪ್ಪಂದ ಏರ್ಪಡುವ ಸಾಧ್ಯತೆ ಇದೆ. ಈ ವಿಚಾರದಲ್ಲಿ ಸಾಕಷ್ಟು ಪ್ರಗತಿ ಕಂಡುಬಂದಿದೆ' ಎಂದು ತಿಳಿಸಿದ್ದಾರೆ.

ಜಲಸಂಧಿಯನ್ನು ಮತ್ತೆ ತೆರೆಯುವ ಸಂಬಂಧ ಇರಾನ್‌ ಮತ್ತು ಒಮಾನ್‌ ನಡುವಣ ಒಪ್ಪಂದವು ಸನ್ನಿಹಿತವಾಗಿದೆ. ಹೀಗಾಗಿ ಇರಾನ್‌-ಅಮೆರಿಕ ನಡುವಣ ಯುದ್ಧವು ಶೀಘ್ರವೇ ಅಂತ್ಯಗೊಳ್ಳುವ ಸಾಧ್ಯತೆ ಇದೆ.

ಇರಾನ್‌ ಸರ್ಕಾರವನ್ನು ಉರುಳಿಸಿ, ಅದರ ಪರಮಾಣು ಕಾರ್ಯಕ್ರಮಕ್ಕೆ ಅಂತ್ಯ ಹಾಡುವುದು ಇಸ್ರೇಲ್‌ ಮತ್ತು ಅಮೆರಿಕದ ಯೋಜನೆಯಾಗಿತ್ತು. ಆದರೆ, ಹೊರ್ಮುಜ್‌ ಜಲಸಂಧಿಯ ನಿಯಂತ್ರಣ ವಿಚಾರವಾಗಿ ಇರಾನ್‌-ಅಮೆರಿಕ ಸಂಘರ್ಷಕ್ಕೆ ಇಳಿದಿವೆ. ಹೊರ್ಮುಜ್‌ ಜಲಸಂಧಿಯನ್ನು ಮುಚ್ಚಿರುವುದರಿಂದ ಇಂಧನ ಬೆಲೆ ಗಗನಕ್ಕೇರಿದೆ. ಜಾಗತಿಕವಾಗಿ ಆರ್ಥಿಕ ಬಿಕ್ಕಟ್ಟು ಸೃಷ್ಟಿಯಾಗಿದೆ. ಈ ವರ್ಷ ಅಮೆರಿಕ 'ಕಾಂಗ್ರೆಸ್‌'ನ ಮಧ್ಯಂತರ ಚುನಾವಣೆ ನಿಗದಿಯಾಗಿರುವುದರಿಂದ ಯುದ್ಧವನ್ನು ಅಂತ್ಯಗೊಳಿಸಲೇಬೇಕಾದ ಒತ್ತಡ ಟ್ರಂಪ್‌ ಅವರ ಮೇಲೆಯೂ ಇದೆ.

ಈ ಮಧ್ಯೆ ಇರಾನ್‌ ಬೆಂಬಲಿತ ಹೂಥಿ ಬಂಡುಕೋರರು, 'ಕೆಂಪು ಸಮುದ್ರದಲ್ಲಿ ಸೌದಿಯ ಇಂಧನ ಟ್ಯಾಂಕರ್‌ ಮೇಲೆ ಖಂಡಾಂತರ ಕ್ಷಿಪಣಿ ದಾಳಿ ನಡೆಸಿದ್ದೇವೆ' ಎಂದು ಹೇಳಿಕೊಂಡಿದ್ದಾರೆ. ಆದರೆ ದಾಳಿಯ ಕುರಿತಂತೆ ಯಾವುದೇ ಸಾಕ್ಷ್ಯವನ್ನು ಒದಗಿಸಿಲ್ಲ.

ಹಮಾಸ್ ನಿಶ್ಶಸ್ತ್ರಗೊಳ್ಳುವವರೆಗೆ ಹಿಂದೆ ಸರಿಯಲ್ಲ: ನೆತನ್ಯಾಹು

ದೀರ್‌ ಅಲ್‌-ಬಲಾಹ್‌ (ಎಪಿ): ಹಮಾಸ್ ಸಂಘಟನೆಯು ಸಂಪೂರ್ಣವಾಗಿ ನಿಶ್ಶಸ್ತ್ರಗೊಳ್ಳುವವರೆಗೆ ಗಾಜಾದಲ್ಲಿನ ತನ್ನ ಗಡಿ ರೇಖೆಗಳಿಂದ ಇಸ್ರೇಲ್ ಹಿಂದೆ ಸರಿಯುವುದಿಲ್ಲ ಎಂದು ಪ್ರಧಾನಿ ಬೆಂಜಮಿನ್ ನೆತನ್ಯಾಹು ಮಂಗಳವಾರ ಹೇಳಿದ್ದಾರೆ. ಇದೇ ಸಂದರ್ಭದಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇತ್ತೀಚೆಗೆ ಘೋಷಿಸಿದ ಒಪ್ಪಂದವನ್ನು ಅವರು ತಿರಸ್ಕರಿಸಿದ್ದಾರೆ. 'ಹಮಾಸ್‌ ನಿಶ್ಶಸ್ತ್ರಗೊಳ್ಳುವವರೆಗೆ ನಮ್ಮ ನಿಲುವು ಬದಲಾಗುವುದಿಲ್ಲ. ದೇಶ ಗಡಿ ಮತ್ತು ನಾಗರಿಕರ ರಕ್ಷಣೆಗಾಗಿ ಏನು ಮಾಡಬಹುದೋ ಅದನ್ನು ಇಸ್ರೇಲ್‌ ಸೇನೆ ಮಾಡಲಿದೆ' ಎಂದು ಅವರು ಒತ್ತಿ ಹೇಳಿದ್ದಾರೆ. 'ಟ್ರಂಪ್‌ ಸರ್ಕಾರವು ಒಪ್ಪಂದದ ಕರಡು ಪ್ರತಿಯನ್ನು ಕಳುಹಿಸಿತ್ತು. ನಾವು ಅದಕ್ಕೆ ಒಪ್ಪಿಕೊಂಡಿಲ್ಲ. ಅದು ನಮ್ಮ ಕರಡು ಅಲ್ಲ. ನಮ್ಮ ಪ್ರತಿಕ್ರಿಯೆಯನ್ನು ಕಳುಹಿಸಿದ್ದೇವೆ. ಇದೇ ನಮ್ಮ ನಿಲುವು' ಎಂದು ಸಾಮಾಜಿಕ ಜಾಲತಾಣದಲ್ಲಿ ನೆತನ್ಯಾಹು ಅವರು ವಿಡಿಯೊವನ್ನು ಪೋಸ್ಟ್‌ ಮಾಡಿದ್ದಾರೆ. ಹಮಾಸ್‌ ಸಂಘಟನೆಯು ನಿಶ್ಶಸ್ತ್ರಗೊಳ್ಳಬೇಕು. ಇದಕ್ಕೆ ಪ್ರತಿಯಾಗಿ ಇಸ್ರೇಲ್ ದಾಳಿಯನ್ನು ನಿಲ್ಲಿಸಲಿದೆ ಮತ್ತು ಅದರ ನಿಯಂತ್ರಣದಲ್ಲಿರುವ ಗಾಜಾದ ಶೇ 60ರಷ್ಟು ಪ್ರದೇಶಗಳಿಂದ ಸೇನೆಯನ್ನು ವಾಪಸ್‌ ಕರೆಸಿಕೊಳ್ಳಲಿದೆ ಎಂದು ಒಪ್ಪಂದ ಮಾಡಿಕೊಳ್ಳಲಾಗಿತ್ತು. 








ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries