ಕಾಸರಗೋಡು: ರೋಟರಿ ಕ್ಲಬ್ ಕಾಸರಗೋಡು ವತಿಯಿಂದ ಓಣಂ ಹಬ್ಬದ ಅಂಗವಾಗಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಕಾಸರಗೋಡು ಜನರಲ್ ಆಸ್ಪತ್ರೆಯ ಹಿರಿಯ ವೈದ್ಯ ಡಾ.ಜನಾರ್ದನ ನಾಯ್ಕ್ ಅವರು ಮಾವೇಲಿ ವೇಷ ಧರಿಸುವಮೂಲಕ ಜನಮೆಚ್ಚುಗೆಗೆ ಪಾತ್ರರಾದರು. ವೈದ್ಯರಾಗಿದ್ದೂ, ಸಾಮಾಜಿಕ, ಸಾಂಸ್ಕøತಿಕ, ಯಕ್ಷಗಾನ ಕಲಾ ಕ್ಷೇತ್ರದಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವ ಇವರು ಇದೇ ಮೊದಲ ಬಾರಿಗೆ ಮಾವೇಲಿ ವೇಷಧಾರಿಯಾಗಿ ಮಿಂಚಿದ್ದಾರೆ.


