HEALTH TIPS

ನಿರ್ಮಾಣ ವಲಯದ ಕಾರ್ಮಿಕರ (ಸಿಐಟಿಯು) ರಾಜ್ಯ ಸಮ್ಮೇಳನ ಆರಂಭ

ಕಾಸರಗೋಡು: ನಿರ್ಮಾಣ ವಲಯದ ಕಾರ್ಮಿಕರ ಪ್ರಬಲ ಸಂಘಟನೆ 'ಕನ್ಸ್ಟ್ರಕ್ಷನ್ ವರ್ಕರ್ಸ್ ಫೆಡರೇಷನ್' (ಸಿಐಟಿಯು)ನ ರಾಜ್ಯ ಸಮ್ಮೇಳನ ಕಾಸರಗೋಡಿನ ಜೀವಾಸ್ ಮಾನಸ ಸಭಾಂಗಣದಲ್ಲಿರುವ 'ಶೀಲಾ ಅಲೆಕ್ಸ್ - ಕೆ. ಬಾಲಕೃಷ್ಣನ್ ನಗರ'ದಲ್ಲಿ ಭಾನುವಾರ ಆರಂಭಗೊಂಡಿತು. 


ರಾಜ್ಯ ಅಧ್ಯಕ್ಷ ಯು.ಪಿ. ಜೋಸೆಫ್ ಅವರು ಧ್ವಜಾರೋಹಣ ನೆರವೇರಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಸಿಐಟಿಯು ಅಖಿಲ ಭಾರತ ಪ್ರಧಾನ ಕಾರ್ಯದರ್ಶಿ ಎಳಮರ ಕರೀಂ ಸಮಾರಂಭ ಉದ್ಘಾಟಿಸಿದರು. ಯು.ಪಿ. ಜೋಸೆಫ್ ಅಧ್ಯಕ್ಷತೆ ವಹಿಸಿದ್ದರು. 

ಪಿ.ಪಿ. ಪವನನ್ ಹುತಾತ್ಮರಿಗೆ ಗೌರವ ಸಲ್ಲಿಸುವ ಹಾಗೂ ವಿ.ಪಿ. ಜಕಾರಿಯಾ ಸಂತಾಪ ಸೂಚಕ ನಿರ್ಣಯವನ್ನು ಮಂಡಿಸಿದರು. ಫೆಡರೇಶನ್‍ನ ಕರ್ನಾಟಕ ರಾಜ್ಯ ಕಾರ್ಯದರ್ಶಿ ಮಹಂತೇಶ್, ತಮಿಳುನಾಡು ರಾಜ್ಯ ಕಾರ್ಯದರ್ಶಿ ಕುಮಾರ್, ಸಿಐಟಿಯು ರಾಜ್ಯ ಕಾರ್ಯದರ್ಶಿ ಕೆ. ಮನೋಹರನ್, ಸಿ.ಎಚ್. ಕುಞಂಬು ಮತ್ತು ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪಿ. ಮಣಿಮೋಹನ್ ಅವರು ಉಪಸ್ಥಿತರಿದ್ದರು.  

ಸಂಘಟನಾ ಸಮಿತಿ ಅಧ್ಯಕ್ಷ ಟಿ.ಕೆ. ರಾಜನ್ ಸ್ವಾಗತಿಸಿದರು. ಒಕ್ಕೂಟದ ರಾಜ್ಯ ಕಾರ್ಯದರ್ಶಿ ಪಿ.ಕೆ. ಮುಕುಂದನ್ ಚಟುವಟಿಕೆಗಳ ವರದಿ,  ಟಿ.ಕೆ. ಅಚ್ಯುತನ್ ಅವರು ಲೆಕ್ಕಪತ್ರ ಮಂಡಿಸಿದರು.  ನಿರ್ಣಯ ಸಮಿತಿಯಲ್ಲಿ ವಿ.ಪಿ. ಜಕರಿಯಾ (ಸಂಯೋಜಕರು), ಎಂ. ಗಿರೀಶ್, ಲತಾ ಚಂದ್ರನ್, ಕೆ.ವಿ. ಮನೋಜ್, ಎಸ್. ಹರಿದಾಸ್, ಎಸ್.ಎ. ಸುಂದರ್, ಎನ್.ಪಿ. ವಿನಾಯಕಮಾರ್; ಸಭೆಯ ನಡವಳಿಕೆಗಳ ದಾಖಲಾತಿಯಲ್ಲಿ ಪಿ.ಪಿ. ಪವನನ್.ವಿ.ಕೆ. ಸುರೇಶ್‍ಕುಮಾರ್, ಸಿ. ಸಂತೋಷ್ ಮತ್ತು ಸಿ.ಜಿ. ಗೀತಾ  ಅವರನ್ನೊಳಗೊಂಡ ಉಪಸಮಿತಿ ಕಾರ್ಯನಿರ್ವಹಿಸುತ್ತಿದೆ.  

ಸಮ್ಮೇಳನದಲ್ಲಿ 14 ಜಿಲ್ಲೆಗಳಿಂದ ಒಟ್ಟು 419 ಪ್ರತಿನಿಧಿಗಳು ಭಾಗವಹಿಸುತ್ತಿದ್ದಾರೆ. ಸಾಮಾನ್ಯ ಚರ್ಚೆಗೆ ಉತ್ತರ ಮತ್ತು ಪದಾಧಿಕಾರಿಗಳ ಆಯ್ಕೆಯೊಂದಿಗೆ ಸಮ್ಮೇಳನ ಆ.17ರಂದು ಸಮಾರೋಪಗೊಳ್ಳಲಿದೆ.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries